|

ವಲಸಾಡ್ (ಗುಜರಾತ್) – ಇಲ್ಲಿನ ಉಮರಗಾಮ್ ತಾಲೂಕಿನ ಸಾರಿಗಾಮ್ ಪ್ರದೇಶದಲ್ಲಿ ಡಿಸೆಂಬರ್ ೨೪, ೨೦೨೫ ರಂದು ಗಬ್ಬದ ಹಸುವನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಹಸುವಿನ ಕತ್ತರಿಸಿದ ತಲೆ ಮತ್ತು ಮಾಂಸದ ಅವಶೇಷಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸದ್ದಾಂ ಖಾನ್ ಮತ್ತು ಆತನ ಒಬ್ಬ ಅಪ್ರಾಪ್ತ ವಯಸ್ಕ ಸಹಚರನನ್ನು ಬಂಧಿಸಿದ್ದಾರೆ.
೧. ಮತಾಂಧ ಆರೋಪಿಗಳು ಹಸುವಿಗೆ ಮೇವು ಹಾಕುವ ನೆಪದಲ್ಲಿ ಅದನ್ನು ಆ ಪ್ರದೇಶಕ್ಕೆ ಕರೆತಂದು ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
೨. ಘಟನಾ ಸ್ಥಳಕ್ಕೆ ಬಂದ ಗೋರಕ್ಷಕರ ಮೇಲೆ ಸದ್ದಾಂ ಶಾಹಬುದ್ದೀನ್ ಖಾನ್ ಎಂಬಾತನು ತಲ್ವಾರ್ ನಿಂದ ದಾಳಿ ನಡೆಸಿದ್ದಾನೆ ಮತ್ತು ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ; ಆದರೆ ಪೊಲೀಸರು ಆತನನ್ನು ಮತ್ತು ಆತನ ಸಹಚರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
೩. ಈ ಘಟನೆಯ ನಂತರ ಸಾರಿಗಾಮ್ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಎರಡೂ ಸಮುದಾಯಗಳ ಪ್ರತಿನಿಧಿಗಳು, ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು, ಸ್ಥಳೀಯ ನಾಗರಿಕರು, ಪೊಲೀಸ್ ಅಧಿಕಾರಿಗಳು ಮತ್ತು ಉಮರಗಾಮ್ ಶಾಸಕ ರಮಣಭಾಯಿ ಪಾಟಕರ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಗಬ್ಬದ ಹಸುವಿನ ಹತ್ಯೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು. (ನಾಗರಿಕರು ಕೇವಲ ಅಸಮಾಧಾನ ವ್ಯಕ್ತಪಡಿಸಿ ಸುಮ್ಮನಾಗದೆ, ಗೋಮಾತೆಯನ್ನು ಕ್ರೂರವಾಗಿ ಕೊಂದವರಿಗೆ ಶಿಕ್ಷೆಯಾಗುವಂತೆ ಒತ್ತಡ ಹೇರಬೇಕು! – ಸಂಪಾದಕರು)
ಸಂಪಾದಕೀಯ ನಿಲುವುಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ನೋಯಿಸುವವರ ವಿರುದ್ಧ ಗುಜರಾತ್‌ನ ಭಾಜಪ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!