ಲೋಕಸಭೆಯಲ್ಲಿ ‘VB-G Ram G’ Bill ವಿಧೇಯಕ ಅಂಗೀಕಾರ

ಮಸೂದೆಯ ಪ್ರತಿಗಳನ್ನು ಹರಿದು ಹಾಕಿದ ವಿರೋಧ ಪಕ್ಷ

(‘ವಿಬಿ-ಜಿ ರಾಮ್ ಜಿ’ ಎಂದರೆ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)) / (ಉದ್ಯೋಗ ಮತ್ತು ಜೀವನೋಪಾಯ ಮಿಷನ್)

ನವದೆಹಲಿ – ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ’ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಆದರೆ ವಿರೋಧ ಪಕ್ಷದವರು ಈ ಮಸೂದೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿರೋಧ ಪಕ್ಷದ ಸಂಸದರು ಮಸೂದೆಯ ಪ್ರತಿಗಳನ್ನು ಹರಿದು ಅದರ ಕಾಗದಗಳನ್ನು ಅಧ್ಯಕ್ಷರ ಎದುರಿನ ಪೀಠದ ಮುಂದಿರುವ ಖಾಲಿ ಜಾಗಕ್ಕೆ ಎಸೆದರು. ಈ ಹಿಂದಿನ ‘ಮನರೇಗಾ’ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಕಾನೂನಿನಲ್ಲಿ ಬದಲಾವಣೆ ಮಾಡಿ ಈ ಹೊಸ ವಿಧೇಯಕವನ್ನು ತರಲಾಗಿದೆ. ‘ಮನರೇಗಾ’ಯೋಜನೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದರಿಂದ ವಿರೋಧ ಪಕ್ಷದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ದೇಶದಲ್ಲಿ ಎಲ್ಲೆಡೆ ಗಾಂಧಿ ಮತ್ತು ನೆಹರೂ ಅವರದ್ದೇ ಹೆಸರುಗಳು !

ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಮಸೂದೆ ಬಗ್ಗೆ ಮಾತನಾಡಿ,

‘ಮನರೇಗಾ’ ಎಂಬುದು ಮೂಲತಃ ಮಹಾತ್ಮಾ ಗಾಂಧಿ ಅವರ ಹೆಸರಿನಲ್ಲಿರಲಿಲ್ಲ. ಅದು ಮೂಲತಃ ‘ನರೇಗಾ’ (NREGA) ಆಗಿತ್ತು. ನಂತರ ೨೦೦೯ ರ ಚುನಾವಣೆಗಳು ಬಂದಾಗ ಮತಗಳಿಗಾಗಿ ಕಾಂಗ್ರೆಸ್ಸಿಗೆ ಮಹಾತ್ಮಾ ಗಾಂಧಿಯವರ ನೆನಪಾಯಿತು. ಆಗ ಈ ಯೋಜನೆಗೆ ಮಹಾತ್ಮಾ ಗಾಂಧಿಯವರ ಹೆಸರನ್ನು ಸೇರಿಸಲಾಯಿತು. ನೆಹರೂ ಕುಟುಂಬದ ಹೆಸರನ್ನು ಎಷ್ಟು ಯೋಜನೆಗಳಿಗೆ ಇಡಲಾಗಿದೆ? ೫೫ ರಾಜ್ಯ ಸರಕಾರಿ ಯೋಜನೆಗಳಿಗೆ ರಾಜೀವ್ ಗಾಂಧಿ ಅವರ ಹೆಸರನ್ನು ಇಡಲಾಗಿದೆ. ೭೪ ರಸ್ತೆಗಳಿಗೆ ರಾಜೀವ್ ಗಾಂಧಿ ಅವರ ಹೆಸರನ್ನಿಡಲಾಗಿದೆ ಮತ್ತು ೧೫ ರಾಷ್ಟ್ರೀಯ ಉದ್ಯಾನವನಗಳಿಗೆ ನೆಹರೂ ಅವರ ಹೆಸರನ್ನು ಇಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನಾಮಕರಣದ ಹುಚ್ಚಿದೆ ಎಂದು ಚೌಹಾಣ್ ಟೀಕಿಸಿದರು.

ಸಂಪಾದಕೀಯ ನಿಲುವು

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ತಥಾಕಥಿತ ರಕ್ಷಣೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಹಾಗೂ ಉಳಿದ ವಿರೋಧ ಪಕ್ಷಗಳು ಅದೇ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಇಂತಹ ಅವಹೇಳನ ಮಾಡುತ್ತಿರುವುದನ್ನು ಜನರು ನೋಡುತ್ತಿದ್ದಾರೆ.