
ಬೀಜಿಂಗ್ (ಚೀನಾ) – ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಚೀನಾ ಒತ್ತಾಯಿಸಿದೆ. ಈ ರೀತಿಯಲ್ಲಿ ಮತ್ತೊಂದು ದೇಶದ ಅಧ್ಯಕ್ಷರನ್ನು ಬಂಧಿಸಿ ತನ್ನ ದೇಶಕ್ಕೆ ಕರೆದೊಯ್ಯುವುದು ತಪ್ಪು ಎಂದು ಚೀನಾದ ವಿದೇಶಾಂಗ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಚೀನಾ ಹೇಳಿದೆ.
🌍🔥 US–Venezuela Tensions Escalate
🇨🇳 China demands the immediate release of President Maduro amid rising global unrest.
🇷🇺 What if Putin arrests Zelenskyy? – asks US Representative Ro Khanna, highlighting dangerous global precedents.
⚖️🚨 “A violation of international & US… https://t.co/ANuGFG4b6G pic.twitter.com/Xxh0S90viw
— Sanatan Prabhat (@SanatanPrabhat) January 4, 2026
ಅಂತರಾಷ್ಟ್ರೀಯ ಮತ್ತು ಅಮೆರಿಕದ ಕಾನೂನಿನ ಉಲ್ಲಂಘನೆ! – ನ್ಯೂಯಾರ್ಕ್ ಮೇಯರ್ ಮಮದಾನಿ
ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮದಾನಿ ಅವರು ಕೂಡ ಮಡುರೊ ಅವರ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ‘ಯುದ್ಧದ ಕ್ರಮ’ ಎಂದು ಕರೆದಿರುವ ಅವರು, ಈ ನಡೆಯು ಅಂತರರಾಷ್ಟ್ರೀಯ ಮತ್ತು ಅಮೆರಿಕದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ವೆನೆಜುವೆಲಾದ ಬದಲಾಗುತ್ತಿರುವ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ ಭಾರತ !
ವೆನೆಜುವೆಲಾದ ಜನರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಭಾರತವು ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಅಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ಎಲ್ಲಾ ಪಕ್ಷಗಳು ಸಂವಾದ ಮತ್ತು ಶಾಂತಿಯುತ ಮಾರ್ಗಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಭಾರತ ಮನವಿ ಮಾಡಿದೆ. ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತ ಸರಕಾರವು ವೆನೆಜುವೆಲಾದಲ್ಲಿನ ಬದಲಾಗುತ್ತಿರುವ ವಿದ್ಯಮಾನಗಳನ್ನು ಹತ್ತಿರದಿಂದ ಗಮನಿಸುತ್ತಿದೆ. ಕರಾಕಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಅಲ್ಲಿ ವಾಸಿಸುವ ಭಾರತೀಯ ನಾಗರಿಕರೊಂದಿಗೆ ಸಂಪರ್ಕದಲ್ಲಿದೆ ಮತ್ತು ಅಗತ್ಯವಿದ್ದರೆ ಎಲ್ಲಾ ರೀತಿಯ ಸಹಾಯವನ್ನು ನೀಡಲಿದೆ.
ಒಂದು ವೇಳೆ ಪುಟಿನ್ ಅವರು ಝೆಲೆನ್ಸ್ಕಿ ಅವರನ್ನು ಬಂಧಿಸಿದರೆ ಏನಾಗಬಹುದು? – ಅಮೆರಿಕ ಸಂಸದ ರೋ ಖನ್ನಾ
ಅಮೆರಿಕದ ಭಾರತೀಯ ಮೂಲದ ಡೆಮಾಕ್ರಟಿಕ್ ಪಕ್ಷದ ಸಂಸದ ರೋ ಖನ್ನಾ ಅವರು ಕೂಡ ಟ್ರಂಪ್ ಅವರ ಈ ಮಿಲಿಟರಿ ಕ್ರಮವನ್ನು ಟೀಕಿಸಿದ್ದಾರೆ. “ಒಂದು ವೇಳೆ ಪುಟಿನ್ ಇದೇ ರೀತಿಯಲ್ಲಿ ಝೆಲೆನ್ಸ್ಕಿ ಅವರನ್ನು ಬಂಧಿಸಿದರೆ ಏನಾಗಬಹುದು?” ಎಂದು ಅವರು ಪ್ರಶ್ನಿಸಿದ್ದಾರೆ. ಇದು ಜಗತ್ತಿಗೆ ಒಂದು ಅಪಾಯಕಾರಿ ಉದಾಹರಣೆಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ