
ಶ್ರೀನಗರ (ಜಮ್ಮು-ಕಾಶ್ಮೀರ): ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವ ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸುವುದು ಮತ್ತು ಕಣಿವೆಯ ಮಸೀದಿಗಳ ಮೇಲೆ ಪೊಲೀಸರು ನಡೆಸುತ್ತಿರುವ ಪರಿಶೀಲನೆಯಿಂದಾಗಿ ವಿವಾದ ಉಂಟಾಗಿದೆ. ಜಮ್ಮು-ಕಾಶ್ಮೀರ ಪೊಲೀಸರು ಇಡೀ ಕಣಿವೆಯಲ್ಲಿ ಮಸೀದಿಗಳು ಮತ್ತು ಧಾರ್ಮಿಕ ಪದಾಧಿಕಾರಿಗಳ ವಿವರವಾದ ಮಾಹಿತಿಯನ್ನು ಸಂಗ್ರಹಿಸಲು ಅಭಿಯಾನವೊಂದನ್ನು ಪ್ರಾರಂಭಿಸಿದ್ದಾರೆ. ವೈಯಕ್ತಿಕ, ಆರ್ಥಿಕ ಮತ್ತು ವೈಚಾರಿಕ ಸ್ವರೂಪದ ಮಾಹಿತಿಯನ್ನು ಪಡೆಯಲಾಗುತ್ತಿದೆ. ಪೊಲೀಸರ ಈ ಕ್ರಮಕ್ಕೆ ಮೌಲ್ವಿಗಳು, ರಾಜಕೀಯ ನಾಯಕರು ಮತ್ತು ಸಾಮಾಜಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಯಾವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ?
೧. ಜಮ್ಮು-ಕಾಶ್ಮೀರ ಪೊಲೀಸರು ಮಸೀದಿಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಕಣಿವೆಯಲ್ಲಿ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಅನೇಕ ಮಸೀದಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಜನರಿಗೆ ೪ ಪುಟಗಳ ಅರ್ಜಿಯನ್ನು ನೀಡಲಾಗಿದೆ. ಒಂದು ಪುಟದಲ್ಲಿ ಮಸೀದಿಯ ಬಗ್ಗೆ ಮಾಹಿತಿ ಕೇಳಲಾಗಿದ್ದು, ಉಳಿದ ೩ ಪುಟಗಳಲ್ಲಿ ಮಸೀದಿಯ ವ್ಯವಸ್ಥಾಪನೆ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದ ವ್ಯಕ್ತಿಗಳ ವಿವರಗಳನ್ನು ಕೇಳಲಾಗಿದೆ.
೨. ಮಸೀದಿಗೆ ಸಂಬಂಧಿಸಿದ ಪಂಥ, ಆಸನ ಸಾಮರ್ಥ್ಯ, ಭೌತಿಕ ರಚನೆ, ನಿರ್ಮಾಣ ವೆಚ್ಚ, ಮಾಸಿಕ ವೆಚ್ಚ, ನಿಧಿಯ ಮೂಲಗಳು, ಭೂಮಿಯ ಮಾಲೀಕತ್ವ ಮತ್ತು ನಿರ್ವಹಣಾ ಸಮಿತಿಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ಉಳಿದ ಪುಟಗಳಲ್ಲಿ ಇಮಾಮ್ (ಪ್ರಾರ್ಥನೆ ಮಾಡಿಸುವವರು), ಮುಅಝ್ಝಿನ್ (ಅಜಾನ್ ಮೂಲಕ ಮಸೀದಿಗೆ ಕರೆಯುವವರು), ಖತೀಬ್ (ಶುಕ್ರವಾರ ಮಧ್ಯಾಹ್ನದ ಸಮಾಜದ ನಂತರ ಮಾರ್ಗದರ್ಶನ ನೀಡುವವರು), ಮಸೀದಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ‘ಬೈತ್ ಉಲ್ ಮಾಲ್’ (ಇಸ್ಲಾಂ ರಾಜ್ಯದ ಸಾರ್ವಜನಿಕ ಖಜಾನೆ, ಇಸ್ಲಾಮಿಗಾಗಿ ಖರ್ಚಾಗುವ ಹಣ ) ಹುದ್ದೆಗಳಲ್ಲಿರುವವರ ವೈಯಕ್ತಿಕ ಮಾಹಿತಿಯನ್ನು ಕೇಳಲಾಗಿದೆ. ಆಧಾರ್, ಪಾನ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ಸಂಖ್ಯೆಗಳ ಜೊತೆಗೆ ಬ್ಯಾಂಕ್ ಖಾತೆ ಮಾಹಿತಿ, ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನೂ ಸಹ ನೀಡುವಂತೆ ಸೂಚಿಸಲಾಗಿದೆ.
೩. ಮಸೀದಿಗೆ ಸಂಬಂಧಿಸಿದ ವ್ಯಕ್ತಿಗಳ ಮೊಬೈಲ್ ಫೋನ್ ಮಾಡೆಲ್, ಐಎಂಇಐ ಸಂಖ್ಯೆ,(ಅಂತರಾಷ್ಟ್ರೀಯ ಮೊಬೈಲ್ ಗುರುತಿನ ಕ್ರಮಾಂಕ) ಸಾಮಾಜಿಕ ಮಾಧ್ಯಮಗಳ ಖಾತೆಗಳು, ಪ್ರಯಾಣದ ಇತಿಹಾಸ, ಆದಾಯ ಮತ್ತು ವೆಚ್ಚ, ಆಸ್ತಿಯ ಮಾಲೀಕತ್ವ ಹಾಗೂ ವಿದೇಶದಲ್ಲಿ ವಾಸಿಸುತ್ತಿರುವ ಸಂಬಂಧಿಕರ ಮಾಹಿತಿಯನ್ನೂ ಸಹ ಕೇಳಲಾಗಿದೆ.
೪. ಕುಟುಂಬದ ಸದಸ್ಯರ ಮಾಹಿತಿಯನ್ನೂ ಕೇಳಲಾಗಿದ್ದು, ತಾಯಿ, ತಂದೆ, ಸಹೋದರರು, ಸಹೋದರಿಯರು ಮತ್ತು ಮಕ್ಕಳ ವಿವರಗಳು ನೀಡುವಂತೆ ಆದೇಶಿಸಲಾಗಿದೆ. ಇದರೊಂದಿಗೆ, ಈ ಹಿಂದೆ ಭಯೋತ್ಪಾದಕ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅದರ ಮಾಹಿತಿಯನ್ನು ನೀಡುವುದು ಸಹ ಕಡ್ಡಾಯವಾಗಿದೆ. ಮಸೀದಿಗಳಿಗೆ ಸಂಬಂಧಿಸಿದ ವ್ಯಕ್ತಿಗಳ ವೈಚಾರಿಕ ಹಿನ್ನೆಲೆಯ ಬಗ್ಗೆಯೂ ಮಾಹಿತಿ ನೀಡಲು ಸೂಚಿಸಲಾಗಿದೆ.
ಮೆಹಬೂಬಾ ಮುಫ್ತಿ ಅವರಿಂದ ತೀವ್ರ ಟೀಕೆ
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸರಕಾರದ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಮಸೀದಿಗಳ ಮಾಹಿತಿ ಸಂಗ್ರಹಿಸುವ ಹೊಸ ಆದೇಶವು ನಮ್ಮ ಧರ್ಮದಲ್ಲಿನ ನೇರ ಹಸ್ತಕ್ಷೇಪವಾಗಿದೆ. ಸರಕಾರವು ದೇವಾಲಯಗಳಲ್ಲೂ ಇಂತಹದ್ದೇ ಅಭಿಯಾನವನ್ನು ನಡೆಸಲಿ; ಯಾವ ಗುಂಪು ಯಾವ ದೇವಸ್ಥಾನಕ್ಕೆ ಹೋಗಬೇಕು ಎಂಬುದನ್ನು ನಿರ್ಧರಿಸಲಿ, ಏಕೆಂದರೆ ಬೇರೆ ಗುಂಪಿನ ದೇವಸ್ಥಾನಕ್ಕೆ ಹೋದರೆ ದಲಿತ ಮಕ್ಕಳ ಮೇಲೆ ಹಲ್ಲೆ ನಡೆಯುತ್ತದೆ. ಮಸೀದಿಗಳ ಮಾಹಿತಿ ಸಂಗ್ರಹಿಸುವುದು ಮುಸ್ಲಿಮರನ್ನು ಮಸೀದಿಗಳಿಂದ ದೂರವಿಡುವ ಬಹಿರಂಗ ಬೆದರಿಕೆಯಾಗಿದೆ” ಇಮಾಮ್ ರ ಛಾಯಾಚಿತ್ರ, ಆಧಾರ್ ಕಾರ್ಡ್ ಮತ್ತು ವೈಯಕ್ತಿಕ ಮಾಹಿತಿ ಸಂಗ್ರಹಿಸುವುದು ಮುಸಲ್ಮಾನರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಪ್ರಯತ್ನಪೂರ್ವಕವಾಗಿ ಮಾಡಲಾಗುತ್ತಿದೆ, ಎಂದು ಅವರು ಆರೋಪಿಸಿದ್ದಾರೆ.
ಧಾರ್ಮಿಕ ಸಂಘಟನೆಗಳ ಆತಂಕ
‘ಮುತ್ತಹಿದಾ ಐಮಾ ಫೋರಂ’ ಅಧ್ಯಕ್ಷ ಮಕ್ತೂಬ್ ಮೀರ್‌ವೈಜ್ ಹಸನ್ ಫಿರ್ದೌಸಿ ಅವರು ಈ ಬಗ್ಗೆ ಮಾತನಾಡಿ, “ಈ ಪ್ರಕ್ರಿಯೆಯು ಮೂಲಭೂತ ಹಕ್ಕುಗಳು, ಗೌಪ್ಯತೆ ಮತ್ತು ವೈಯಕ್ತಿಕ ಮಾಹಿತಿಯ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಮಸೀದಿಗಳು ಆರಾಧನೆ ಮತ್ತು ಸಮಾಜ ಸೇವೆಯ ಪವಿತ್ರ ಸ್ಥಳಗಳಾಗಿವೆ. ಅಲ್ಲಿನ ಧಾರ್ಮಿಕ ವಿಷಯಗಳಲ್ಲಿ ಅನಗತ್ಯ ಮೇಲ್ವಿಚಾರಣೆ ಮತ್ತು ಹಸ್ತಕ್ಷೇಪ ನಡೆಸಬಾರದು. ಕೇಳಲಾಗುತ್ತಿರುವ ಮಾಹಿತಿಯು ಸಾಮಾನ್ಯ ಆಡಳಿತಾತ್ಮಕ ಅಗತ್ಯಕ್ಕಿಂತಲೂ ಬಹಳ ಹೆಚ್ಚಾಗಿದೆ. ಇದು ಈ ಪ್ರಕ್ರಿಯೆಯ ಉದ್ದೇಶದ ಮೇಲೆ ಗಂಭೀರ ಪ್ರಶ್ನೆಗಳನ್ನು ಮೂಡಿಸುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಸಂಪಾದಕೀಯ ನಿಲುವುಈ ರೀತಿಯ ಮಾಹಿತಿಯನ್ನು ದೇಶದ ಪ್ರತಿಯೊಂದು ಮಸೀದಿ, ಮದರಸಾ ಮತ್ತು ಮುಸ್ಲಿಂ ಸಂಘಟನೆಗಳ ಬಗ್ಗೆಯೂ ಸಂಗ್ರಹಿಸಬೇಕು! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”