|

ನವದೆಹಲಿ – ಪ್ರಸ್ತುತ ಎಐ ಯುಗವಾಗಿದ್ದು, ಪ್ರತಿಯೊಬ್ಬರೂ ಇದನ್ನು ಯಾವುದೋ ಒಂದು ರೀತಿಯಲ್ಲಿ ಬಳಸುತ್ತಿರುವುದು ಕಂಡುಬರುತ್ತಿದೆ. ಆದಾಗ್ಯೂ, ಇದರ ಸಾಮಾಜಿಕವಾಗಿ ಅಪಾಯಕಾರಿ ಮತ್ತು ಅನಿಯಂತ್ರಿತ ಪರಿಣಾಮಗಳು ಸಹ ಎದುರಾಗಿವೆ. ‘ಎಕ್ಸ್’ನ ‘ಎಐ ಚಾಟ್‌ಬಾಟ್’ (ಗಣಕಯಂತ್ರ ವ್ಯವಸ್ಥೆ) ‘ಗ್ರೋಕ್’, ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಅನಿಯಂತ್ರಿತವಾಗಿ ಪ್ರಸಾರ ಮಾಡುತ್ತಿದೆ. ಜನರು ಮಹಿಳೆಯೊಬ್ಬರ ಸುಸಂಸ್ಕೃತ ಉಡುಪಿನಲ್ಲಿರುವ ಚಿತ್ರವನ್ನು ನೀಡಿ, ‘ಗ್ರೋಕ್’ಗೆ ‘ಈ ಮಹಿಳೆಯು ಅಲ್ಪ ಬಟ್ಟೆ ಧರಿಸಿರುವಂತೆ ಚಿತ್ರವನ್ನು ಪ್ರಸಾರ ಮಾಡು’ ಎಂದು ಹೇಳುತ್ತಿದ್ದಾರೆ. ಗ್ರೋಕ್ ಕೂಡ ಅಂತಹ ಪ್ರಚೋದನಕಾರಿ ಮತ್ತು ಅಶ್ಲೀಲ ಬಟ್ಟೆಗಳನ್ನು ಹೊಂದಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೇರವಾಗಿ ಎಲ್ಲರ ಮುಂದೆ ಪ್ರಸಾರ ಮಾಡುತ್ತಿದೆ. ವಿಶೇಷವೆಂದರೆ, ಈ ಚಿತ್ರಗಳು ಅತ್ಯಂತ ವಾಸ್ತವಿಕವಾಗಿ ಕಾಣುತ್ತವೆ. ಯಾರಾದರೂ ಬಳಕೆದಾರರು ಚಿತ್ರದಲ್ಲಿರುವ ಮಹಿಳೆಯ ಭಾವನೆಗಳನ್ನು ಲೈಂಗಿಕ ಅಥವಾ ಕಾಮುಕವಾಗಿ ಬದಲಾಯಿಸಲು ಹೇಳಿದರೆ, ‘ಗ್ರೋಕ್’ ಆ ವಿನಂತಿಯನ್ನು ಕೂಡ ಪೂರೈಸುತ್ತಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ‘ಗ್ರೋಕ್’ ಮತ್ತು ‘ಎಕ್ಸ್’ ಮಾಲೀಕ ಎಲೋನ್ ಮಸ್ಕ್ ವಿರುದ್ಧ ಆಕ್ರೋಶದ ಅಲೆ ಎದ್ದಿದೆ.
🌍 Global Outrage Erupts
⚠️ Reports say ‘Grok AI’ is being misused on X, where users upload normal photos of women and demand explicit versions.
🤖 AI can uplift creativity; but without ethics, it also exposes dark consequences.
🧭 This isn’t just a tech flaw.
It reflects… pic.twitter.com/5495GXVHd5— Sanatan Prabhat (@SanatanPrabhat) January 3, 2026
ಸಾಮಾನ್ಯವಾಗಿ ‘ಎಐ ಚಾಟ್‌ಬಾಟ್‌ಗಳು’ ಖಾಸಗಿ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತವೆ. ಅಂದರೆ ಒಬ್ಬ ಬಳಕೆದಾರನು ಎಐಗೆ ಪ್ರಶ್ನೆಯೊಂದನ್ನು ಕೇಳಿದರೆ, ಅದರ ಉತ್ತರವು ಆ ಬಳಕೆದಾರನಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ‘ಗ್ರೋಕ್’ ಮಾತ್ರ ಅನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಈ ರೀತಿ ಕೆಟ್ಟಕೃತ್ಯವನ್ನು ಏಕೆ ಮಾಡುತ್ತಿದೆ ಎಂದು ‘ಗ್ರೋಕ್’ ಅನ್ನು ಕೇಳಿದಾಗ, ಎಲೋನ್ ಮಸ್ಕ್ ಅವರು ‘ಗ್ರೋಕ್’ ಅನ್ನು ಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ನಿರ್ಬಂಧಗಳಿರುವ ‘ಸ್ಪೈಸಿ’ ಎಐ ಮಾಧ್ಯಮವಾಗಿ ಪರಿಚಯಿಸಿದ್ದಾರೆ ಎಂದು ಅದು ಹೇಳಿದೆ.
‘ಗ್ರೋಕ್’ ದೈಹಿಕ ಗೌಪ್ಯತೆಯ ಮೇಲೆ ನೇರ ದಾಳಿ ಮಾಡುತ್ತಿದೆ, ಇದು ಶಿಕ್ಷಾರ್ಹ ಅಪರಾಧ! – ನ್ಯಾಯವಾದಿ ಅಮಿತಾ ಸಚದೇವ
ಈ ಕುರಿತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಮಿತಾ ಸಚದೇವ ಅವರು ಮಾತನಾಡಿ, “ಈ ಪ್ರವೃತ್ತಿಯು ಅಪಾಯಕಾರಿ, ಕಾನೂನುಬಾಹಿರ ಮತ್ತು ಭಾರತದ ಡಿಜಿಟಲ್ ಸುರಕ್ಷಾ ಚೌಕಟ್ಟಿನ ಉಲ್ಲಂಘನೆಯಾಗಿದೆ. ಇಂತಹ ಚಿತ್ರಗಳನ್ನು ಸಂಬಂಧಪಟ್ಟ ವ್ಯಕ್ತಿಯ ಅನುಮತಿಯಿಲ್ಲದೆ ಪ್ರಸಾರ ಮಾಡುವುದು ಅವರ ದೈಹಿಕ ಗೌಪ್ಯತೆಯ ಮೇಲಿನ ನೇರ ದಾಳಿಯಾಗಿದೆ. ‘ಮಾಹಿತಿ ತಂತ್ರಜ್ಞಾನ ಕಾಯ್ದೆ, 2000’ ರ ಸೆಕ್ಷನ್ 66 ಇ ಅಡಿಯಲ್ಲಿ, ವ್ಯಕ್ತಿಯೊಬ್ಬರ ಖಾಸಗಿ ಅಂಗಗಳ ಚಿತ್ರಗಳನ್ನು ಅವರ ಒಪ್ಪಿಗೆಯಿಲ್ಲದೆ ತೆಗೆದರೆ, ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ, ಅದು ಗೌಪ್ಯತೆಯ ಉಲ್ಲಂಘನೆಯಾಗಿದ್ದು ಶಿಕ್ಷಾರ್ಹ ಅಪರಾಧವಾಗಿದೆ” ಎಂದು ತಿಳಿಸಿದ್ದಾರೆ. ಸಚದೇವ ಅವರು ಮಾತು ಮುಂದುವರೆಸುತ್ತಾ, “ಇಂತಹ ‘ಎಐ ಎಡಿಟ್ಸ್’ (ಎಐ ಬಳಸಿ ಚಿತ್ರ ಬದಲಾಯಿಸುವುದು) ಬಳಸಿ ಮಹಿಳೆಯರನ್ನು ಪದೇ ಪದೇ ಗುರಿಪಡಿಸಿದರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ‘354 ಡಿ’ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು” ಎಂದಿದ್ದಾರೆ.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”