‘(ಇನ್ ಫ್ಲೂವೆನ್ಸರ್ಸ್)’ ಎಂದರೆ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ಮೇಲೆ ಪ್ರಭಾವ ಬೀರುವವರು)

ಪ್ರಯಾಗರಾಜ್ (ಉತ್ತರ ಪ್ರದೇಶ) – ಇಲ್ಲಿ ಮಾಘ ಮೇಳ ಪ್ರಾರಂಭವಾಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಸಾಮಾಜಿಕ ಜಾಲತಾಣದ ಪ್ರಭಾವಿಗಳು (ಇನ್ಫ್ಲುಎನ್ಸರ್ಸ್) ವಿಡಿಯೋಗಳನ್ನು ಮಾಡುತ್ತಿದ್ದಾರೆ. ಕೆಲವು ಜನರು ಸಕಾರಾತ್ಮಕ ಮತ್ತು ಮಾಹಿತಿಪೂರ್ಣ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದಾರೆ; ಆದರೆ, ಕೆಲವು ಜನರು ಹೆಚ್ಚು ಹಣ ಗಳಿಸುವ ದುರಾಸೆಯಿಂದ ದಾರಿ ತಪ್ಪಿಸುವ ಮತ್ತು ಆಕ್ಷೇಪಾರ್ಹ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇಂತಹ ಒಂದು ಪ್ರಕರಣದಲ್ಲಿ ಸಾಧು-ಸಂತರನ್ನು ಹೀನಾಯವಾಗಿ ನಿಂದಿಸುವಂತಹ ವಿಡಿಯೋಗಳನ್ನು ಪ್ರಸಾರ ಮಾಡಿದ ೨ ಸಾಮಾಜಿಕ ಜಾಲತಾಣದ ಪ್ರಭಾವಿಗಳನ್ನು ಸೈಬರ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
೧. ಸೈಬರ್ ಪೊಲೀಸ್ ಠಾಣೆಯ ಮುಖ್ಯಸ್ಥ ಓಂ ನಾರಾಯಣ್ ಗೌತಮ್ ಅವರು ಮಾಹಿತಿ ನೀಡಿ, ಸಿಕಂದರಾ ಬಹರಿಯಾದ ನಿವಾಸಿ ಪ್ರದೀಪ್ ಸಾಹು ಎಂಬಾತನು ಬಿಹಾರದ ಮಧೇಪುರಾ ಜಿಲ್ಲೆಯ ಚಂದನ್ ಕುಮಾರ್ ಎಂಬಾತನ ಸಹಾಯದಿಂದ ಮಾಘ ಮೇಳದಲ್ಲಿ ಸಾಧು-ಸಂತರನ್ನು ಹೀನಾಯವಾಗಿ ನಿಂದಿಸುವ ವಿಡಿಯೋ ಮಾಡಿದ್ದನು ಎಂದು ಹೇಳಿದ್ದಾರೆ.
೨. ಚಂದನ್ ಕುಮಾರನು ಸಾಧು-ಸಂತರ ಬಳಿಗೆ ಹೋಗಿ ತಿಲಕ ಹಚ್ಚುವ ನೆಪದಲ್ಲಿ ಅವರೊಂದಿಗೆ ಸಂಭಾಷಣೆ ನಡೆಸಿದ್ದನು. ಈ ಚಿತ್ರೀಕರಣದಲ್ಲಿ, ಪ್ರದೀಪ್ ಸಾಹು ಒಬ್ಬ ಸಾಧುವಿಗೆ ಗಾಯತ್ರಿ ಮಂತ್ರ ಹೇಳುವಂತೆ ಹೇಳುತ್ತಾನೆ, ಆಗ ಆ ಸಾಧುವಿಗೆ ಅದನ್ನು ಹೇಳಲು ಸಾಧ್ಯವಾಗುವುದಿಲ್ಲ. ಆನಂತರ ಅವನು ಆ ಸಾಧುವಿನ ಬಳಿ ಗುರುತಿನ ಚೀಟಿ ಕೇಳುತ್ತಾನೆ; ಆದರೆ ಅದನ್ನು ನೀಡಲು ಸಾಧು ನಿರಾಕರಿಸುತ್ತಾನೆ ಮತ್ತು ನಂತರ ಓಡಿಹೋಗಲು ಪ್ರಯತ್ನಿಸುತ್ತಾನೆ. ಮಾಘ ಮೇಳದಲ್ಲಿ ಸಾಧು-ಸಂತರ ವರ್ಚಸ್ಸಿಗೆ ಧಕ್ಕೆ ಆಗಬೇಕು, ಎಂಬ ರೀತಿಯಲ್ಲಿ ಈ ಎಲ್ಲ ಚಿತ್ರೀಕರಣವನ್ನು ಮಾಡಲಾಗಿತ್ತು.
೩. ಪೊಲೀಸ್ ಅಧಿಕಾರಿ ಕುಲದೀಪ್ ಸಿಂಗ್ ಗುಣಾವತ್ ಅವರ ಪ್ರಕಾರ, ಪ್ರದೀಪ್ ಸಾಹು ಈ ವಿಡಿಯೋವನ್ನು ತನ್ನ ಸಾಮಾಜಿಕ ಮಾಧ್ಯಮದ ಖಾತೆಯಿಂದ ಪ್ರಸಾರ ಮಾಡಿದನು. ಒಂದೇ ದಿನದಲ್ಲಿ ಈ ವಿಡಿಯೋವನ್ನು ೬0 ಲಕ್ಷ ವೀಕ್ಷಕರು ವೀಕ್ಷಿಸಿದರು. ‘ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾದರೆ ಸ್ವಂತದ ಜನಪ್ರಿಯತೆ ಹೆಚ್ಚಬಹುದು. ಹಾಗೆ ಆದರೆ, ಮಾಘ ಮೇಳಕ್ಕೆ ಸಂಬಂಧಿಸಿದ ಡೇರೆಗಳು, ನಿವಾಸಸ್ಥಳಗಳು ಮತ್ತು ಇತರ ವ್ಯಾಪಾರಿಗಳು ತಮ್ಮ ಜಾಹೀರಾತುಗಳಿಗಾಗಿ ತನ್ನನ್ನು ಕರೆಯಬಹುದು ಮತ್ತು ಆ ಮೂಲಕ ಉತ್ತಮವಾಗಿ ಆದಾಯ ಬರುತ್ತದೆ, ಎಂದು ಸಾಹುವಿಗೆ ಅನಿಸಿತ್ತು’ ಎಂದು ಗುಣಾವತ್ ಹೇಳಿದ್ದಾರೆ.
ಸಂಪಾದಕೀಯ ನಿಲುವುಸ್ವಂತ ದ ಸ್ವಾರ್ಥಕ್ಕಾಗಿ ಸಾಧು-ಸಂತರ ವರ್ಚಸ್ಸಿಗೆ ಧಕ್ಕೆ ತರುವ ಇಂತಹವರಿಗೆ ಕಠಿಣ ಶಿಕ್ಷೆಯಾಗುವುದು ಅವಶ್ಯಕ! ಇಂತಹ ಜನರು ಎಂದಾದರೂ ಭ್ರಷ್ಟ ಪಾದ್ರಿ ಅಥವಾ ಮೌಲಾನಾ ಅವರ ಚಿತ್ರೀಕರಿಸಿ ಅವರ ವರ್ಚಸ್ಸಿಗೆ ಧಕ್ಕೆ ತರುತ್ತಾರೆಯೇ ? |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!