
೧. ಸಾಧಕನು ಮುಂಜಾನೆ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗೆ ಕಾಲು ಒರೆಸುವ ಬಟ್ಟೆಯ ಮೇಲೆ ತಲೆ ಇಟ್ಟು ನಮಸ್ಕರಿಸುವಾಗ ಪರಾತ್ಪರ ಗುರು ಡಾಕ್ಟರರು ಕೋಣೆಯ ಹೊರಗೆ ಬಂದು ಅವರು ಸಾಧಕನ ಕಡೆಗೆ ನೋಡಿ ಮುಗುಳ್ನಗುವುದು
‘೨೦೦೪ ರಲ್ಲಿ ಮಿರಜ ಆಶ್ರಮದಲ್ಲಿ ಓರ್ವ ಸಾಧಕನು ನಿಯಮಿತವಾಗಿ ದೈನಿಕ ‘ಸನಾತನ ಪ್ರಭಾತ’ವನ್ನು ಮುದ್ರಿಸಲು ಮುದ್ರಣಾಲಯದ ಸೇವೆಗೆ ಹೋಗುತ್ತಿದ್ದನು. ಆ ಸಾಧಕನು ಮುದ್ರಣಾಲಯದ ಸೇವೆಯನ್ನು ಮಾಡಿ ಬಂದ ನಂತರ ಮುಂಜಾನೆ ೪ ಗಂಟೆಗೆ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಬಾಗಿಲಿಗೆ ದೈನಿಕ ‘ಸನಾತನ ಪ್ರಭಾತ’ವನ್ನು ಇಟ್ಟು ಮಲಗಲು ಹೋಗುತ್ತಿದ್ದನು. ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗೆ ಇಟ್ಟಿರುವ ಕಾಲು ಒರೆಸುವ ಬಟ್ಟೆಯನ್ನು (ಮ್ಯಾಟ್) ನೋಡಿ ಅವನ ಮನಸ್ಸಿನಲ್ಲಿ, ‘ಪರಾತ್ಪರ ಗುರು ಡಾಕ್ಟರರ ಚರಣಗಳು ಇದಕ್ಕೆ ಪ್ರತಿದಿನ ತಾಗುತ್ತವೆ, ಇದಕ್ಕೆಷ್ಟು ಅದೃಷ್ಟವಿದೆ?’, ಎಂಬ ವಿಚಾರ ಮಾಡಿ ಆ ಸಾಧಕನು ಆ ಮ್ಯಾಟ್ ಮೇಲೆ ತಲೆ ಇಡಲು ಬಾಗಿದನು ಮತ್ತು ಅಷ್ಟರಲ್ಲಿ ಆ ಕೋಣೆಯ ಬಾಗಿಲು ತೆರೆಯಿತು ಮತ್ತು ಪರಾತ್ಪರ ಗುರು ಡಾಕ್ಟರರು ಹೊರಗೆ ಬಂದರು. ಅವರ ಮುಖದ ಮೇಲೆ ಮಂದಹಾಸವಿತ್ತು. ಅದನ್ನು ನೋಡಿ ಆ ಸಾಧಕನಿಗೆ ಅತ್ಯಂತ ಆನಂದವಾಯಿತು. ಅವನು ನಮಸ್ಕಾರ ಮಾಡಿದ ನಂತರ ಪರಾತ್ಪರ ಗುರು ಡಾಕ್ಟರರು ಪುನಃ ಕೋಣೆಯ ಒಳಗೆ ಹೋದರು.
೨. ಸಾಧಕನು ಪ್ರತಿದಿನ ಮಾನಸಪೂಜೆಯನ್ನು ಮಾಡುವಾಗ ಸೂಕ್ಷ್ಮದಿಂದ ರಾಮನಾಥಿ ಆಶ್ರಮಕ್ಕೆ ಬರುವುದು ಮತ್ತು ಆ ಸಾಧಕನು ಆಶ್ರಮದಲ್ಲಿ ಕಾಣಿಸುತ್ತಾನೆ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದು
೨೦೦೮ ರಲ್ಲಿ ಓರ್ವ ಸಾಧಕನು ತನ್ನ ಮನೆಯಲ್ಲಿರುವಾಗ ಪ್ರತಿದಿನ ಮುಂಜಾನೆ ಎದ್ದು ನಾಮಜಪ ಮತ್ತು ಮಾನಸಪೂಜೆ ಮಾಡುತ್ತಿದ್ದನು. ಮಾನಸಪೂಜೆಯನ್ನು ಮಾಡುವಾಗ ಮಾನಸ ರೀತಿಯಲ್ಲಿ ಅವನು ರಾಮನಾಥಿ ಆಶ್ರಮಕ್ಕೆ ಬರುತ್ತಿದ್ದನು. ಒಂದು ದಿನ ಆ ಸಾಧಕನ ಸಹ ಸಾಧಕನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೆಲವು ಸೇವೆಯ ನಿಮಿತ್ತ ಭೇಟಿಯಾದನು ಆಗ ಪರಾತ್ಪರ ಗುರು ಡಾ. ಆಠವಲೆಯವರು ಆ ಸಾಧಕನ ಹೆಸರನ್ನು ಉಲ್ಲೇಖಿಸಿ ಅವನಿಗೆ, ”ಅರೆ, ಅವನು ಆಶ್ರಮಕ್ಕೆ ಬಂದಿದ್ದಾನೆಯೇ ? ಅವನು ನನಗೆ ಪ್ರತಿದಿನ ಕಾಣಿಸುತ್ತಾನೆ,?’ ಎಂದು ಹೇಳಿದರು. ಅದನ್ನು ಕೇಳಿ ಆ ಸಾಧಕನಿಗೆ, ಅವನು ಆಶ್ರಮದಲ್ಲಿ ಬಂದಿರಬಹುದು; ಎಂದು ಅವನು ಆ ಸಾಧಕನಿಗೆ ಸಂಚಾರಿವಾಣಿಕರೆಯನ್ನು ಮಾಡಿದನು. ಆಗ ಅವನಿಗೆ, ಅವನು ಮನೆಯಲ್ಲಿಯೇ ಇದ್ದಾನೆ ಮತ್ತು ಪ್ರತಿದಿನ ಮಾನಸಪೂಜೆಯನ್ನು ಮಾಡುವಾಗ ಆಶ್ರಮಕ್ಕೆ ಬಂದು ಹೋಗುತ್ತಾನೆ,’ ಎಂದು ತಿಳಿಯಿತು.
– ಸೌ. ಶ್ರದ್ಧಾ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೪.೨೦೨೫)
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !