
ನವದೆಹಲಿ – ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಹತ್ಯೆಯನ್ನು ಖಂಡಿಸಿ ಇಲ್ಲಿನ ಬಾಂಗ್ಲಾದೇಶ ಹೈಕಮಿಷನ್ ಎದುರು ರಾಷ್ಟ್ರಪ್ರೇಮಿಗಳು ಪ್ರತಿಭಟನೆ ನಡೆಸಿದರು. ‘ಈ ಪ್ರತಿಭಟನೆಯಿಂದಾಗಿ ಭಾರತದಲ್ಲಿರುವ ಬಾಂಗ್ಲಾದೇಶದ ಹೈಕಮಿಷನ್‌ನ ಭದ್ರತೆಗೆ ಧಕ್ಕೆಯಾಗಿದೆ’ ಎಂದು ಬಾಂಗ್ಲಾದೇಶ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನಾಕಾರರು ಹೈಕಮಿಷನ್ ಕಚೇರಿಯ ತೀರಾ ಹತ್ತಿರದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಮತ್ತು ಈ ಬಗ್ಗೆ ಮುನ್ಸೂಚನೆ ನೀಡಿರಲಿಲ್ಲ ಎಂದು ಬಾಂಗ್ಲಾದೇಶ ಆರೋಪಿಸಿದೆ. ಅಲ್ಲದೆ, ‘ಭಾರತದಲ್ಲಿರುವ ಬಾಂಗ್ಲಾದೇಶದ ಎಲ್ಲಾ ರಾಜತಾಂತ್ರಿಕ ಕಚೇರಿಗಳ ಭದ್ರತೆಯನ್ನು ಖಚಿತಪಡಿಸಲು ಭಾರತ ಸರಕಾರ ಬದ್ಧವಾಗಿದೆ’ ಎಂದು ಬಾಂಗ್ಲಾದೇಶ ಹೇಳಿದೆ.
೧. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಸಂಖ್ಯೆ ಬಹಳ ಕಡಿಮೆ ಇತ್ತು ಮತ್ತು ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಬಾಂಗ್ಲಾದೇಶ ಹೈಕಮಿಷನ್ ಭದ್ರತೆಗೆ ಯಾವುದೇ ಅಪಾಯವಿರಲಿಲ್ಲ. ಆದರೆ, ಭಾರತವು ಈ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ. ತೌಹಿದ್ ಹೊಸೈನ್ ಹೇಳಿದ್ದಾರೆ.
೨. ಈ ಘಟನೆಯ ಬಗ್ಗೆ ಬಾಂಗ್ಲಾದೇಶದ ಕೆಲವು ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
೩. ಸಾಮಾನ್ಯ ಸಂದರ್ಭಗಳಲ್ಲಿ ಅನುಮತಿ ಇಲ್ಲದೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲದಿರುವಾಗ ೨೫-೩೦ ಜನರ ಗುಂಪು ಅಷ್ಟು ಸುರಕ್ಷಿತವಾದ ರಾಜತಾಂತ್ರಿಕ ವಲಯದವರೆಗೆ ತಲುಪಿದ್ದು ಹೇಗೆ?, ಎಂದು ಹೊಸೈನ್ ಪ್ರಶ್ನಿಸಿದ್ದಾರೆ.
೪. ಪ್ರತಿಭಟನಾಕಾರರು ಕೇವಲ ದೀಪು ದಾಸ್ ಹತ್ಯೆಯ ವಿರುದ್ಧ ಘೋಷಣೆಗಳನ್ನು ಕೂಗುವುದಷ್ಟೇ ಅಲ್ಲದೆ, ಇತರ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ಹೊಸೈನ್ ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ