ಮೆಕ್ಸಿಕೋ ಮಹಿಳಾ ಅಧ್ಯಕ್ಷರ ವಿರೋಧ

ವಾಷಿಂಗ್ಟನ್ (ಅಮೆರಿಕ) – “ಮೆಕ್ಸಿಕೋ ಮೇಲೆ ‘ಡ್ರಗ್ ಕಾರ್ಟೆಲ್’ (ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವ ಗ್ಯಾಂಗ್)ಗಳ ಆಡಳಿತ ನಡೆಯುತ್ತಿದೆ. ಈ ಗ್ಯಾಂಗ್‌ಗಳು ಅಮೆರಿಕದಲ್ಲಿ ಪ್ರತಿ ವರ್ಷ ಎರಡೂವರೆಯಿಂದ ಮೂರು ಲಕ್ಷ ಜನರ ಸಾವಿಗೆ ಕಾರಣವಾಗುತ್ತಿವೆ. ಸಮುದ್ರ ಮಾರ್ಗದ ಮೂಲಕ ನಡೆಯುವ ಮಾದಕ ವಸ್ತುಗಳ ಸಾಗಾಟವನ್ನು ಶೇ. 97 ರಷ್ಟು ತಡೆಯಲಾಗಿದೆ, ಆದ್ದರಿಂದ ಈಗ ಭೂಮಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು,” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ಟ್ರಂಪ್ ಅವರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. “ಮೆಕ್ಸಿಕೋ ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಮೆಕ್ಸಿಕೋ ಒಂದು ಸ್ವತಂತ್ರ ಮತ್ತು ಸಾರ್ವಭೌಮ ದೇಶವಾಗಿದೆ. ಇಲ್ಲಿ ಸಹಕಾರ ನೀಡಬಹುದೇ ಹೊರತು, ಹಸ್ತಕ್ಷೇಪಕ್ಕಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 2025 ರಲ್ಲಿ ಟ್ರಂಪ್ ಅವರು, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯನ್ನು ತಡೆಯಲು ಮೆಕ್ಸಿಕೋಗೆ ಅಮೆರಿಕದ ಸೈನ್ಯ ಮತ್ತು ಗುಪ್ತಚರ ಅಧಿಕಾರಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದರು.
ಮೆಕ್ಸಿಕೋದಿಂದ ಅಮೆರಿಕಕ್ಕೆ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ!
ಮೆಕ್ಸಿಕೋ ವಿಶ್ವದ ಅತಿದೊಡ್ಡ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಜಾಲದ (ನೆಟ್‌ವರ್ಕ್) ಕೇಂದ್ರವೆಂದು ಪರಿಗಣಿಸಲಾಗಿದೆ. ಇಲ್ಲಿಂದ ಕೋಕೇನ್, ಹೆರಾಯಿನ್, ಮೆಥ್ ಮತ್ತು ಫೆಂಟಾನಿಲ್‌ನಂತಹ ಅತ್ಯಂತ ಅಪಾಯಕಾರಿ ಮಾದಕ ವಸ್ತುಗಳು ಅಮೆರಿಕವನ್ನು ತಲುಪುತ್ತವೆ. ಅಮೆರಿಕವು ಮಾದಕ ವಸ್ತುಗಳಿಗಾಗಿ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದೆ.
ಪ್ರತಿ ವರ್ಷ ಲಕ್ಷಾಂತರ ಜನರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಮತ್ತು ಫೆಂಟಾನಿಲ್‌ನಂತಹ ಔಷಧಗಳಿಂದ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಈ ಕಳ್ಳ ಸಾಗಾಣಿಕೆ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಅಮೇರಿಕಾ ಸರಕಾರದ ಮೇಲೆ ಸತತ ಒತ್ತಡ ಇರುತ್ತದೆ ಮತ್ತು ಇದೇ ಕಾರಣಕ್ಕಾಗಿ ಅವರ ಗುರಿ ಮೆಕ್ಸಿಕೋದಲ್ಲಿನ ಕಳ್ಳಸಾಗಾಣಿಕೆಯ ಗ್ಯಾಂಗ್‌ಗಳ ಮೇಲೆ ಇದೆ.
ಈ ಗ್ಯಾಂಗಗಳು ಎಷ್ಟು ಶಕ್ತಿಶಾಲಿಯಾಗಿವೆ ಎಂದರೆ, ಅನೇಕ ಭಾಗಗಳಲ್ಲಿ ಅವು ಪೊಲೀಸರು ಮತ್ತು ಸರಕಾರಕ್ಕೇ ಸವಾಲು ಹಾಕುತ್ತಿವೆ. ಸಶಸ್ತ್ರ ಪಡೆಗಳು, ಬೆದರಿಕೆಗಳು, ಭ್ರಷ್ಟಾಚಾರ ಮತ್ತು ಹಿಂಸಾಚಾರದ ಕಾರಣದಿಂದಾಗಿ ಸ್ಥಳೀಯ ಆಡಳಿತಕ್ಕೂ ಇವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಗ್ಯಾಂಗ್‌ಗಳಂತೂ ತಮ್ಮನ್ನು ತಾವು ‘ಶ್ಯಾಡೋ ಗವರ್ನಮೆಂಟ್’ (ಸಮಾಂತರ ಸರಕಾರ) ಎಂದು ಕರೆದುಕೊಳ್ಳುತ್ತಿವೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !