ಭಾರತೀಯ ಯೋಧ ಸುರಕ್ಷಿತವಾಗಿದ್ದು, ವಾಪಸ್ ಕರೆತರುವ ಪ್ರಕ್ರಿಯೆ ಪ್ರಾರಂಭ

ಕೂಚ್‌ಬಿಹಾರ್ (ಬಂಗಾಳ) – ಬಂಗಾಳದ ಕೂಚ್‌ಬಿಹಾರ್ ಜಿಲ್ಲೆಯ ಮೆಖ್ಲಿಗಂಜ್ ಪ್ರದೇಶದಲ್ಲಿ ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿ ಡಿಸೆಂಬರ್ ೨0 ರ ಮುಂಜಾನೆ ಕೆಲವು ಬಾಂಗ್ಲಾದೇಶಿ ಗೋ ಕಳ್ಳರು ಗಡಿ ಭದ್ರತಾ ದಳದ ಒಬ್ಬ ಯೋಧನನ್ನು ಅಪಹರಿಸಿದ್ದಾರೆ. ದಟ್ಟ ಮಂಜಿನ ಸಹಾಯ ಪಡೆದು ಗೋ ಕಳ್ಳರು ಯೋಧನನ್ನು ಅಪಹರಿಸಿದ್ದಾರೆ. ಆದಾಗ್ಯೂ, ನಂತರ ಕಳ್ಳರು ಯೋಧನನ್ನು ಬಾಂಗ್ಲಾದೇಶದ ಗಡಿ ಕಾವಲುಪಡೆಗೆ ಒಪ್ಪಿಸಿದ್ದಾರೆ. ಎರಡೂ ದೇಶಗಳ ನಡುವಿನ ಮಾತುಕತೆಯ ನಂತರ ಯೋಧನನ್ನು ವಾಪಸ್ ಕರೆತರುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಯೋಧನ ಹೆಸರು ಬೇದ್ ಪ್ರಕಾಶ್ ಎಂದಿದೆ.
#BREAKING : #BSF jawan detained by #Bangladeshi BGB after inadvertently crossing into #Bangladesh while chasing cattle smugglers amid dense fog, returned after flag meeting. pic.twitter.com/RCPrl4ULqP
— IDU (@defencealerts) December 21, 2025
ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಗಡಿಯ ಒಂದು ಭಾಗದಿಂದ ಜಾನುವಾರುಗಳ ಒಂದು ಹಿಂಡು ಭಾರತದ ಗಡಿಯೊಳಗೆ ನುಗ್ಗಿತು. ಕಳ್ಳರನ್ನು ಓಡಿಸುವಾಗ ಬೇದ ಪ್ರಕಾಶ್ ಇತರ ಯೋಧರಿಗಿಂತ ಸ್ವಲ್ಪ ಮುಂದೆ ಹೋದರು. ದಟ್ಟ ಮಂಜಿನ ಕಾರಣದಿಂದ ಅವರು ತಮ್ಮ ತಂಡದಿಂದ ಬೇರ್ಪಟ್ಟರು. ಈ ಅವಕಾಶದ ಲಾಭ ಪಡೆದ ಬಾಂಗ್ಲಾದೇಶದ ಕಳ್ಳರು ಅವರನ್ನು ಜಾನುವಾರುಗಳೊಂದಿಗೆ ಬಾಂಗ್ಲಾದೇಶಕ್ಕೆ ಕರೆದೊಯ್ದರು.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !