ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

‘ಧರ್ಮೇಣ ಜಯತಿ ರಾಷ್ಟ್ರಮ್ ।’ ಇದು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಘೋಷವಾಕ್ಯವಾಗಿದೆ. ‘ಧರ್ಮೇಣ ಜಯತಿ ರಾಷ್ಟ್ರಮ್’ ವಿಡಿಯೋವನ್ನು ‘ಮೂವಿಂಗ್ ಪಿಕ್ಸೆಲ್’ ಮೂಲಕ ಪ್ರಕಟಿಸಲಾಗಿದೆ. ಇದರ ಸಂಸ್ಥಾಪಕರು ಮನೀಷ ಬಾರ್ಡಿಯಾ. ವಿಡಿಯೋದ ಲೇಖಕಿ ಮತ್ತು ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈಶಾಲಿ ಶಹಾ ಆಗಿದ್ದಾರೆ, ಮತ್ತು ಇದರಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿರುವವರು ಅವರ ಮಗಳು ಹೀರಾ ಶಹಾ. ಈ ಉತ್ಕೃಷ್ಟ ವಿಡಿಯೋವನ್ನು ತಯಾರಿಸಿ, ಅದರ ಪ್ರಭಾವಿ ಪ್ರಸಾರ ಮಾಡಿದ ಸಂಪೂರ್ಣ ತಂಡವನ್ನು ಆಯೋಜಕರ ಪರವಾಗಿ ಅಭಿನಂದಿಸಲಾಯಿತು. ಹಾಗೆಯೇ ಅವರಿಗೆ ಶುಭಾಶಯಗಳನ್ನು ಕೋರಲಾಯಿತು. ಛತ್ರಪತಿ ಶಿವಾಜಿ ಮಹಾರಾಜರು ಐದು ಆಡಳಿತಗಾರರನ್ನು ಸೋಲಿಸಿ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರು. ಆ ಮಹಾನಾಯಕನ ಜೀವನವನ್ನು ಆಧರಿಸಿದ ಪ್ರದರ್ಶನದ ಪ್ರಯೋಜನ ಪಡೆಯುವಂತೆ ಈ ವಿಡಿಯೋದಲ್ಲಿ ಆಹ್ವಾನ ನೀಡಲಾಗಿದೆ.
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಮಾಧ್ಯಮಗಳ ಭಾರೀ ಪ್ರತಿಸ್ಪಂದನೆ
೭೮ ಪ್ರತಿನಿಧಿಗಳು ಹಾಜರಿದ್ದರು
ಶಂಖನಾದ ಮಹೋತ್ಸವಕ್ಕಾಗಿ ಡಿಸೆಂಬರ್ ೧೩ ರಂದು ‘ಎಬಿಪಿ ಲೈವ್’, ‘ಎಬಿಪಿ ನ್ಯೂಸ್’, ‘ಟೈಮ್ಸ್ ನೌ’, ‘ರಿಪಬ್ಲಿಕ್ ಭಾರತ್’, ‘ಸಿ.ಎನ್.ಎನ್. ಐ.ಬಿ.ಎನ್.’, ‘ನ್ಯೂಸ್ ೧೮’ ದಂತಹ ಪ್ರಸಿದ್ಧ ಸುದ್ದಿವಾಹಿನಿಗಳು ಮತ್ತು ವೃತ್ತಪತ್ರಿಕೆಗಳೂ ಸೇರಿದಂತೆ ಒಟ್ಟು ೭೮ ಪ್ರತಿನಿಧಿಗಳು ವರದಿಗಾರಿಕೆ ಮತ್ತು ವಿಶೇಷ ವರದಿ (ಸ್ಪೆಷಲ್ ಸ್ಟೋರಿ) ಮಾಡಲು ಬಂದಿದ್ದರು. ‘ರಿಪಬ್ಲಿಕ್ ಭಾರತ್’ ವಾಹಿನಿಯು ಮಹೋತ್ಸವವನ್ನು ತಮ್ಮ ‘ಡಿಜಿಟಲ್’ ವಾಹಿನಿಯಲ್ಲಿ ನೇರ ಪ್ರಸಾರ ಮಾಡಿತು.
ಶಸ್ತ್ರಾಸ್ತ್ರ ಪ್ರದರ್ಶನ ನೋಡಲು ಅವಶ್ಯ ಬನ್ನಿ! – ಸ್ವಾಮಿ ದೀಪಾಂಕರ
ಪ್ರಸಿದ್ಧ ಭಿಕ್ಷಾ ಯಾತ್ರೆಯ ಪ್ರವರ್ತಕರಾದ ಸ್ವಾಮಿ ದೀಪಾಂಕರ ಅವರು ಶಸ್ತ್ರಾಸ್ತ್ರ ಪ್ರದರ್ಶನಕ್ಕೆ ಭೇಟಿ ನೀಡಿದರು. ಅವರು ಮಾತನಾಡಿ, ಈ ಶಸ್ತ್ರಾಸ್ತ್ರ ಪ್ರದರ್ಶನವನ್ನು ನೋಡಿ ರೋಮಾಂಚನವಾಯಿತು. ಶಸ್ತ್ರಾಸ್ತ್ರ ಪ್ರದರ್ಶನವನ್ನು ನೋಡಿದ ನಂತರ ನಮ್ಮ ಪೂರ್ವಜರ ಬಗ್ಗೆ ಹೆಮ್ಮೆಯೆನಿಸುತ್ತದೆ, ಹಾಗೆಯೇ ಜೀವನಕ್ಕೆ ಮುಂದಿನ ಮಾರ್ಗದರ್ಶನ ದೊರೆಯುತ್ತದೆ. ಈ ಪ್ರದರ್ಶನವನ್ನು ನೋಡಲು ನೀವು ಅವಶ್ಯವಾಗಿ ಬನ್ನಿ ಎಂದರು. (ಸ್ವಾಮಿ ದೀಪಾಂಕರ ಅವರು ೨೦೨೨ ರಲ್ಲಿ ಗ್ರಾಮ, ಗ್ರಾಮಗಳನ್ನು ಸುತ್ತಿ, ಜಾತಿ ಬಂಧನಗಳನ್ನು ಮುರಿದು ಸನಾತನಿ ಹಿಂದೂಗಳಾಗಿ ಒಂದಾಗುವ ಭಿಕ್ಷೆಯನ್ನು ನನಗೆ ನೀಡಿರಿ ಎಂದು ಹಿಂದೂಗಳಿಗೆ ಆಹ್ವಾನ ನೀಡಿದ್ದರು. ಸುಮಾರು ೧ ವರ್ಷ ಅವರು ಇದಕ್ಕಾಗಿ ಸಂಚರಿಸುತ್ತಿದ್ದರು.)
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ