ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಭಾರತದ ನೇತೃತ್ವದ ವಿಶೇಷ ಅವಶ್ಯಕತೆಯಿದೆ ! – SriLankan MP Namal Rajapaksa

ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸೆ ಅವರ ಹೇಳಿಕೆ

ನಮಲ್ ರಾಜಪಕ್ಸೆ

ಕೊಲೊಂಬೊ (ಶ್ರೀಲಂಕಾ) – ದಕ್ಷಿಣ ಏಷ್ಯಾದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭಾರತದ ವಿಶೇಷ ನೇತೃತ್ವ ಅವಶ್ಯಕತೆಯಿದೆ ಎಂದು ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸೆ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬದಲಾಗುತ್ತಿರುವ ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆಯ ಸವಾಲುಗಳ ಹಿನ್ನೆಲೆಯಲ್ಲಿ, ದಕ್ಷಿಣ ಏಷ್ಯಾದಲ್ಲಿ ಬಲವಾದ ಪ್ರಾದೇಶಿಕ ಸಹಕಾರದ ಹೆಚ್ಚುತ್ತಿರುವ ಮತ್ತು ತುರ್ತು ಅವಶ್ಯಕತೆಯಿದೆ ಎಂದು ಅವರು ನಮೂದಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಲ್ಲದು ಎಂದೂ ಅವರು ತಿಳಿಸಿದ್ದಾರೆ.

ಈ ಹೇಳಿಕೆಯು ದಕ್ಷಿಣ ಏಷ್ಯಾ ಸೇರಿದಂತೆ ಇಡೀ ಜಗತ್ತು ಅಸ್ಥಿರತೆಯ ಹಂತದ ಮೂಲಕ ಹಾದುಹೋಗುತ್ತಿರುವ ಸಮಯದಲ್ಲಿ ಹೊರಬಂದಿದೆ.

ಜಾಗತಿಕ ದಕ್ಷಿಣದಲ್ಲಿ ಭಾರತದ ನೇತೃತ್ವ ಕೇಂದ್ರಸ್ಥಾನದಲ್ಲಿದೆ

ರಾಜಪಕ್ಸೆ ಅವರು, ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ಈ ದೇಶಗಳು ರಾಜಕೀಯ ಅಸ್ಥಿರತೆಯ ಹಂತಗಳನ್ನು ಅನುಭವಿಸಿವೆ. ಈ ಸಮಯದಲ್ಲಿ ಅನೇಕ ಬಾರಿ ಸಂಭವಿಸಿದ ಗೊಂದಲಗಳಿಗೆ ತೀವ್ರಗಾಮಿ ವಿಚಾರಧಾರೆಯ ಘಟಕಗಳು ಬೆಂಬಲ ನೀಡಿದವು. ಇಂತಹ ಪರಿಸ್ಥಿತಿಯಲ್ಲಿ ಈ ಸವಾಲುಗಳನ್ನು ಎದುರಿಸಲು, ಭಯೋತ್ಪಾದನೆಯನ್ನು ಎದುರಿಸಲು, ರಾಜಕೀಯ ಹಿಂಸಾಚಾರವನ್ನು ತಡೆಯಲು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆಗಾಗಿ ಸಾಮೂಹಿಕ ಬದ್ಧತೆಯು ಅವಶ್ಯಕವಾಗಿದೆ.

ದಕ್ಷಿಣ ಏಷ್ಯಾದಲ್ಲಿ ದೀರ್ಘಕಾಲದ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ಪ್ರಾದೇಶಿಕ ಏಕತೆಯು ಅತ್ಯಂತ ಮಹತ್ವದ್ದಾಗಿದ್ದು, ಈ ಸಂದರ್ಭದಲ್ಲಿ ಭಾರತದ ನೇತೃತ್ವವು ಕೇಂದ್ರಸ್ಥಾನದಲ್ಲಿದೆ ಎಂಬ ಅಂಶದ ಮೇಲೆ ಅವರು ಒತ್ತು ನೀಡಿದರು. ಭಾರತೀಯ ನೇತೃತ್ವದ ಅಡಿಯಲ್ಲಿ ಅಭಿವೃದ್ಧಿ ಮತ್ತು ಸ್ಥಿರತೆಯ ಮೇಲೆ ಆಧಾರಿತವಾದ ಸಮಾನ ಉದ್ದೇಶಗಳೊಂದಿಗೆ ದಕ್ಷಿಣ ಏಷ್ಯಾವು ಒಟ್ಟಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿ ಪಾತ್ರವನ್ನು ವಹಿಸಬಲ್ಲದು ಎಂದು ಅವರು ನಮೂದಿಸಿದರು. ಬಾಂಗ್ಲಾದೇಶ ಮತ್ತು ನೇಪಾಳದ ಮುಂಬರುವ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆದರೆ ಪ್ರಜಾಪ್ರಭುತ್ವದ ಮಾನ್ಯತೆಯು ದೃಢವಾಗುತ್ತದೆ ಮತ್ತು ಅದರಿಂದ ಪ್ರಾದೇಶಿಕ ಭದ್ರತೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಈ ನಿರೀಕ್ಷೆಗೆ ಅರ್ಹವಾಗಿದೆ! ಮುಂಬರುವ ಕಾಲದಲ್ಲಿ ಭಾರತವು ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿ ಮತ್ತು ಸುಸಜ್ಜಿತವಾಗಿದ್ದರೆ, ಅದು ಕೇವಲ ದಕ್ಷಿಣ ಏಷ್ಯಾವಷ್ಟೇ ಅಲ್ಲ, ಇಡೀ ಜಗತ್ತಿನ ನೇತೃತ್ವವನ್ನು ವಹಿಸುವುದು ಖಚಿತ ! ಅದಕ್ಕಾಗಿ ಭಾರತದ ಆಡಳಿತಗಾರರು ಈಗಿನಿಂದಲೇ ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಂಡು ಅದರಂತೆ ಹೆಜ್ಜೆ ಇಡುವುದು ಅವಶ್ಯಕ !