
ನವದೆಹಲಿ – ಹಿಂದೂತ್ವನಿಷ್ಠ ಮಯಾಂಕ್ ಜೈನ್ ಅವರ ‘ಕ್ರಿಮ್ಸನ್ ಕ್ರಿಸೆಂಟ್ – ದ ಲಾಸ್ಟ್ ಕ್ವಾರ್ಟರ್’ ಎಂಬ ಸಾಕ್ಷ್ಯಚಿತ್ರವನ್ನು ಡಿಸೆಂಬರ್ 12 ರಂದು ‘ಕುರುಕ್ಷೇತ್ರ ಗುರುಕುಲ ಫೌಂಡೇಶನ್ ಧರ್ಮ ಅಲಂಕಾರ’ ಕಾರ್ಯಕ್ರಮದಲ್ಲಿ ಜಗದ್ಗುರು ಜ್ಯೋತಿರ್ಮಠ ಶಂಕರಾಚಾರ್ಯ ಶ್ರೀ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶಂಕರಾಚಾರ್ಯರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಯಾಂಕ್ ಜೈನ್, “ಇದು ಕೇವಲ ಪ್ರಶಸ್ತಿಯಲ್ಲ, ಬದಲಿಗೆ ಒಂದು ಸಾಂಸ್ಕೃತಿಕ ಚಳವಳಿಗೆ ಸಂದ ಗೌರವವಾಗಿದೆ” ಎಂದು ಹೇಳಿದರು.
🕉️ शंकराचार्य परम्परा | धर्म | सभ्यता 🕉️
🪔📜🦢⚖️On 12 December 2025, in Delhi, 🕉️ Shri Shankaracharya Avimukteshwarananda Saraswati ji 🕉️ released my documentary film, https://t.co/wyEM4OyDXa at a large public ceremony organised by @sdeo76 , and graciously conferred a medal… pic.twitter.com/WtTCRUheON
— Mayank Jain (@mayankjain100) December 16, 2025
‘ಕ್ರಿಮ್ಸನ್ ಕ್ರಿಸೆಂಟ್ – ದ ಲಾಸ್ಟ್ ಕ್ವಾರ್ಟರ್’ ಸಾಕ್ಷ್ಯಚಿತ್ರವು ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಮದರಸಾಗಳ ಮೂಲಕ ವಹಾಬಿ ಸಿದ್ಧಾಂತವು (ಕುರಾನ್ ಮತ್ತು ಸುನ್ನತ್‌ಗಳ ಅಕ್ಷರಶಃ ಅರ್ಥಕ್ಕೆ ಒತ್ತು ನೀಡುವ ಸಿದ್ಧಾಂತ) ಹೇಗೆ ಹರಡುತ್ತಿದೆ ಎಂಬ ಮಾಹಿತಿಯನ್ನು ಒಳಗೊಂಡಿದೆ. ಈ ಸಿದ್ಧಾಂತವನ್ನು ಹರಡಿದ ಸೌದಿ ಅರೇಬಿಯಾದಲ್ಲಿ ಇಂದು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನಾಯಕತ್ವದಲ್ಲಿ ಸುಧಾರಣೆಯ ಗಾಳಿ ಬೀಸುತ್ತಿದೆ. “ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಕಟ್ಟರ್ ಇಸ್ಲಾಂನಲ್ಲಿ ಸುಧಾರಣೆ ತರುತ್ತಾರೆಯೇ?” ಎಂಬ ಪ್ರಶ್ನೆಯನ್ನು ಈ ಸಾಕ್ಷ್ಯಚಿತ್ರದಲ್ಲಿ ಎತ್ತಲಾಗಿದೆ.
ಹಿಂದೂತ್ವನಿಷ್ಠ ಮೀನಾಕ್ಷಿ ಶರಣ್ ಅವರಿಗೆ ‘ದೇವಿ ದುರ್ಗಾ’ ಪ್ರಶಸ್ತಿ ನೀಡಿ ಗೌರವ

ಕಳೆದ 1 ಸಾವಿರದ 400 ವರ್ಷಗಳಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ 80 ಕೋಟಿಗೂ ಹೆಚ್ಚು ಹಿಂದೂಗಳ ಸ್ಮರಣಾರ್ಥವಾಗಿ ‘ಅಯೋಧ್ಯಾ ಫೌಂಡೇಶನ್’ನ ಸಂಸ್ಥಾಪಕಿ ಮೀನಾಕ್ಷಿ ಶರಣ್ ಅವರು ಕಳೆದ 10 ವರ್ಷಗಳಿಂದ ‘ಸಾಮೂಹಿಕ ತರ್ಪಣ’ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
शुभकामनाएं मीनाक्षी जी 🌷🌷 https://t.co/1Ncftn0Jza
— SSandeep Deo | संदीप देव (@sdeo76) December 15, 2025
ಅವರ ಈ ಸೇವೆಯನ್ನು ಗುರುತಿಸಿ ಸ್ವಾಮಿ ಅವಿಮುಕ್ತೇಶ್ವರಾನಂದರು ಅವರಿಗೆ ‘ದೇವಿ ದುರ್ಗಾ’ ಪ್ರಶಸ್ತಿ ನೀಡಿ ಗೌರವಿಸಿದರು. “ಶಂಕರಾಚಾರ್ಯರ ಆಶೀರ್ವಾದದಿಂದ ಈ ಉಪಕ್ರಮವನ್ನು ನಡೆಸುತ್ತಿರುವ ಹಿಂದೂತ್ವನಿಷ್ಠರ ಸಂಕಲ್ಪವು ಇನ್ನಷ್ಟು ದೃಢವಾಗಿದೆ” ಎಂದು ಮೀನಾಕ್ಷಿ ಶರಣ್ ತಿಳಿಸಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!