ಮಣಿಪುರದ ‘ಥಾಂಗ್-ತಾ’ ಎಂಬ ಪ್ರಾಚೀನ ಯುದ್ಧಕಲೆಯ ಪ್ರದರ್ಶನ! Shankanad Mahotsav Delhi 2025

‘ಥಾಂಗ್-ತಾ’ ಯುದ್ಧಕಲೆಯ ಪ್ರದರ್ಶನ ಮಾಡುತ್ತಿರುವ ಮಣಿಪುರದ ಯುವಕರು

ಮಣಿಪುರದ ‘ಥಾಂಗ್-ತಾ’ ಎಂಬ ಪ್ರಾಚೀನ ಯುದ್ಧಕಲೆಯ ಪ್ರದರ್ಶನವನ್ನು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಪ್ರದರ್ಶಿಸಲಾಯಿತು. ಮಣಿಪುರದ ಮೈತೈ ಸಮುದಾಯದಲ್ಲಿ ಪ್ರಾಚೀನ ಕಾಲದಿಂದಲೂ ಪೋಷಿಸಿಕೊಂಡು ಬಂದಿರುವ ‘ಥಾಂಗ್-ತಾ’ ಒಂದು ಯುದ್ಧಕಲೆಯಾಗಿದೆ. ಕೇವಲ ಯುದ್ಧಕಲೆ ಮಾತ್ರವಲ್ಲ, ಸನಾತನ ಸಂಪ್ರದಾಯದ ಪರಂಪರೆ ಮತ್ತು ಒಂದು ಆಧ್ಯಾತ್ಮಿಕ ಸಾಧನೆಯಾಗಿ ‘ಥಾಂಗ್-ತಾ’ ಯುದ್ಧಕಲೆಯನ್ನು ಮಣಿಪುರದಲ್ಲಿ ಪೋಷಿಸಲಾಗಿದೆ. ನೃತ್ಯ ಮತ್ತು ಅಭಿನಯದಂತೆ ಲಯಬದ್ಧ ಮತ್ತು ನಿಯಂತ್ರಣಬದ್ಧ ಚಲನೆಗಳು ಈ ಯುದ್ಧಕಲೆಯ ವೈಶಿಷ್ಟ್ಯವಾಗಿದೆ.

ಈ ಯುದ್ಧಕಲೆಯಿಂದ ಶರೀರದ ಚುರುಕುತನ, ಏಕಾಗ್ರತೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಈ ಕಲೆಯಲ್ಲಿ ಉಸಿರಿನ ಮೇಲಿನ ನಿಯಂತ್ರಣ ಮುಖ್ಯವೆಂದು ಹೇಳಲಾಗಿದೆ. ಆಕ್ರಮಣಕಾರರಿಂದ ಭೂಮಿ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಈ ಯುದ್ಧಕಲೆಯನ್ನು ಬಳಸಲಾಯಿತು ಎಂಬುದು ಮಣಿಪುರದ ಇತಿಹಾಸವಾಗಿದೆ. ಮಣಿಪುರದ ಗುರುಕುಲಗಳಲ್ಲಿ ಇಂದಿಗೂ ಈ ಸಾಂಪ್ರದಾಯಿಕ ಯುದ್ಧಕಲೆಯನ್ನು ಕಲಿಸಲಾಗುತ್ತದೆ. ಪ್ರಸ್ತುತ ಕಾಲದಲ್ಲಿ, ಆಧುನಿಕ ಕ್ರೀಡಾ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಯುದ್ಧಕಲೆಯ ಮಹತ್ವ ಹೆಚ್ಚುತ್ತಿದೆ.

ಕೊಲ್ಲಾಪುರದ ‘ಸವ್ಯಸಾಚಿ ಗುರುಕುಲಮ್’ ನಿಂದ ಮಹೋತ್ಸವದಲ್ಲಿ ಶಸ್ತ್ರಕಲಾ ಪ್ರದರ್ಶನ!

ಕೊಲ್ಲಾಪುರದ ‘ಸವ್ಯಸಾಚಿ ಗುರುಕುಲಮ್’ ವಿದ್ಯಾರ್ಥಿಗಳು ಮಹೋತ್ಸವದಲ್ಲಿ ಲಾಠಿ, ಭಾಲೆ, ದಂಡಪಟ್ಟಾ, ಕೊಡಲಿಗಳು, ಚಕ್ರಪಾಶ, ಕತ್ತಿ, ವಿಟಾ ಇತ್ಯಾದಿ ಶಿವಾಜಿ ಮಹಾರಾಜರ ಕಾಲದ ಶಸ್ತ್ರಕಲೆಗಳನ್ನು ಪ್ರದರ್ಶಿಸಿದರು. ಒಂದೇ ಸಮಯದಲ್ಲಿ ಅನೇಕ ಶತ್ರುಗಳೊಂದಿಗೆ ಹೇಗೆ ಹೋರಾಡಬೇಕು? ಯುವತಿಯರು ಈ ಶಸ್ತ್ರಾಸ್ತ್ರಗಳಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು? ಎಂಬುದರ ಮಾಹಿತಿಯನ್ನೂ ಸಹ ನೀಡಲಾಯಿತು. ಈ ಶಸ್ತ್ರಕಲೆಯನ್ನು ನೋಡಿದವರಲ್ಲಿ ಕ್ಷಾತ್ರವೃತ್ತಿ ನಿರ್ಮಾಣವಾಯಿತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಉತ್ಸಾಹದಿಂದ ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’, ‘ಹರ ಹರ ಮಹಾದೇವ’ ಎಂಬ ಘೋಷಣೆಗಳನ್ನು ಕೂಗಿದರು.