|
ಶ್ರೀಹರಿಕೋಟಾ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ‘ಪಿ.ಎಸ್.ಎಲ್.ವಿ. ಧ್ರುವೀಯ ಉಪಗ್ರಹ ಉಡಾವಣಾ ವಾಹನ – ಸಿ 62’ ರ ಉಡಾವಣೆಯು ತಾಂತ್ರಿಕ ದೋಷದಿಂದಾಗಿ ವಿಫಲಗೊಂಡಿತು. ಉಡಾವಣೆಯ ನಂತರದ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ, ಉಪಗ್ರಹವನ್ನು ಅದರ ನಿಗದಿತ ಕಕ್ಷೆಗೆ ಸೇರಿಸಲು ಸಾಧ್ಯವಾಗಲಿಲ್ಲ.
1. ಪಿ.ಎಸ್.ಎಲ್.ವಿ. ರಾಕೆಟ್ ಮೂಲಕ ‘ಅನ್ವೇಷಾ’ ಉಪಗ್ರಹ ಮತ್ತು ಇತರ 14 ಉಪಗ್ರಹಗಳನ್ನು (7 ಭಾರತೀಯ ಮತ್ತು 8 ವಿದೇಶಿ ಉಪಗ್ರಹಗಳು) ಉಡಾವಣೆ ಮಾಡುವ ಯೋಜನೆಯಿತ್ತು. ‘ಅನ್ವೇಷಾ’ ಒಂದು ಭೂ-ವೀಕ್ಷಣಾ ಉಪಗ್ರಹವಾಗಿದ್ದು, ಇದನ್ನು ಭೂಮಿಯಿಂದ ಸುಮಾರು 600 ಕಿಲೋಮೀಟರ್ ಎತ್ತರದ ಸೂರ್ಯ-ಸಮಕಾಲಿಕ ಕಕ್ಷೆಯಲ್ಲಿ ಸ್ಥಾಪಿಸಲು ಯೋಜಿಸಲಾಗಿತ್ತು. ಇದೊಂದು ಗುಪ್ತಚರ ಉಪಗ್ರಹವಾಗಿದ್ದು, ಇದು ನಿಖರ ಮೇಲ್ವಿಚಾರಣೆ ಮತ್ತು ಮ್ಯಾಪಿಂಗ್‌ಗಾಗಿ ಸುಧಾರಿತ ಇಮೇಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದು ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿದ್ದರೂ ಸಹ ಪೊದೆಗಳು, ಕಾಡುಗಳು ಅಥವಾ ಬಂಕರ್‌ಗಳಲ್ಲಿ ಅಡಗಿರುವ ಶತ್ರುಗಳ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.
2. ಈ ಯೋಜನೆಯನ್ನು ಇಸ್ರೋದ ವಾಣಿಜ್ಯ ವಿಭಾಗವಾದ ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್’ ನಿರ್ವಹಿಸುತ್ತಿತ್ತು. ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಈ ಯೋಜನೆಯು ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗಿತ್ತು, ಏಕೆಂದರೆ ಇದೇ ಮೊದಲ ಬಾರಿಗೆ ಭಾರತದ ಖಾಸಗಿ ಸಂಸ್ಥೆಯೊಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿತ್ತು.

ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ