ಶ್ರೀಮಂತರಿಗಾಗಿ ದೇವರ ವಿಶ್ರಾಂತಿಯಲ್ಲಿ ಏಕೆ ಹಸ್ತಕ್ಷೇಪ ಮಾಡಲಾಗುತ್ತದೆ? : Banke Bihari Temple

ಬೃಂದಾವನದ (ಉತ್ತರ ಪ್ರದೇಶ) ಬಾ೦ಕೆ ಬಿಹಾರಿ ದೇವಸ್ಥಾನದ ದೇವರ ವಿಶ್ರಾಂತಿ ಸಮಯದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ!

ಬಂಕೆ ಬಿಹಾರಿ ದೇವಸ್ಥಾನ

ಬೃಂದಾವನ (ಉತ್ತರ ಪ್ರದೇಶ) – ಇಲ್ಲಿನ ಶ್ರೀ ಬಾ೦ಕೆ ಬಿಹಾರಿ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ದರ್ಶನದ ಸಮಯವನ್ನು ಹೆಚ್ಚಿಸಿದರೆ ಅದರ ಬಗ್ಗೆ ಏಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತದೆ? ಪ್ರಸ್ತುತ ದೇವರ ವಿಶ್ರಾಂತಿಯ ಸಮಯದಲ್ಲಿ ಅವರಿಗೆ ಎಲ್ಲಿ ವಿಶ್ರಾಂತಿ ನೀಡಲಾಗುತ್ತದೆ? ಈ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ; ಆದರೆ ಹಣ ನೀಡುವ ಶ್ರೀಮಂತ ಭಕ್ತರಿಗೆ ಪೂಜೆ ಮಾಡಲು ಏಕೆ ಅನುಮತಿ ನೀಡಲಾಗುತ್ತದೆ? ಎಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ. ದೇವಸ್ಥಾನದ ನಿರ್ವಹಣೆಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡ ಸಮಿತಿಯು ಪ್ರತಿದಿನ ಸುಮಾರು ಎರಡೂವರೆ ಗಂಟೆಗಳ ಕಾಲ ದರ್ಶನದ ಸಮಯವನ್ನು ಹೆಚ್ಚಿಸಿದೆ ಮತ್ತು ದೇವಸ್ಥಾನದ ಸೇವಕರು ಇದನ್ನು ವಿರೋಧಿಸುತ್ತಿದ್ದಾರೆ.

. ದೇವಸ್ಥಾನದ ಮೂಲ ನಿರ್ವಹಣಾ ಸಮಿತಿಯ ಪರವಾಗಿ ವಕೀಲರಾದ ಶ್ಯಾಮ ದಿವಾನ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ದರ್ಶನದ ಸಮಯವನ್ನು ಹೆಚ್ಚಿಸುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅವರು, ದರ್ಶನದ ಸಮಯವನ್ನು ಬದಲಾಯಿಸಲು ಸಾಧ್ಯವಿಲ್ಲ; ಏಕೆಂದರೆ ಇದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ದರ್ಶನದ ಸಮಯದಲ್ಲಿ ಬದಲಾವಣೆ ಮಾಡಿದರೆ, ದೇವರು ಜಾಗರೂಕರಾಗಿರುವ ಮತ್ತು ಮಲಗುವ ಸಮಯವೂ ಬದಲಾಗುತ್ತದೆ. ದೇವರ ವಿಶ್ರಾಂತಿಗಾಗಿ ನಿಗದಿತ ಸಮಯವಿದೆ ಮತ್ತು ಅದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು, ದೇವರ ವಿಶ್ರಾಂತಿಯ ಸಮಯದಲ್ಲಿ ಅವರಿಗೆ ನಿಖರವಾಗಿ ಎಲ್ಲಿ ವಿಶ್ರಾಂತಿ ನೀಡಲಾಗುತ್ತದೆ? ಈ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನವನ್ನು ನಿಲ್ಲಿಸಲಾಗುತ್ತದೆ, ಮಧ್ಯಾಹ್ನ ೧೨ ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ; ಆದರೂ ದೇವರಿಗೆ ಒಂದು ಕ್ಷಣವೂ ಶಾಂತಿಯನ್ನು ನೀಡಲಾಗುವುದಿಲ್ಲ. ಈ ಸಮಯದಲ್ಲಿ ಪ್ರಭಾವಶಾಲಿ ಜನರು ದೊಡ್ಡ ಮೊತ್ತದ ಹಣವನ್ನು ನೀಡಿ ಪೂಜೆ ಮಾಡುತ್ತಾರೆ ಮತ್ತು ಅವರಿಗೆ ಅನುಮತಿ ನೀಡಲಾಗುತ್ತದೆ ಎಂದು ಪ್ರಶ್ನಿಸಿದರು.

. ಇದಕ್ಕೆ ವಕೀಲರಾದ ಶ್ಯಾಮ ದಿವಾನ್ ಅವರು, ಅಂತಹ ಯಾವುದೇ ನೇರ ದೂರು ಇಲ್ಲ; ಆದರೆ ನ್ಯಾಯಾಲಯದ ಅನುಮಾನವನ್ನು ಗಣನೆಗೆ ತೆಗೆದುಕೊಳ್ಳಬಹುದು ಮತ್ತು ಅದನ್ನು ಪರಿಶೀಲಿಸಬಹುದು. ಆದರೂ ದರ್ಶನದ ಸಮಯವನ್ನು ಬದಲಾಯಿಸುವುದು ಸರಿಯಲ್ಲ ಎಂದು ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದಿಂದ ನೋಟಿಸ್

ದೇವಸ್ಥಾನದ ಹಳೆಯ ನಿರ್ವಹಣಾ ಸಮಿತಿಯು ಸಲ್ಲಿಸಿದ ಅರ್ಜಿಯಲ್ಲಿ, ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯು ಸೇವಕರನ್ನು ಏಕಪಕ್ಷೀಯವಾಗಿ ನೇಮಕ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯ, ನೇಮಕಗೊಂಡ ಸಮಿತಿ, ಉತ್ತರ ಪ್ರದೇಶ ಸರಕಾರ ಮತ್ತು ಮಥುರಾ ಬೃಂದಾವನ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ ಮೊದಲ ವಾರದಲ್ಲಿ ನಡೆಯಲಿದೆ.