
ಮುಂಬಯಿ, ಡಿಸೆಂಬರ್ ೨೦ (ಸುದ್ದಿ) – ಹಿಂದೂ ವಿಧಿಜ್ಞ ಪರಿಷತ್ತಿನ ಅಂಬರನಾಥ (ಠಾಣೆ ಜಿಲ್ಲೆ) ಇಲ್ಲಿನ ಸದಸ್ಯೆ ನ್ಯಾಯವಾದಿ (ಸೌ.) ಕಿಶೋರಿ ಯೋಗೇಶ ಕುಲಕರ್ಣಿ ಅವರು ‘ಫಲ ಜ್ಯೋತಿಷ್ಯ ವಿಷಯದ ಹಸ್ತ ಸಾಮುದ್ರಿಕ ಪ್ರವೇಶ ಪರೀಕ್ಷೆ’ಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಅವರು ೨೦೦ ಕ್ಕೆ ೧೬೦ ಅಂಕಗಳನ್ನು ಪಡೆಯುವ ಮೂಲಕ ಈ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಯಶಸ್ಸಿಗಾಗಿ ‘ಫಲ ಜ್ಯೋತಿಷ್ಯ ಅಭ್ಯಾಸ ಮಂಡಳಿ’ಯು ನ್ಯಾಯವಾದಿ (ಸೌ.) ಕಿಶೋರಿ ಕುಲಕರ್ಣಿ ಅವರಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದೆ.
ಜ್ಯೋತಿಷ್ಯ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಮತ್ತು ಪುಣೆಯ ‘ಫಲ ಜ್ಯೋತಿಷ್ಯ ಸಂಶೋಧನಾ ಜ್ಞಾನಪೀಠ’ಕ್ಕೆ ಸಂಯೋಜಿತವಾಗಿರುವ ‘ಫಲ ಜ್ಯೋತಿಷ್ಯ ಅಭ್ಯಾಸ ಮಂಡಳಿ’ಯಿಂದ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಪಂಡಿತ ವಿಜಯ ಶ್ರೀಕೃಷ್ಣ ಜಕಾತದಾರ ಅವರು ಈ ಮಂಡಳಿಯ ಅಧ್ಯಕ್ಷರು ಮತ್ತು ಸಂಚಾಲಕರಾಗಿದ್ದಾರೆ. ಈ ಯಶಸ್ಸಿನ ಕುರಿತು ಶ್ರೀ. ವಿಜಯ ಜಕಾತದಾರ ಅವರು ಕಳುಹಿಸಿದ ಪತ್ರದಲ್ಲಿ, ‘ನೀವು ಉತ್ತರ ಪತ್ರಿಕೆಯನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಸುಂದರವಾದ ಕೈಬರಹದಲ್ಲಿ ಬರೆದಿದ್ದೀರಿ. ನಿಮ್ಮ ಉತ್ತರಗಳನ್ನು ಪರಿಶೀಲಿಸುವಾಗ ನೀವು ಮಾಡಿರುವ ಆಳವಾದ ಅಧ್ಯಯನ ಮತ್ತು ಪೂರಕ ಓದಿನ ಅರಿವಾಗುತ್ತಿತ್ತು. ಕೆಲವು ಪ್ರಶ್ನೆಗಳ ಉತ್ತರಗಳಲ್ಲಿ ನೀವು ಜ್ಯೋತಿಷ್ಯ ಶಾಸ್ತ್ರೀಯ ವಿಚಾರಗಳನ್ನು ಅತ್ಯಂತ ಸಮರ್ಪಕವಾಗಿ ಮಂಡಿಸಿರುವುದು ಕಂಡುಬಂದಿದೆ. ಈ ಶಾಸ್ತ್ರದಲ್ಲಿ ಭವಿಷ್ಯದಲ್ಲಿ ನೀವು ಉತ್ತಮ ಪ್ರಗತಿಯನ್ನು ಸಾಧಿಸುವಿರಿ’ ಎಂಬ ಶಬ್ದಗಳಲ್ಲಿ ನ್ಯಾಯವಾದಿ (ಸೌ.) ಕಿಶೋರಿ ಕುಲಕರ್ಣಿ ಅವರನ್ನು ಶ್ಲಾಘಿಸಿದ್ದಾರೆ. ನ್ಯಾಯವಾದಿ (ಸೌ.) ಕಿಶೋರಿ ಕುಲಕರ್ಣಿ ಅವರು ಹಿಂದೂ ವಿಧಿಜ್ಞ ಪರಿಷತ್ತಿನ ಮಾಧ್ಯಮದಿಂದ ರಾಷ್ಟ್ರ ಮತ್ತು ಧರ್ಮ ಕಾರ್ಯದ ಕಾನೂನು ಹೋರಾಟಗಳಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!