‘ಆಪರೇಷನ್ ಸಿಂದೂರ್’ಗೆ ಅವಮಾನ; ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ ಇವರಿಂದ ಕ್ಷಮೆಯಾಚಿಸಲು ನಿರಾಕರಣೆ !

  • ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತ ಮೊದಲ ದಿನವೇ ಸೋತಿತ್ತು ಎಂಬ ಖೇದಕರ ಹೇಳಿಕೆ ನೀಡಿತ್ತು !

  • ಭಾಜಪದಿಂದ ಕ್ಷಮೆಯಾಚನೆಗೆ ಆಗ್ರಹ !

ಮುಂಬಯಿ – ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ ಅವರು ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತವು ಮೊದಲ ದಿನವೇ ಸೋಲನ್ನು ಅನುಭವಿಸಿತ್ತು ಮತ್ತು ಭಾರತದ ವಾಯುಸೇನೆ ಸ್ಥಗಿತಗೊಂಡಿತ್ತು, ಎಂದು ಅತ್ಯಂತ ಖೇದಕರ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಭಾಜಪ ಅವರನ್ನು ಟೀಕಿಸಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ; ಆದರೆ ಪೃಥ್ವಿರಾಜ್ ಚವಾಣ ಅವರು, ‘ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಕ್ಷಮೆ ಕೇಳುವುದಿಲ್ಲ. ನನಗೆ ಪ್ರಶ್ನೆ ಕೇಳುವ ಅಧಿಕಾರವಿದೆ. ನಾನು ಏಕೆ ಕ್ಷಮೆ ಕೇಳಬೇಕು?’’ಎಂದು ಹೇಳಿದ್ದಾರೆ.

ಪೃಥ್ವಿರಾಜ್ ಚವಾಣ್ ಹೇಳಿದ್ದೇನು?

ಪಹಲ್ಗಾಮ್ ದಾಳಿಯ ನಂತರ ಭಾರತವು ‘ಆಪರೇಷನ್ ಸಿಂದೂರ್’ ಕ್ರಮ ಕೈಕೊಂಡಿತ್ತು. ಮೊದಲ ದಿನ ಅರ್ಧ ಗಂಟೆಯಲ್ಲಿಯೇ ನಮ್ಮ ಕೆಲವು ವಿಮಾನಗಳನ್ನು ಹೊಡೆದು ಉರುಳಿಸಲಾಯಿತು. ಅದರ ನಂತರ ಸೈನ್ಯದ ಎಲ್ಲಾ ವಿಮಾನಗಳನ್ನು ಕೆಳಗಿಳಿಸಲಾಯಿತು. ಆ ದಿನ ಭಾರತದ ಯುದ್ಧ ವಿಮಾನಗಳು ಎಲ್ಲಿಯೂ ಹಾರಾಟ ನಡೆಸಲಿಲ್ಲ. ಗ್ವಾಲಿಯರ್, ಭಟಿಂಡಾ ಅಥವಾ ಸಿರ್ಸಾದ ವಾಯುನೆಲೆಗಳಿಂದ ಒಂದೇ ಒಂದು ವಿಮಾನವು ಹಾರಲಿಲ್ಲ. ಆಪರೇಷನ್ ಸಿಂದೂರ್‍‌ನಲ್ಲಿ ಭಾರತೀಯ ಸೈನ್ಯದ ಒಂದು ಕಿಲೋಮೀಟರ್ ಚಲನೆಯೂ ಆಗಲಿಲ್ಲ. ೨-೩ ದಿನ ನಡೆದ ಈ ಯುದ್ಧದಲ್ಲಿ ಕೇವಲ ವೈಮಾನಿಕ ದಾಳಿ ಮತ್ತು ಕ್ಷಿಪಣಿಗಳನ್ನು ಉಡಾಯಿಸಲಾಯಿತು. ಭವಿಷ್ಯದಲ್ಲಿಯೂ ಇಂತಹ ಯುದ್ಧಗಳೇ ನಡೆಯಲಿವೆ. ಇಂತಹ ಸಮಯದಲ್ಲಿ ನಾವು ೧೨ ಲಕ್ಷದ ಸೈನ್ಯದಳವನ್ನು ಹೊಂದಿರಬೇಕೇ? ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತೀಯ ಸೇನೆಗೆ ಹಾನಿಯಾಗಿದೆ; ಆದರೆ ಕೇಂದ್ರ ಸರಕಾರವು ಈ ಮಾಹಿತಿಯನ್ನು ಮುಂದೆ ತಂದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ಸಂಪಾದಕೀಯ ನಿಲುವು

ಭಾರತಕ್ಕೆ ಬಾಹ್ಯ ಶತ್ರುಗಳಿಂದ ಎಷ್ಟು ಅಪಾಯವಿದೆಯೋ, ಅದಕ್ಕಿಂತ ಹೆಚ್ಚಿನ ಅಪಾಯವು ಭಾರತದ ವಿರುದ್ಧ ವೈಚಾರಿಕ ಮಾಲಿನ್ಯ ಹರಡುವ ಚವಾಣ ಅವರಂತಹ ನಾಯಕರಿಂದ ಇದೆ. ಭಾರತೀಯ ಸೇನೆಯ ಕಾರ್ಯಕ್ಷಮತೆಯ ಬಗ್ಗೆ ಬಹಿರಂಗವಾಗಿ ಅಪನಂಬಿಕೆ ತೋರುವ ಇಂತಹ ರಾಷ್ಟ್ರಘಾತಕ ನಾಯಕರು ಮಹಾರಾಷ್ಟ್ರದ ಕೆಲ ಕಾಲ ಮುಖ್ಯಮಂತ್ರಿಯಾಗಿದ್ದರು ಎನ್ನುವುದಕ್ಕಿಂತ ದೊಡ್ಡ ದುರಂತ ಇನ್ನೇನಿದೆ?