ಭಾರತದಲ್ಲಿರುವ ಬಾಂಗ್ಲಾದೇಶದ ಹೈಕಮಿಷನರ್ ಗೆ ತರಾಟೆಗೆ ತೆಗೆದುಕೊಂಡ ಭಾರತ

ಈಶಾನ್ಯ ಭಾರತವನ್ನು ಪ್ರತ್ಯೇಕಿಸುವ ಬಾಂಗ್ಲಾದೇಶಿ ನಾಯಕ ಬೆದರಿಕೆ ನೀಡಿದ ಪ್ರಕರಣ !

ನವ ದೆಹಲಿ – ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿಯ (ಎನ್.ಸಿ.ಪಿ) ನಾಯಕ ಹಸನತ್ ಅಬ್ದುಲ್ಲಾ ಅವರು ‘ಬಾಂಗ್ಲಾದೇಶದಲ್ಲಿ ಅಸ್ಥಿರತೆ ಉಂಟಾದರೆ ಈಶಾನ್ಯ ಭಾರತದ ೭ ರಾಜ್ಯಗಳನ್ನು ಪ್ರತ್ಯೇಕಿಸುತ್ತೇವೆ ಮತ್ತು ಅಲ್ಲಿನ ಪ್ರತ್ಯೇಕತಾವಾದಿ ಗುಂಪುಗಳಿಗೆ ಆಶ್ರಯ ನೀಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಈ ಪ್ರಚೋದನಾಕಾರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಭಾರತವು ದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮಿಷನರ್ಗೆ ತಕ್ಷಣವೇ ಹಾಜರಾಗುವಂತೆ ಆದೇಶ ನೀಡಿ ಈ ಬೆದರಿಕೆಯ ಬಗ್ಗೆ ಭಾರತವು ನೇರವಾಗಿ ವಿವರಣೆಯನ್ನು ಕೇಳಿತು. ಈ ವಿಷಯದ ಕುರಿತು ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ಸುಮಾರು ೨೦ ನಿಮಿಷಗಳ ಕಾಲ ಚರ್ಚೆ ನಡೆಯಿತು.

ಈ ಮೊದಲು ದೆಹಲಿಯ ಬಾಂಗ್ಲಾದೇಶ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬಾಂಗ್ಲಾದೇಶದ ವಿಜಯ ದಿನವನ್ನು ಆಚರಿಸಲಾಯಿತು. ಹೈಕಮಿಷನರ್ ಎಂ. ರಿಯಾಜ್ ಹಮೀದುಲ್ಲಾ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಯುವ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದರು. ಡಿಸೆಂಬರ್ ೧೬, ೧೯೭೧ ರಂದು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶವನ್ನು ನಿರ್ಮಿಸಲಾಯಿತು. ಭಾರತೀಯ ಸೇನೆಯು ಸಹ ಈ ದಿನವನ್ನು ವಿಜಯ ದಿನವನ್ನಾಗಿ ಆಚರಿಸುತ್ತದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶಕ್ಕೆ ಕೇವಲ ತರಾಟೆಗೆ ತೆಗೆದುಕೊಂಡರೆ ಸಾಲದು, ಬದಲಾಗಿ ಅದಕ್ಕೆ ಜೀವನಪೂರ್ತಿ ಮರೆಯಲಾಗದಂತಹ ಪಾಠ ಕಲಿಸುವುದು ಆವಶ್ಯಕವಾಗಿದೆ!