
ವೆಲ್ಲಿಂಗ್ಟನ್ (ನ್ಯೂಜಿಲೆಂಡ್) – ಭಾರತ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿಗಳು ಡಿಸೆಂಬರ್ ೨೨ ರಂದು ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಈಗ ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್ ಅವರು ಮರುದಿನ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ, ‘ನಾನು ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಕ್ತ ಅಥವಾ ನಿಷ್ಪಕ್ಷವೆಂದು ಪರಿಗಣಿಸುವುದಿಲ್ಲ. ದುರದೃಷ್ಟವಶಾತ್ ನ್ಯೂಜಿಲೆಂಡ್‌ಗೆ ಇದು ಕೆಟ್ಟ ಒಪ್ಪಂದವಾಗಿದೆ. ಈ ಒಪ್ಪಂದದಿಂದ ಭಾರತಕ್ಕೆ ಸಾಕಷ್ಟು ಸಿಗಲಿದೆ; ಆದರೆ ಅದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್‌ಗೆ ಮಾತ್ರ ಸಾಕಾಗುವಷ್ಟು ಏನೂ ಸಿಗುವುದಿಲ್ಲ. ನ್ಯೂಜಿಲೆಂಡ್‌ನ ರೈತರಿಗೆ ಈ ಒಪ್ಪಂದವು ಉತ್ತಮವಾಗಿಲ್ಲ. ಇದರ ಪರಿಣಾಮವಾಗಿ, ಗ್ರಾಮೀಣ ಸಮುದಾಯ ಈ ಒಪ್ಪಂದವನ್ನು ಬೆಂಬಲಿಸುವುದು ಅಸಾಧ್ಯವಾಗಿದೆ,’ ಎಂದು ಹೇಳಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮಾರ್ಚ್‌ನಿಂದ ನಡೆಯುತ್ತಿದ್ದ ಮಾತುಕತೆಗಳ ನಂತರ, ಡಿಸೆಂಬರ್ ೨೨ ರಂದು ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದಿಂದ ವ್ಯಾಪಾರ, ಹೂಡಿಕೆ, ನಾವೀನ್ಯತೆ (ಇನ್ನೋವೇಶನ್) ಮುಂತಾದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಅವಕಾಶಗಳು ಲಭ್ಯವಾಗಲಿವೆ. ನ್ಯೂಜಿಲೆಂಡ್‌ನಿಂದ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ೨೦ ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಲಾಗುವುದು.
ಸಂಪಾದಕೀಯ ನಿಲುವುಇಂತಹ ಹೇಳಿಕೆ ಕೇವಲ ಭಾರತದ ಮೇಲಿನ ದ್ವೇಷದಿಂದಲೇ ಮಾಡಲಾಗುತ್ತದೆ, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman