ಅಮೆರಿಕ ಮತ್ತು ವೆನೆಜುವೆಲಾ ನಡುವೆ ಯುದ್ಧದ ಸಾಧ್ಯತೆ ! : America Venezuela War

ಟ್ರಂಪ್ ವೆನೆಜುವೆಲಾವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಿದ್ದಾರೆ!

ಅಮೆರಿಕ ಮತ್ತು ವೆನೆಜುವೆಲಾ ನಡುವೆ ಯುದ್ಧದ ಸಾಧ್ಯತೆ

ವಾಷಿಂಗ್ಟನ್ – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ ಕುರಿತು ಸತತವಾಗಿ ಆಕ್ರಮಣಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಅಮೆರಿಕ ಮತ್ತು ವೆನೆಜುವೆಲಾ ನಡುವೆ ಯುದ್ಧದ ಸಾಧ್ಯತೆ ದಟ್ಟವಾಗಿದೆ. ಮಾದಕ ವಸ್ತುಗಳ ಸಾಗಣೆಯಿಂದ ಪ್ರಾರಂಭವಾದ ವಿವಾದವು ಈಗ ಇಂಧನ ಮತ್ತು ತೈಲ ಸಂಪನ್ಮೂಲಗಳ ವರೆಗೆ ತಲುಪಿದೆ. ಟ್ರಂಪ್ ಅವರು ವೆನೆಜುವೆಲಾವನ್ನು ತೀವ್ರವಾಗಿ ಟೀಕಿಸುತ್ತಾ ಅದನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸಿದ್ದಾರೆ.

. ವೆನೆಜುವೆಲಾವು ಅಮೆರಿಕದ ತೈಲ, ಇಂಧನ ಮತ್ತು ಸಂಪತ್ತಿನ ಮೇಲೆ ಅಕ್ರಮವಾಗಿ ನಿಯಂತ್ರಣ ಸಾಧಿಸಿದೆ. ವೆನೆಜುವೆಲಾ ಅಮೆರಿಕದ ಸ್ವತ್ತುಗಳನ್ನು ಮರಳಿ ನೀಡಬೇಕು. ಹಾಗೆ ಮಾಡದಿದ್ದಲ್ಲಿ ನಾವು ವೆನೆಜುವೆಲಾದಿಂದ ಅವುಗಳನ್ನು ಮರಳಿ ಪಡೆದೇ ಪಡೆಯುತ್ತೇವೆ ಎಂದು ಟ್ರಂಪ್ ಅವರು ದೃಢವಾಗಿ ಉಲ್ಲೇಖಿಸಿದ್ದಾರೆ.

. ವೆನೆಜುವೆಲಾದ ಸರಕಾರ ಸಂಘಟಿತ ಅಪರಾಧಗಳು, ಮಾದಕ ವಸ್ತುಗಳ ಸಾಗಣೆ ಮತ್ತು ಅಮೆರಿಕ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿದೆ ಎಂದು ಟ್ರಂಪ್ ಅವರು ಹೇಳಿದ್ದಾರೆ. ಇದೇ ಕಾರಣಗಳಿಗಾಗಿ ಟ್ರಂಪ್ ಅವರು ವೆನೆಜುವೆಲಾದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ.

. ಅಮೆರಿಕ ಮತ್ತು ವೆನೆಜುವೆಲಾ ಸಂಬಂಧಗಳು ದೀರ್ಘಕಾಲದಿಂದ ಉದ್ವಿಗ್ನಗೊಂಡಿವೆ. ನಿರ್ಬಂಧಗಳು, ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವುದು ಮತ್ತು ವಿರೋಧ ಪಕ್ಷದವರಿಗೆ ಬೆಂಬಲ ನೀಡುವುದು ಮುಂತಾದ ಕ್ರಮಗಳನ್ನು ಅಮೆರಿಕವು ವೆನೆಜುವೆಲಾದ ವಿರುದ್ಧ ಈ ಹಿಂದೆಯೂ ಕೈಗೊಂಡಿದೆ, ಇದರಿಂದಾಗಿ ಎರಡೂ ದೇಶಗಳ ನಡುವಿನ ಅಪನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕವು ಸಾಮ್ರಾಜ್ಯಶಾಹಿ ನೀತಿಯನ್ನು ಅನುಸರಿಸುತ್ತಿದೆ ಎಂದು ವೆನೆಜುವೆಲಾ ಸರಕಾರವು ಆರೋಪಿಸಿದೆ.

. ‘ಅಮೆರಿಕಾ ಆಕ್ರಮಣ ಮಾಡಿದರೆ, ಆಕ್ರಮಣಕ್ಕೆ ಆಕ್ರಮಣದ ಮೂಲಕವೇ ಉತ್ತರ ನೀಡಲಾಗುವುದು’ ಎಂದು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.