ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡುವ ಪ್ರಯತ್ನ. ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?,’ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?,’ ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?’, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರ ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ೨೭/೧೫ ರ ಸಂಚಿಕೆಯಲ್ಲಿ ‘ಹೇಗೆ ಕೇಳಬಾರದು ?’ ಮತ್ತು ‘ಹೇಗೆ ಕೇಳಬೇಕು ?’ ಎಂಬುದರ ಕುರಿತು ಅರಿತುಕೊಂಡೆವು. ಈ ವಾರದ ಲೇಖನದಲ್ಲಿ ನಾವು ಕೇಳಿ ಕೃತಿ ಮಾಡುವುದರ ಲಾಭವನ್ನು ತಿಳಿದುಕೊಳ್ಳೋಣ.
(ಲೇಖನ ೬)

೧೦. ವಿಚಾರಿಸಿ ಕೃತಿ ಮಾಡುವುದರ ಲಾಭ !
‘ವಿಚಾರಿಸಿ ಕೃತಿ ಮಾಡುವುದು’ ಇದು ಸಾಧಕತ್ವದಲ್ಲಿನ ಒಂದು ಅತ್ಯಂತ ಮಹತ್ವದ ಘಟಕವಾಗಿದೆ ಎಂಬುದನ್ನು ಸಾಧಕರು ಯಾವಾಗಲೂ ಗಮನದಲ್ಲಿಡಬೇಕು; ಏಕೆಂದರೆ ಈ ಮಾರ್ಗದಲ್ಲಿ ತಪ್ಪಿದರೆ ಅದರ ಪರಿಣಾಮ ಸೂಕ್ಷ್ಮ ಸ್ತರದಲ್ಲಿ ಮತ್ತು ಆಳವಾಗಿ ಆಗುತ್ತದೆ, ‘ಅದು ಹೇಗೆ ? ಮತ್ತು ವಿಚಾರಿಸಿ ಕೃತಿ ಮಾಡುವುದರ ಲಾಭವೇನು ? ಅದನ್ನು ಈಗ ತಿಳಿದುಕೊಳ್ಳೋಣ. ಅದರಿಂದ ವಿಚಾರಿಸಿ ಕೃತಿ ಮಾಡುವುದರ ಮಹತ್ವ ನಮ್ಮ ಅಂತರ್ಮನಸ್ಸಿನಲ್ಲಿ ಒಂದೊಮ್ಮೆ ಬಿಂಬಿಸಿದರೆ ಮತ್ತು ಅದರ ಪ್ರಕಾರ ಕೃತಿ ಮಾಡುವುದಕ್ಕೆ, ಈ ಗುಣ ಆಚರಣೆಯಲ್ಲಿ ತರಲು ನಮಗೆ ಸಹಾಯವಾಗುವುದು.
ದೇವತೆಗಳ ಉದಾಹರಣೆಯಿಂದ ಸ್ಫೂರ್ತಿ ಪಡೆದು ವಿಚಾರಿಸುವ ವೃತ್ತಿ ಬೆಳೆಸಿಕೊಳ್ಳಿ !ವೇದಗಳು, ಪುರಾಣಗಳು ಮತ್ತು ಋಷಿಮುನಿಗಳು ಬರೆದ ಗ್ರಂಥಗಳಲ್ಲಿನ ಕಥೆಗಳಿಂದ, ದೇವತೆಗಳು ಸಹ ವಿಶ್ವದಲ್ಲಿನ ತೊಂದರೆಗಳನ್ನು ಎದುರಿಸಬೇಕಾಯಿತು ಎಂಬುದು ನಮಗೆ ತಿಳಿದುಬರುತ್ತದೆ. ವಿಶ್ವದಲ್ಲಿ ಯಾವುದೇ ಸಂಕಷ್ಟ ಬಂದಾಗ, ದೇವತೆಗಳು ಮತ್ತು ಋಷಿಮುನಿಗಳು ಸ್ವತಃ ತಮ್ಮ ಮನಸ್ಸಿನಿಂದ ಏನನ್ನೂ ನಿರ್ಧರಿಸದೆ, ಜಗನ್ನಿಯಾಮಕನಾದ ಶ್ರೀವಿಷ್ಣುವಿನ ಬಳಿಗೆ ಹೋಗಿ ಆ ಸಂಕಟಕ್ಕೆ ಪರಿಹಾರವನ್ನು ಕೇಳಿದರು. ದೇವತೆಗಳೂ ತಮಗಿಂತ ಉನ್ನತ ಸ್ಥಿತಿಯಲ್ಲಿರುವ ದೇವತೆಗಳ ಬಳಿ ಪರಿಹಾರೋಪಾಯಗಳನ್ನು ವಿಚಾರಿಸುತ್ತಾರೆ. ಹಾಗಾದರೆ, ನಾವೆಷ್ಟು ಸಾಮಾನ್ಯ ಜೀವಗಳು ! ನಾವು ವಿಚಾರಿಸಿ ಕೃತಿ ಮಾಡುವುದು ಎಷ್ಟು ಮುಖ್ಯ ! ‘ವಿಚಾರಿಸುವುದರಿಂದಲೇ ಪರಿಹಾರೋಪಾಯದ ಬಾಗಿಲು ನಮಗೆ ತೆರೆಯುತ್ತದೆ’ ಎಂಬುದನ್ನು ದೇವತೆಗಳಂತಹ ದಿವ್ಯ ಶಕ್ತಿಗಳ ನಮ್ರತೆಯು ನಮಗೆ ಕಲಿಸುತ್ತದೆ. ವಿಚಾರಿಸುವ ವೃತ್ತಿಯು ನಮ್ಮ ಜೀವನ, ಸಾಧನೆ ಮತ್ತು ಮೋಕ್ಷಕ್ಕಾಗಿಯೂ ಅತ್ಯಂತ ಅವಶ್ಯಕವಾಗಿದೆ; ಆದ್ದರಿಂದಲೇ, ಸಾಧಕರು ದೇವತೆಗಳ ಉದಾಹರಣೆಗಳಿಂದ ಸ್ಫೂರ್ತಿ ಪಡೆದು ತಮ್ಮಲ್ಲಿ ವಿಚಾರಿಸುವ ವೃತ್ತಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. |
೧೦ ಅ. ಕೃತಿಯ ಸ್ತರದ ಲಾಭಗಳು
೧೦ ಅ ೧. ಯೋಗ್ಯ ಮಾರ್ಗದರ್ಶನ ದೊರೆಯುತ್ತದೆ : ಬಹಳಷ್ಟು ಬಾರಿ ನಮಗೆ ಯಾವುದಾದರೂ ಹೊಸದಾದ ಕೃತಿ, ಸೇವೆ ಅಥವಾ ಸಾಧನೆಯ ಹೊಸ ಪ್ರಯತ್ನ ಮಾಡಲು ಉತ್ಸಾಹ ಇರುತ್ತದೆ, ಆದರೆ ಯೋಗ್ಯ ದಿಶೆ ಇರುವುದಿಲ್ಲ. ಆಗ ಗುರು ಅಥವಾ ಅವರ ಸಮಷ್ಟಿ ರೂಪ ಎಂದರೆ ಸಾಧಕರೇ – ನಮ್ಮ ನಿಜವಾದ ಮಾರ್ಗದರ್ಶಕರಾಗುತ್ತಾರೆ. ಅವರಲ್ಲಿ ವಿಚಾರಿಸುವುದರಿಂದ ಆಗ ನಮ್ಮ ಕೃತಿಗೆ ಯೋಗ್ಯ ದಿಶೆ ಸಿಗುತ್ತದೆ. ಇಲ್ಲದಿದ್ದರೆ ನಾವು ಸುಮ್ಮನೆ ಚಡಪಡಿಸುತ್ತೇವೆ, ತಪ್ಪುತ್ತೇವೆ, ಆಯಾಸಗೊಳ್ಳುತ್ತೇವೆ. ಆದರೆ ವಿಚಾರಿಸಿ ಕೃತಿ ಮಾಡುವುದರಿಂದ ನಮಗೆ ಪ್ರತಿಯೊಂದು ವಿಷಯಕ್ಕಾಗಿ ಯೋಗ್ಯ ಮಾರ್ಗದರ್ಶನ ದೊರೆಯುತ್ತದೆ ಮತ್ತು ಸಾಧನೆಯಲ್ಲಿನ ಮಾರ್ಗ ಸುಗಮವಾಗುತ್ತದೆ.
೧೦ ಅ ೨. ಕೃತಿಯಲ್ಲಿ ಸ್ಪಷ್ಟತೆ ಬರುತ್ತದೆ : ಸೇವೆಯ ಅಥವಾ ಸಾಧನೆಯ ಯಾವುದಾದರೂ ಪ್ರಯತ್ನ ಮಾಡುವಾಗ ಇದನ್ನು ಮಾಡಲೋ, ಬೇಡವೋ ? ಹೀಗೆ ಮಾಡಿದರೆ ಯೋಗ್ಯವೋ ಅಥವಾ ಅಯೋಗ್ಯವೋ ? ಹೀಗೆ ಮನಸ್ಸಿನಲ್ಲಿ ಗೊಂದಲ ಇಟ್ಟು ಕೃತಿ ಮಾಡಿದರೆ ಅದರ ಫಲ ಕೂಡ ದೊರೆಯುವುದಿಲ್ಲ. ಆದರೆ ವಿಚಾರಿಸಿ ಮಾಡುವುದರಿಂದ ಆ ಕೃತಿಯಲ್ಲಿ ಸ್ಪಷ್ಟತೆ ಇರುತ್ತದೆ ಕೃತಿಯಲ್ಲಿನ ಸ್ಪಷ್ಟತೆಯಿಂದ ನಾವು ಪರಿಪೂರ್ಣತೆಯತ್ತ ಸಾಗಬಹುದು.
೧೦ ಅ ೩. ಕೃತಿ ಶುದ್ಧವಾಗುತ್ತದೆ : ವಿಚಾರಿಸಿ ಕೃತಿ ಮಾಡಿದು ದರಿಂದ ಅದು ಸ್ವಂತ ಇಚ್ಛೆಯಿಂದಲ್ಲ, ಅದು ಆಧ್ಯಾತ್ಮಿಕ ಉದ್ದೇಶದಿಂದ ಆಗುತ್ತದೆ. ವಿಚಾರಿಸುವುದರಿಂದ ಒಂದು ರೀತಿ ನಮ್ಮ ಅಂತಃಕರಣ ಶುದ್ಧವಾಗುತ್ತದೆ, ಆದ್ದರಿಂದ ನಿಶ್ಚಿತವಾಗಿ ಈ ಕೃತಿಯೂ ಶುದ್ಧವಾಗುತ್ತದೆ. ಅಂದರೆ ಆ ಕೃತಿಯಲ್ಲಿ ದೈವಿ ಚೈತನ್ಯ ನಿರ್ಮಾಣವಾಗುತ್ತದೆ.
೧೦ ಅ ೪. ತಪ್ಪುಗಳು ತಡೆಗಟ್ಟಲ್ಪಡುತ್ತವೆ : ವಿಚಾರಿಸದೆ ಕೃತಿ ಮಾಡುವುದರಿಂದ ಬಹಳಷ್ಟು ಬಾರಿ ಅದರಲ್ಲಿ ತಪ್ಪುಗಳು ಆಗುತ್ತವೆ. ಕೆಲವೊಮ್ಮೆ ಆ ತಪ್ಪುಗಳು ಸಮಷ್ಟಿಗೆ ಅತ್ಯಂತ ಹಾನಿಕರವಾಗಿದ್ದಲ್ಲಿ ಗುರುಕಾರ್ಯಕ್ಕೆ ಮತ್ತು ಸ್ವಂತದ ಸಾಧನೆಯಲ್ಲಿ ಕೂಡ ಅಪಾರ ಹಾನಿ ಆಗುತ್ತದೆ. ಆದರೆ ವಿಚಾರಿಸಿ ಕೃತಿ ಮಾಡುವುದರಿಂದ ಯಾವುದಾದರೂ ಕೃತಿಯಲ್ಲಿ ಏನಾದರೂ ತಪ್ಪಾಗುವ ಮೊದಲೇ ಅದರಲ್ಲಿನ ಅಡಚಣೆಗಳು ಸ್ಪಷ್ಟವಾಗುತ್ತವೆ ಮತ್ತು ತಪ್ಪುಗಳು ತಡೆಯಲ್ಪಡುತ್ತವೆ. ಆದರಿಂದ ತಪ್ಪುಗಳು ಸಮಯ ಇರುವಾಗಲೇ ಸರಿ ಮಾಡಲು ಬರುತ್ತದೆ ಅಥವಾ ತಪ್ಪು ಆದರೆ ಅದರಿಂದ ಏನು ಕಲಿಯಬೇಕಾಗಿದೆ ? ಇದರ ಮಾರ್ಗದರ್ಶನ ಪ್ರಾಪ್ತವಾಗುತ್ತದೆ.
೧೦ ಅ ೫. ಪರಿಣಾಮ ಹೆಚ್ಚು ಫಲಕಾರಿ ಆಗುತ್ತದೆ : ಬಹಳಷ್ಟು ಬಾರಿ ನಮಗೆ ಯೋಗ್ಯ ಮಾರ್ಗ ದೊರೆಯುವುದಿಲ್ಲ, ಆದ್ದರಿಂದ ಅದರ ಬಗ್ಗೆ ವಿಚಾರಿಸಿ ಕೃತಿ ಮಾಡಿದರೆ ಯೋಗ್ಯ ಮಾರ್ಗ ಕೂಡ ಸಿಗುತ್ತದೆ ಮತ್ತು ನಾವು ಮಾಡುತ್ತಿರುವ ಕೃತಿಯ ಪರಿಣಾಮ ಹೆಚ್ಚು ಫಲದಾಯಕವಾಗುತ್ತದೆ.
೧೦ ಆ. ವಿಚಾರಿಸುವ ವೃತ್ತಿಯಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭ
೧೦ ಆ ೧. ಅಜ್ಞಾನ ದೂರವಾಗಿ ಯೋಗ್ಯ ಮಾರ್ಗ ಸಿಗುತ್ತದೆ : ಯಾವಾಗ ನಾವು ಕೇವಲ ಸ್ವಂತದ ಮಟ್ಟದಲ್ಲಿ ಕೃತಿ ಮಾಡುತ್ತೇವೆ, ಆಗ ಅದು ಅಜ್ಞಾನದಿಂದಲೇ ಮಾಡುತ್ತೇವೆ. ಆದರೆ ವಿಚಾರಿಸುವುದರಿಂದ ನಮ್ಮ ಅಜ್ಞಾನ ದೂರವಾಗುತ್ತದೆ ಮತ್ತು ಯೋಗ್ಯ ಮಾರ್ಗ ಸಿಗುತ್ತದೆ. ಆದ್ದರಿಂದ ವಿಚಾರಿಸುವುದು ಎಂದರೆ ಆತ್ಮಜ್ಞಾನದ ಮೊದಲನೆ ಮೆಟ್ಟಿಲಾಗಿದೆ.
೧೦ ಆ ೨. ಅಹಂಕಾರ ಕಡಿಮೆಯಾಗಲು ಸಹಾಯವಾಗುತ್ತದೆ : ಸ್ವಂತದ ಮನಸ್ಸಿನಂತೆ ಮಾಡಿದ ಕೃತಿಯಲ್ಲಿ ‘ನಾನು? ಎನ್ನುವುದು ಅಧಿಕ ಇರುತ್ತದೆ.
ಇಂತಹ ಅಹಂಯುಕ್ತ ವಿಚಾರಗಳು ಭಗವಂತನ ಚರಣಗಳಿಗೆ ಅರ್ಪಣೆಯಾಗುವುದಿಲ್ಲ. ವಿಚಾರಿಸಿ ಕೃತಿ ಮಾಡಿದಾಗ ‘ನಾನು’ ಎನ್ನುವುದು ವಿಸರ್ಜನೆ ಆಗುತ್ತದೆ. ಇದರ ಅರ್ಥ ‘ವಿಚಾರಿಸುವುದು ಎಂದರೆ ಅಹಂಕಾರವನ್ನು ಮಣಿಸುವುದು’. ವಿಚಾರಿಸಿ ಕೃತಿ ಮಾಡುವುದರಿಂದ ನಮ್ಮಲ್ಲಿನ ಅಹಂಕಾರ ಕಡಿಮೆ ಆಗಲು ಸಹಾಯವಾಗುತ್ತದೆ.
೧೦ ಆ ೩. ಗುರುಗಳ ಬಗ್ಗೆ ಶರಣಾಗತಿ ಹೆಚ್ಚಾಗುತ್ತದೆ : ನನಗೆ ಏನೂ ಬರುವುದಿಲ್ಲ, ಎಂಬ ಭಾವ ಮೂಡಿದಾಗಲೇ ನಾವು ಎದುರಿನವರಲ್ಲಿ ವಿಚಾರಿಸಬಲ್ಲೆವು. ವಿಚಾರಿಸಿ ಕೃತಿ ಮಾಡುವುದರಿಂದ ‘ನಾನು ಯಾರೂ ಅಲ್ಲ, ಎಲ್ಲವೂ ಗುರುಗಳೇ ಆಗಿದ್ದಾರೆ, ಈ ವೃತ್ತಿ ಎಂದರೆ ನಮ್ಮಲ್ಲಿನ ಶರಣಾಗತಿ ಹೆಚ್ಚುತ್ತದೆ. ಈ ವೃತ್ತಿಯೇ ಸಾಧನೆಯ ಅಡಿಪಾಯ ಆಗಿದೆ.
೧೦ ಆ ೪. ಸ್ವೇಚ್ಛೆ ನಾಶವಾಗುತ್ತದೆ : ನನಗೆ ಏನು ಬೇಕು ಅಥವಾ ಏನು ಅನಿಸುತ್ತದೆ ಎಂಬ ವಿಚಾರ ಬಿಟ್ಟು ಕೃತಿ ಮಾಡುವುದರಿಂದ ಸ್ವೇಚ್ಛೆ ನಿಧಾನವಾಗಿ ನಾಶವಾಗುತ್ತದೆ.
೧೦ ಆ ೫. ಗುರುಕೃಪೆ ಪ್ರಾಪ್ತವಾಗುತ್ತದೆ : ವಿಚಾರಿಸುವುದು ಎಂದರೆ ಸಮರ್ಪಣಾ ಭಾವ. ಇದು ಗುರುಗಳಿಗೆ ಅತ್ಯಂತ ಪ್ರಿಯವಾಗಿರುತ್ತದೆ. ಆದ್ದರಿಂದ ವಿಚಾರಿಸಿ ಕೃತಿ ಮಾಡುವುದರಿಂದ ಗುರುಕೃಪೆ ಪ್ರಾಪ್ತವಾಗುತ್ತದೆ. ಯಾವ ಸಾಧಕನು ಪ್ರತಿಯೊಂದು ವಿಷಯವನ್ನು ಜವಾಬ್ದಾರ ಸಾಧಕರಲ್ಲಿ ವಿಚಾರಿಸಿ ಮಾಡುತ್ತಾನೊ, ಅವನ ಪ್ರತಿಯೊಂದು ಕೃತಿಯ ಹಿಂದೆ ಗುರುಕೃಪೆ ಇರುತ್ತದೆ, ಅಂತಹ ಕೃತಿಗಳು ಎಂದಿಗೂ ನಿಷ್ಪಲವಾಗುವುದಿಲ್ಲ. ಆ ಕೃತಿಗಳ ಫಲ ಸಾತ್ವಿಕ, ಶಾಶ್ವತ ಮತ್ತು ಆಧ್ಯಾತ್ಮಿಕ ಉನ್ನತಿ ಮಾಡಿಸಿಕೊಳ್ಳುವುದಾಗಿರುತ್ತದೆ.
೧೦ ಆ ೬. ಗುರುಗಳ ದೃಷ್ಟಿಕೋನದಿಂದ ಕೃತಿ ಸ್ಪಷ್ಟವಾಗುತ್ತದೆ : ಗುರುಗಳ ಜ್ಞಾನ ವ್ಯಾಪಕ, ಸೂಕ್ಷ್ಮ ಮತ್ತು ಕಾಲದ ಆಚೆಗೆ ಇರುತ್ತದೆ. ನಮ್ಮ ಮನಸ್ಸು ಸೀಮಿತವಾಗಿರುತ್ತದೆ. ನಾವು ಎಲ್ಲಿ ಯಶಸ್ಸು ಎಂದು ತಿಳಿಯುತ್ತೇವೆ, ಅಲ್ಲಿ ಅಪಯಶ ಕೂಡ ಇರಬಹುದು ಮತ್ತು ಎಲ್ಲಿ ಅಪಾಯ ಎಂದು ತಿಳಿಯುತ್ತದೆ ಅಲ್ಲಿ ಅವಕಾಶ ಇರುತ್ತದೆ. ಆದರೆ ನಿಜ ಏನು ? ಇದು ಕೇವಲ ಗುರುಗಳಿಗೆ ಮಾತ್ರ ತಿಳಿದಿರುತ್ತದೆ. ಆದ್ದರಿಂದ ಕೃತಿಯ ಮೊದಲು ಅವರ ಮಾರ್ಗದರ್ಶನ ಅತ್ಯಂತ ಆವಶ್ಯಕವಾಗಿರುತ್ತದೆ. ವಿಚಾರಿಸಿ ಮಾಡುವುದರಿಂದ ಗುರುಗಳ ದೃಷ್ಟಿಕೋನ ನಮಗೆ ಸ್ಪಷ್ಟವಾಗುತ್ತದೆ, ಆದ್ದರಿಂದ ಆಕೃತಿಗಳಿಗೆ ನಿಜ ಅರ್ಥದಲ್ಲಿ ಎಂದರೆ ಆಧ್ಯಾತ್ಮಿಕ ಪರಿಪೂರ್ಣತೆ ಬರುತ್ತದೆ. ಈ ರೀತಿ ‘ವಿಚಾರಿಸಿ ಕೃತಿ ಮಾಡುವುದು’ ಈ ಒಂದು ಗುಣದಿಂದ ಗುರು ಕೃಪೆಗೆ ಪಾತ್ರ ಆಗಲು, ಗುರುಚರಣಕ್ಕೆ ತಲುಪುವ ಮತ್ತು ಗುರುಗಳ ಮನಸ್ಸು ಗೆಲ್ಲುವ ದೈವಿ, ಚೈತನ್ಯದಾಯಕ ಮಾರ್ಗ ತೆರೆಯುತ್ತದೆ. ಸಂಪೂರ್ಣ ಬ್ರಹ್ಮಾಂಡದ ಮೇಲೆ ಯಾರ ನಿತ್ಯ ನಿಯಂತ್ರಣವಿದೆ, ಅಂತಹ ಜಗದೋದ್ಧಾರಕ ಗುರು ನಾರಾಯಣರಿಗೆ ನಮ್ಮ ಮನಸ್ಸು, ಬುದ್ಧಿ, ಚಿತ್ತ ಮತ್ತು ರೋಮ ರೋಮಗಳ ಮೇಲೆ ನಿಯಂತ್ರಣ ಇರುತ್ತದೆ, ಇದು ವಿಚಾರಿಸಿ ಮಾಡುವುದರಿಂದಲೇ ಸಾಧ್ಯ. ಇದೇ ವಿಚಾರಿಸಿ ಮಾಡುವುದರ ಲಾಭ ಇರಲಿದೆ
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೧.೮.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !