ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್

ಅಮರಾವತಿ (ಆಂಧ್ರಪ್ರದೇಶ) – ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ್ ಅವರು ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಅಮಾನವೀಯ ಹತ್ಯೆಯ ಬಗ್ಗೆ ತೀವ್ರ ದುಃಖ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ಅವರು, ಈ ಘಟನೆಯು ಮಾನವೀಯತೆಯ ಅಧಃಪತನದ ಸಂಕೇತವಾಗಿದೆ. 1971 ರಲ್ಲಿ ಭಾರತೀಯ ಸೈನಿಕರು ತಮ್ಮ ರಕ್ತವನ್ನು ಹರಿಸಿ ಯಾವ ಭೂಮಿಗೆ ಸ್ವಾತಂತ್ರ್ಯ ಕೊಡಿಸಿದ್ದರೋ, ಅದೇ ಭೂಮಿಯಲ್ಲಿ ಇಂದು ಮುಗ್ಧ ಅಲ್ಪಸಂಖ್ಯಾತರ ಹತ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪವನ ಕಲ್ಯಾಣ್ ಅವರು ಅಂಕಿಅಂಶಗಳನ್ನು ಉಲ್ಲೇಖಿಸುತ್ತಾ, 1951 ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು ಶೇಕಡಾ 22 ರಷ್ಟು ಇತ್ತು, ಅದು ಈಗ ಶೇಕಡಾ 8 ಕ್ಕಿಂತಲೂ ಕಡಿಮೆಯಾಗಿದೆ. ಇದು ಕೇವಲ ವಲಸೆಯ ವಿಷಯವಲ್ಲ, ಬದಲಿಗೆ ಅಲ್ಪಸಂಖ್ಯಾತರನ್ನು ಗುರಿಪಡಿಸಿ ವ್ಯವಸ್ಥಿತವಾಗಿ ನಡೆಯುತ್ತಿರುವ ಚಿತ್ರಹಿಂಸೆಯ ಸಂಕೇತವಾಗಿದೆ ಎಂದು ಹೇಳಿದರು. ಇಸ್ಕಾನ್ ದೇವಾಲಯದ ಸಂತ ಚಿನ್ಮಯ ದಾಸ್ ಅವರ ಬಂಧನ ಮತ್ತು ಅದರ ನಂತರ ದೀಪು ದಾಸ್ ಅವರನ್ನು ಮರಕ್ಕೆ ನೇತುಹಾಕಿ ಸುಟ್ಟ ಘಟನೆಯು ಅಲ್ಲಿ ಕಾನೂನಿನ ಆಡಳಿತ ಅಂತ್ಯಗೊಂಡಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.
ಅಂತರಾಷ್ಟ್ರೀಯ ಸಮುದಾಯದ ಮೌನವು ಮಾನವ ಹಕ್ಕುಗಳಿಗೆ ಮಾಡುವ ದ್ರೋಹ!
ಬಾಂಗ್ಲಾದೇಶದ ನಾಯಕತ್ವ ಮತ್ತು ವಿಶ್ವಸಂಸ್ಥೆಯು ಈ ಅಮಾನವೀಯ ಕೃತ್ಯವನ್ನು ಕೇವಲ ಖಂಡಿಸುವುದಲ್ಲದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪವನ್ ಕಲ್ಯಾಣ್ ಕರೆ ನೀಡಿದ್ದಾರೆ. ಭಾರತೀಯ ಹುತಾತ್ಮರು ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ್ದಾರೆಯೇ ಹೊರತು, ಅಲ್ಪಸಂಖ್ಯಾತರ ಮೇಲಿನ ಇಂತಹ ದೌರ್ಜನ್ಯಗಳಿಗಾಗಿ ಅಲ್ಲ ಎಂದು ಅವರು ದೃಢವಾಗಿ ಹೇಳಿದರು. ಅಂತರಾಷ್ಟ್ರೀಯ ಸಮುದಾಯದ ಮೌನವು ಮಾನವ ಹಕ್ಕುಗಳ ಮೇಲಿನ ವಿಶ್ವಾಸಘಾತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿನ ಎಷ್ಟು ಆಡಳಿತಗಾರರು ಈ ಘಟನೆಯನ್ನು ಖಂಡಿಸಿದ್ದಾರೆ, ಎಂಬುದನ್ನು ಹಿಂದೂಗಳು ಗಮನಿಸಬೇಕು! ಹಿಂದೂಗಳ ರಕ್ಷಣೆಯ ವಿಷಯದಲ್ಲಿ ಹಿಂದೂಗಳೇ ನಿಷ್ಕ್ರಿಯರಾಗಿರುವುದರಿಂದ ಆಡಳಿತಗಾರರೂ ಸಹ ಹಾಗೆಯೇ ಆಗಿದ್ದಾರೆ ! |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ