(ಏಮ್ಸ್ – ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ – ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)

ನವದೆಹಲಿ – ಕಳೆದ ಕೆಲವು ವರ್ಷಗಳಲ್ಲಿ ಯುವಕರು ಹಠಾತ್ತಾಗಿ ಸಾವನ್ನಪ್ಪುತ್ತಿರುವ ಘಟನೆಗಳು ಗಣನೀಯವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಕೆಲವರು ಇದನ್ನು ಕೊರೊನಾ ಲಸಿಕೆಗೆ ಜೋಡಿಸುತ್ತಿದ್ದರು; ಆದರೆ ‘ಏಮ್ಸ್’ ನಡೆಸಿದ ವಿವರವಾದ ಅಧ್ಯಯನವು ಈ ವಿಷಯದ ಮೇಲಿನ ಎಲ್ಲಾ ಚರ್ಚೆಗಳಿಗೆ ಪೂರ್ಣವಿರಾಮ ಹಾಕಿದೆ. ಯುವಕರಲ್ಲಿನ ಹಠಾತ್ ಸಾವು ಮತ್ತು ಕೊರೊನಾ ಲಸಿಕೆಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ‘ಏಮ್ಸ್’ ಸ್ಪಷ್ಟಪಡಿಸಿದೆ. ಸುಮಾರು ಒಂದು ವರ್ಷ ಕಾಲ ನಡೆದ ಅಧ್ಯಯನದಿಂದ ಇದು ಸ್ಪಷ್ಟವಾಗಿದೆ ಎಂದು ಏಮ್ಸ್ ಹೇಳಿದೆ.
ಏಮ್ಸ್‌ನ ಈ ವರದಿಯು ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ನಲ್ಲಿ ಪ್ರಕಟವಾಗಿದೆ. ಹಠಾತ್ ಸಾವುಗಳಿಗೆ ಲಸಿಕೆ ಕಾರಣವಲ್ಲ, ಬದಲಿಗೆ ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳೇ ಕಾರಣ ಎಂದು ಅದರಲ್ಲಿ ತಿಳಿಸಲಾಗಿದೆ.
೧. ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ ಮತ್ತು ‘ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು ನಡೆಸಿದ ತಪಾಸಣೆಯಲ್ಲೂ ಭಾರತದ ಕೊರೊನಾ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ.
೨. ‘ಏಮ್ಸ್’ ಸಂಶೋಧನೆಯಲ್ಲಿ ೧೮ ರಿಂದ ೪೫ ವರ್ಷ ವಯಸ್ಸಿನ ಯುವಕರನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ. ಕೊರೊನಾ ಲಸಿಕೆ ಪಡೆದವರು ಮತ್ತು ಲಸಿಕೆ ಪಡೆಯದವರಲ್ಲಿ ಹಠಾತ್ ಸಾವಿನ ಅಪಾಯ ಅಥವಾ ಸಾವು ಸಂಭವಿಸುವ ರೀತಿ ಒಂದೇ ಆಗಿತ್ತು ಎಂಬ ಪ್ರಮುಖ ಅಂಶ ಈ ತಪಾಸಣೆಯಲ್ಲಿ ಕಂಡುಬಂದಿದೆ. ಆದ್ದರಿಂದ, ಯುವಕರ ಈ ಆಕಸ್ಮಿಕ ಸಾವುಗಳಿಗೂ ಲಸಿಕೆಗೂ ನೇರ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ.
೩. ಅಧ್ಯಯನದ ಪ್ರಕಾರ, ಯುವಕರಲ್ಲಿ ಹಠಾತ್ ಸಾವಿಗೆ ಅತ್ಯಂತ ದೊಡ್ಡ ಮತ್ತು ಪ್ರಮುಖ ಕಾರಣ ‘ಕೊರೊನರಿ ಆರ್ಟರಿ’ (Coronary Artery) ಕಾಯಿಲೆ ಎಂದು ಕಂಡುಬಂದಿದೆ. ಈ ಕಾಯಿಲೆಯಿಂದಾಗಿ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಸುವ ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗಿ ಅವು ಕಿರಿದಾಗುತ್ತವೆ ಅಥವಾ ಗಟ್ಟಿಯಾಗುತ್ತವೆ. ಇದರಿಂದ ಹೃದಯಕ್ಕೆ ಪೂರೈಕೆಯಾಗುವ ಆಮ್ಲಜನಕಯುಕ್ತ ರಕ್ತದ ಪ್ರಮಾಣ ಕಡಿಮೆಯಾಗಿ ಹೃದಯಾಘಾತ ಸಂಭವಿಸುತ್ತದೆ.
೪. ಈ ಅಧ್ಯಯನವನ್ನು ಮೇ ೨೦೨೩ ರಿಂದ ಏಪ್ರಿಲ್ ೨೦೨೪ ರ ಅವಧಿಯಲ್ಲಿ ನಡೆಸಲಾಗಿದ್ದು, ಹಠಾತ್ತಾಗಿ ಸಾವನ್ನಪ್ಪಿದ ಒಟ್ಟು ೧೮೦ ಪ್ರಕರಣಗಳನ್ನು ಇದರಲ್ಲಿ ಪರಿಶೀಲಿಸಲಾಗಿದೆ.
೫. ಹಠಾತ್ ಸಾವುಗಳಿಗೆ ‘ಕೊರೊನರಿ ಆರ್ಟರಿ’ ಕಾಯಿಲೆಯೇ ಮುಖ್ಯ ಕಾರಣವಾಗಿರುವುದರಿಂದ, ಯುವಕರು ತಮ್ಮ ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ, ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”