5 ಮಂದಿ ಹಿಂದೂಗಳಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕಳೆದ 2 ದಿನಗಳಲ್ಲಿ 4 ನಗರಗಳಲ್ಲಿ ಹಿಂದೂಗಳ 6 ಮನೆಗಳಿಗೆ ಬೆಂಕಿ ಹಾಕಲಾಗಿದೆ. ಝಲಕಾತಿ, ಲಕ್ಷ್ಮೀಪುರ, ಸಿಲಹಟ್ ಮತ್ತು ಚಿತ್ತಗಾಂಗ್ ಎಂಬ ನಾಲ್ಕು ನಗರಗಳಲ್ಲಿ ನಡೆದ ವಿವಿಧ ಘಟನೆಗಳಲ್ಲಿ 5 ಹಿಂದೂಗಳು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಾಂಗ್ಲಾದೇಶದಲ್ಲಿ ಒಂದೇ ತಿಂಗಳಿನಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ 13 ಘಟನೆಗಳು ವರದಿಯಾಗಿವೆ.
1. ಝಲಕಾತಿಯ ಸಂತ್ರಸ್ತ ಬಿಜೋಯ್ ಅವರು ಮಾತನಾಡಿ,”ಹೊರಗೆ ಹೋದರೆ ದಾಳಿಯ ಭಯವಂತೂ ಇದ್ದೇ ಇದೆ; ಆದರೆ ಈಗ ನಾವು ಹಿಂದೂಗಳು ನಮ್ಮ ಸ್ವಂತ ಮನೆಗಳಲ್ಲೂ ಸುರಕ್ಷಿತವಾಗಿಲ್ಲ. ನಾವು ಎಲ್ಲಿಗೆ ಹೋಗಬೇಕು? ಕಳೆದ ಸುಮಾರು ಒಂದೂವರೆ ವರ್ಷದಿಂದ ನಮ್ಮ ಪ್ರತಿ ದಿನವೂ ಭಯದ ನೆರಳಿನಲ್ಲೇ ಕಳೆಯುತ್ತಿದೆ.” ಎಂದು ತಮ್ಮ ನೋವನ್ನು ತೋಡಿಕೊಂಡರು.
2. ಲಕ್ಷ್ಮೀಪುರದ ಮಿತಾಲಿ ಅವರು ಮಾತನಾಡಿ, “ನಿನ್ನೆ ರಾತ್ರಿ ಹಠಾತ್ ಶಬ್ದದಿಂದಾಗಿ ನಿದ್ರೆ ಭಂಗವಾಯಿತು. ಹೊರಗೆ ಮುಸ್ಲಿಂ ಯುವಕರ ಗುಂಪು ನಿಂತಿತ್ತು. ಮಕ್ಕಳು ಹೆದರಿ ಅಳತೊಡಗಿದರು. ಆ ಗುಂಪು ಮನೆಗಳಿಗೆ ಬೆಂಕಿ ಹಚ್ಚಿತು. ನಾವು ತಕ್ಷಣ ಮನೆಯಿಂದ ಹೊರಗೆ ಓಡಿ ಬಂದೆವು. ಈಗ ತಲೆ ಚಾಚಲು ಕೂಡ ಜಾಗ ಉಳಿದಿಲ್ಲ. ಸಾಮಾನನ್ನು ತೆಗೆದುಕೊಂಡು ನಾವು ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದೇವೆ.”
3. ಸಿಲಹಟ್‌ನ ವ್ಯಾಪಾರಿ ಪ್ರಸನ್ನಜಿತ್ ಅವರು, “ಪೊಲೀಸರು ಮತ್ತು ಆಡಳಿತ ಮಂಡಳಿ ನಮ್ಮ ದೂರನ್ನು ದಾಖಲಿಸಿಕೊಳ್ಳಲು ಸಹ ಸಿದ್ಧರಿಲ್ಲ. ಮನೆ ಸುಟ್ಟು ಹೋದ ನಂತರ ಸರಕಾರ ನಮಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ.”ಎಂದು ಬೇಸರ ವ್ಯಕತಪಡಿಸಿದರು.
ಭಾರತದ ಮೃದು ಪ್ರತಿಕ್ರಿಯೆ!ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಮಾತನಾಡಿ, “ಬಾಂಗ್ಲಾದೇಶದ ಮಧ್ಯಂತರ ಸರಕಾರವು ಹಿಂಸಾಚಾರವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದರು. |
ಸಂಪಾದಕೀಯ ನಿಲುವುಬಾಂಗ್ಲಾದೇಶದ ಹಿಂದೂ ಅಳಿಯುವವರೆಗೆ ಇಂತಹ ಸುದ್ಧಿಗಳನ್ನು ಓದುತ್ತಲೇ ಇರಬೇಕಾಗುತ್ತದೆ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !