
ಒಟಾವಾ (ಕೆನಡಾ) – ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೆನಡಾದಲ್ಲಿ ಓರ್ವ ಭಾರತೀಯ ನಾಗರಿಕನ ಸಾವಾಗಿದೆ. ಅವರ ಹೆಸರು ಪ್ರಶಾಂತ ಶ್ರೀಕುಮಾರ್ (ವಯಸ್ಸು ೪೪ ವರ್ಷ) ಎಂದಿದೆ. ಕೆನಡಾದ ಕೆ. ಎಡ್ಮಂಟನ್‌ನಲ್ಲಿ ಈ ಘಟನೆ ನಡೆದಿದೆ. ಸಿಕ್ಕಿರುವ ಮಾಹಿತಿ ಪ್ರಕಾರ, ಡಿಸೆಂಬರ್ ೨೨ ರಂದು ಪ್ರಶಾಂತ ಅವರಿಗೆ ಎದೆಯಲ್ಲಿ ತೀವ್ರವಾದ ನೋವು ಉಂಟಾಗಿತ್ತು. ಅವರು ಕೆಲಸದಲ್ಲಿದ್ದಾಗಲೇ ಈ ತೊಂದರೆ ಅವರಿಗೆ ಅರಿವಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಕ್ಕೆ ತೆಗೆದುಕೊಂಡು ಅವರನ್ನು ತಕ್ಷಣವೇ ‘ಗ್ರೆ ನನ್ಸ್ ಕಮ್ಯೂನಿಟಿ’ ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ಅಲ್ಲಿ ಅವರಿಗೆ ತಕ್ಷಣ ಚಿಕಿತ್ಸೆ ನೀಡದೆ, ಅವರನ್ನು ‘ವೇಟಿಂಗ್ ರೂಂ’ನಲ್ಲಿ ಕುಳಿತುಕೊಳ್ಳಿ’, ಎಂದು ಹೇಳಲಾಯಿತು. ಸಮಯ ಕಳೆದಂತೆ, ಪ್ರಶಾಂತ ಅವರ ರಕ್ತದೊತ್ತಡ ಹೆಚ್ಚಾಗತೊಡಗಿತು. ಆರಂಭದಲ್ಲಿ ಅವರಿಗೆ ಕೇವಲ ಒಂದು ಔಷಧಿಯನ್ನು ನೀಡಿ ಕುಳಿತುಕೊಳ್ಳಲು ಹೇಳಲಾಗಿತ್ತು. ಸುಮಾರು ೮ ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕೂಡಿಸಿ ನಂತರ, ಅವರನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು; ಆದರೆ ಅವರು ತಕ್ಷಣ ಕುಸಿದುಬಿದ್ದರು. ಶುಶ್ರೂಷಕಿಯರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರು; ಆದರೆ ಅವರಿಗೆ ತೀವ್ರ ಹೃದಯಾಘಾತವಾಗಿ ಅವರು ಅಲ್ಲೇ ಮೃತಪಟ್ಟರು. ಪ್ರಶಾಂತ ಅವರಿಗೆ ಒಟ್ಟು ಮೂವರು ಮಕ್ಕಳಿದ್ದಾರೆ. ಅವರ ಮರಣದ ನಂತರ, ಕೆನಡಾದಲ್ಲಿನ ಆರೋಗ್ಯ ವ್ಯವಸ್ಥೆ ಮತ್ತು ಅಲ್ಲಿ ಭಾರತೀಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಈಗ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿವೆ.
ಸಂಪಾದಕೀಯ ನಿಲುವು‘ವರ್ಣಭೇದ ಮತ್ತು ಭಾರತದ ಮೇಲಿನ ದ್ವೇಷದಿಂದಾಗಿ ಭಾರತೀಯನಿಗೆ ಚಿಕಿತ್ಸೆ ನೀಡಲಿಲ್ಲ’, ಎಂದು ಭಾರತೀಯರಿಗೆ ಅನಿಸಿದರೆ ತಪ್ಪೇನು ? |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು