
ಚೆನ್ನೈ (ತಮಿಳುನಾಡು) – ಪ್ರಸ್ತುತ ದೇಶದಲ್ಲಿ ಮಂದಿರಗಳ ನಿರ್ವಹಣೆಯನ್ನು ಸರಕಾರವು ಮಾಡುತ್ತಿದೆ. ಈ ಪದ್ಧತಿಯನ್ನು ಬದಲಾಯಿಸಿ ಮಂದಿರದ ನಿರ್ವಹಣೆಯನ್ನು ಭಕ್ತರೇ ನೋಡಿಕೊಳ್ಳಬೇಕು. ಕೆಲವು ಮಂದಿರಗಳ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳು ಉತ್ತಮವಾಗಿ ನಡೆಸುತ್ತಾರೆ; ಇನ್ನೂ ಕೆಲವು ಮಂದಿರಗಳ ನಿರ್ವಹಣೆಯನ್ನು ಚೆನ್ನಾಗಿ ನಡೆಸಲಾಗುವುದಿಲ್ಲ. ಅದೇ ರೀತಿ ಕೆಲವು ಮಂದಿರಗಳ ನಿರ್ವಹಣೆಯನ್ನು ಸರಕಾರವು ಉತ್ತಮವಾಗಿ ನಡೆಸುತ್ತದೆ; ಆದರೆ ಕೆಲವು ಮಂದಿರಗಳ ನಿರ್ವಹಣೆಯನ್ನು ಉತ್ತಮವಾಗಿ ನಡೆಸಲಾಗುವುದಿಲ್ಲ. ಪ್ರಸ್ತುತ ಮಂದಿರಗಳ ನಿರ್ವಹಣೆಯನ್ನು ನಡೆಸಲು ಒಂದು ವ್ಯವಸ್ಥೆಯ ಅಗತ್ಯವಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಅಖಿಲ ಭಾರತ ಸಮಿತಿ, ಪ್ರಾಂತೀಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಸ್ಥಳೀಯ ಸಮಿತಿ ಇರಬೇಕು. ಒಮ್ಮೆ ಈ ವ್ಯವಸ್ಥೆ ನಿರ್ಮಾಣವಾದರೆ, ಮಂದಿರಗಳ ನಿರ್ವಹಣೆಯನ್ನು ಸರಕಾರದ ಬದಲಾಗಿ ಭಕ್ತರು ಮಾಡಬೇಕೆ? ಎಂಬ ಬಗ್ಗೆ ಇರುವ ಎಲ್ಲ ಪ್ರಶ್ನೆಗಳಿಗೂ ಪರಿಹಾರ ಸಿಗುತ್ತದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಳಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ