ಹಿಂದೂಗಳು ಸಂಘಟಿತರಾಗದಿದ್ದರೆ, ಭಾರತದಲ್ಲೂ ಬಾಂಗ್ಲಾದೇಶದಂತಹ ಸ್ಥಿತಿ ಬರಲಿದೆ!

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಂದ ಹಿಂದೂಗಳಿಗೆ ಎಚ್ಚರಿಕೆ

ಭಿಲಾಯಿ (ಛತ್ತೀಸಗಢ) – ಒಂದು ವೇಳೆ ಹಿಂದೂಗಳು ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ನೋಡಲು ಇಷ್ಟಪಡದಿದ್ದರೆ, ಈಗಲೇ ಅವರು ಒಂದಾಗಲು ಸರಿಯಾದ ಸಮಯವಾಗಿದೆ. ಒಂದು ವೇಳೆ ಹಿಂದೂಗಳು ಒಗ್ಗೂಡದಿದ್ದರೆ, ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆಯೋ, ಅದು ಭಾರತದ ಪ್ರತಿ ರಸ್ತೆಯಲ್ಲೂ ನಡೆಯುವುದನ್ನು ಕಾಣಬೇಕಾಗುತ್ತದೆ ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಹಿಂದೂಗಳಿಗೆ ಎಚ್ಚರಿಕೆ ನೀಡಿದರು. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ತಮ್ಮ ಮಾತು ಮುಂದುವರಿಸಿ, ಬಾಂಗ್ಲಾದೇಶದಲ್ಲಿ ನಡೆದದ್ದು ಒಳ್ಳೆಯದಲ್ಲ; ಆದರೆ ಅಲ್ಲಿನ ಹಿಂದೂಗಳು ತೋರಿದ ಒಗ್ಗಟ್ಟನ್ನು ನಾವು ಶ್ಲಾಘಿಸಲೇಬೇಕು. ಮತಾಂತರ ಮತ್ತು ಧರ್ಮದ ಆಧಾರಿತ ಹಿಂಸಾಚಾರವು ಭಾರತದಲ್ಲಿ ಕ್ಯಾನ್ಸರಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ದೇಶದ ಆಂತರಿಕ ಭದ್ರತೆ ಮತ್ತು ಸಂಸ್ಕೃತಿಗೆ ಇದು ಅತ್ಯಂತ ದೊಡ್ಡ ಅಪಾಯವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಈಗಾಗಲೇ ಕೆಲವು ಕಡೆಗಳಲ್ಲಿ ಬಾಂಗ್ಲಾದೇಶದಂತಹ ಸ್ಥಿತಿಯು ಆಗಾಗ ಕಂಡುಬರುತ್ತಿದ್ದರೂ ಹಿಂದೂಗಳು ನಿಷ್ಕ್ರಿಯರಾಗಿಯೇ ಇದ್ದಾರೆ. ಆದ್ದರಿಂದ ಹಿಂದೂಗಳ ಈ ಸ್ಥಿತಿಗೆ ಅವರೇ ಜವಾಬ್ದಾರರು!