ಹಳೆಯ ರಹಸ್ಯ ದಾಖಲೆಗಳಲ್ಲಿನ ಮಾಹಿತಿ ಬಹಿರಂಗ

ವಾಷಿಂಗ್ಟನ್ (ಅಮೆರಿಕ) – ಪಾಕಿಸ್ತಾನದ ಬಳಿ ಇರುವ ಅಣುಬಾಂಬ್ ದುಷ್ಕರ್ಮಿಗಳ ಕೈಗೆ ಸಿಗುವ ಸಾಧ್ಯತೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಭಯವಿತ್ತು. ೨೦೦೧ ರಿಂದ ೨೦೦೮ ರ ಅವಧಿಯಲ್ಲಿ ಪುಟಿನ್ ಮತ್ತು ಬುಷ್ ನಡುವೆ ನಡೆದ ಮಾತುಕತೆಗಳ ಗೌಪ್ಯ ದಾಖಲೆಗಳಲ್ಲಿರುವ ಈ ಮಾಹಿತಿಯು ಈಗ ಬಹಿರಂಗವಾಗಿದೆ.
ಈ ಗುಪ್ತ ದಾಖಲೆಗಳನ್ನು ಅಮೆರಿಕದ ‘ನ್ಯಾಷನಲ್ ಸೆಕ್ಯುರಿಟಿ ಆರ್ಕೈವ್’, ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಬಹಿರಂಗಪಡಿಸಿದೆ. ಈ ದಾಖಲೆಗಳಲ್ಲಿ ಪಾಕಿಸ್ತಾನದ ಭಯೋತ್ಪಾದಕ ಜಾಲ, ಇರಾನ್ ಮತ್ತು ಉತ್ತರ ಕೊರಿಯಾದವರೆಗೆ ಅಣು ತಂತ್ರಜ್ಞಾನ ತಲುಪುವ ಅಪಾಯ, ಹಾಗೆಯೇ ಪಾಕಿಸ್ತಾನದ ಪರಮಾಣು ಸುರಕ್ಷತಾ ವ್ಯವಸ್ಥೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿದೆ.
ಪಾಕಿಸ್ತಾನದಲ್ಲಿನ ಆಂತರಿಕ ಪರಿಸ್ಥಿತಿ, ರಾಜಕೀಯ ಅಸ್ಥಿರತೆ ಮತ್ತು ಅಣ್ವಸ್ತ್ರಗಳ ಬಗ್ಗೆ ಇಬ್ಬರು ನಾಯಕರಿಗೂ ಕಳವಳವಿತ್ತು. ಒಂದು ವೇಳೆ ಪರಿಸ್ಥಿತಿ ಹದಗೆಟ್ಟರೆ, ಅಣು ತಂತ್ರಜ್ಞಾನವು ದುಷ್ಕರ್ಮಿಗಳ ಕೈಗೆ ಸಿಗಬಹುದೆಂದು ಈ ಇಬ್ಬರು ನಾಯಕರಿಗೆ ಆತಂಕವಾಗಿತ್ತು. ೨೦೦೧ ರಿಂದ ೨೦೦೮ ರ ಅವಧಿಯಲ್ಲಿ ಪಾಕಿಸ್ತಾನದ ಆಡಳಿತವು ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಅವರ ಕೈಯಲ್ಲಿತ್ತು. ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕರನ್ನು ಪತ್ತೆಹಚ್ಚಲು ಅಮೆರಿಕ ಮತ್ತು ರಷ್ಯಾ ದೇಶಗಳು ಪಾಕಿಸ್ತಾನದ ಸಹಕಾರವನ್ನು ಕೋರಿದ್ದವು. ಹೀಗಿದ್ದರೂ, ಪಾಕಿಸ್ತಾನದ ಅಣು ನೀತಿ ಮತ್ತು ನಿಯಂತ್ರಣ ವ್ಯವಸ್ಥೆಯ ಬಗ್ಗೆ ಇಬ್ಬರೂ ನಾಯಕರಿಗೆ ವಿಶ್ವಾಸವಿರಲಿಲ್ಲ ಎಂಬುದು ಬಹಿರಂಗವಾಗಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !