SRSmahotsav Delhi 2025 : ಭಾರತದ ರಾಜಧಾನಿಯಲ್ಲಿ ಸನಾತನ ರಾಷ್ಟ್ರದ ಶಂಖನಾದ!

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

  • ಉಪಸ್ಥಿತ ಧರ್ಮಪ್ರೇಮಿಗಳಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಜಯಘೋಷ

  • ವಿವಿಧ ಘೋಷಣೆಗಳಿಂದ ತುಂಬಿ ಹೋದ ಸಭಾಂಗಣ

ಎಡದಿಂದ : ಶ್ರೀ. ಸುರೇಶ ಚವಾಣಕೆ, ಶ್ರೀ. ಉದಯ್ ಮಾಹೂರ್ಕರ್, ಶ್ರೀ. ಅಭಯ ವರ್ತಕ, ದೀಪ ಪ್ರಜ್ವಲಿಸುತ್ತಿರುವ ಮಹಾಮಂಡಲೇಶ್ವರ ಸ್ವಾಮಿ ಪೂ. ಶಾಂತಿಗಿರಿ ಮಹಾರಾಜರು, ಶ್ರೀ. ಕಪಿಲ ಮಿಶ್ರಾ, ಸದ್ಗುರು ಡಾ. ಚಾರುದತ್ತ ಪಿಂಗಳೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ದಹಲಿ, ಡಿಸೆಂಬರ್ 12 (ವಾರ್ತೆ) – ದ್ವಾಪರ ಯುಗದಲ್ಲಿ ಯಾವ ಕುರುಕ್ಷೇತ್ರದಲ್ಲಿ ಭಗವಾನ್ ಶ್ರೀಕೃಷ್ಣನು ಅಧರ್ಮಿ ಕೌರವರನ್ನು ನಾಶಮಾಡಿ ಧರ್ಮದ ಪುನಃಸ್ಥಾಪನೆಗಾಗಿ ಪಾಂಚಜನ್ಯ ಶಂಖನಾದ ಮಾಡಿದನೋ, ಅದೇ ರಣಭೂಮಿಯಲ್ಲಿ ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ಇಂದು ಮತ್ತೊಮ್ಮೆ ಶಂಖನಾದ ಮಾಡಲಾಯಿತು. ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ಭಾರತವರ್ಷದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತರು-ಮಹಂತರು, ಧರ್ಮಪ್ರೇಮಿಗಳು ಭಾರತ ಭೂಮಿಗೆ ‘ಸನಾತನ ರಾಷ್ಟ್ರ’ ಎಂಬ ಮೂಲ ಗುರುತನ್ನು ಪುನಃ ದೊರಕಿಸಿಕೊಡಲು ಭಾರತದ ರಾಜಧಾನಿಯಲ್ಲಿ ಒಂದುಗೂಡಿದರು. ಸಂತರುಗಳ ಚೈತನ್ಯದಾಯಕ ಉಪಸ್ಥಿತಿ ಮತ್ತು ‘ಜಯತು ಜಯತು ಹಿಂದೂರಾಷ್ಟ್ರಮ್’ ಎಂಬ ಕ್ಷಾತ್ರ ತೇಜವನ್ನು ನಿರ್ಮಿಸುವ ಜಯಘೋಷದೊಂದಿಗೆ ದೆಹಲಿ ಅಂದರೆ ‘ಇಂದ್ರಪ್ರಸ್ಥ’ ನಗರದ ಭಾರತ ಮಂಟಪಂನಲ್ಲಿ ಡಿಸೆಂಬರ್ 13 ರಂದು ಈ ಮಂಗಳಮಯ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಸನಾತನ ಸಂಸ್ಥೆ ಆಯೋಜಿಸಿದ ಮತ್ತು ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಷನ್’ ಪ್ರಸ್ತುತಪಡಿಸಿದ ‘ಧರ್ಮೇಣ ಜಯತಿ ರಾಷ್ಟ್ರಮ್’ ಎಂಬ ಘೋಷವಾಕ್ಯವಿರುವ ಈ ಮಹೋತ್ಸವದಲ್ಲಿ ಉಪಸ್ಥಿತ ಧರ್ಮಪ್ರೇಮಿಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಜಯಘೋಷ ಮಾಡಿದರು.

ದೆಹಲಿಯ ಸಾಂಸ್ಕೃತಿಕ ಸಚಿವ ಕಪಿಲ್ ಮಿಶ್ರಾ, ನಾಸಿಕ್ (ಮಹಾರಾಷ್ಟ್ರ) ದ ಮಹಾಮಂಡಲೇಶ್ವರ ಸ್ವಾಮಿ ಪೂ. ಶಾಂತಿಗಿರಿ ಮಹಾರಾಜರು, ‘ಸೇವ್ ಕಲ್ಚರ್ ಸೇವ್ ಭಾರತ್’ ನ ಸಂಸ್ಥಾಪಕರು ಮತ್ತು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಶ್ರೀ. ಉದಯ ಮಾಹೂರ್ಕರ್, ಸುದರ್ಶನ್ ವಾಹಿನಿಯ ಮುಖ್ಯ ಸಂಪಾದಕ ಶ್ರೀ. ಸುರೇಶ ಚವಾಣಕೆ, ಸನಾತನ ಸಂಸ್ಥೆಯ ಸಂಸ್ಥಾಪಕ ಡಾ. ಸಚ್ಚಿದಾನಂದ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಅಭಯ ವರ್ತಕ ಇವರ ಕರಕಮಲಗಳಿಂದ ದೀಪ ಪ್ರಜ್ವಲನೆ ನಡೆಯಿತು.

ಉದ್ಘಾಟನಾ ಸಮಾರಂಭ ಹೀಗಾಯಿತು!

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾರಂಭದಲ್ಲಿ ‘ಗೋವಾದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಮತ್ತು ‘ಆನಂದದ ಜೀವನಕ್ಕಾಗಿ ಸನಾತನ ಸಂಸ್ಥೆ’ ಈ ವೀಡಿಯೊಗಳನ್ನು ತೋರಿಸಲಾಯಿತು. ನಂತರ 5 ನಿಮಿಷಗಳ ಕಾಲ ಸನಾತನ ರಾಷ್ಟ್ರ ಸ್ಥಾಪನೆಯ ಸಂಕಲ್ಪಪೂರ್ತಿಗಾಗಿ ಪ್ರಭು ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸಿ ಸಾಮೂಹಿಕವಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ನಾಮಜಪ ಮಾಡಲಾಯಿತು. ಅದರ ನಂತರ ಸನಾತನ ವೇದಪಾಠಶಾಲೆಯ ಪುರೋಹಿತರಾದ ಶ್ರೀ. ಶ್ರೇಯಸ ಪಿಸೋಳ್ಕರ್ ಅವರು ಶಂಖನಾದ ಮಾಡಿದರು. ನಂತರ ಶ್ರೀ ಗಣೇಶನ ಶ್ಲೋಕದ ಪಠಣ ಮತ್ತು ಗಣ್ಯರ ಕರಕಮಲದಿಂದ ದೀಪ ಪ್ರಜ್ವಲನೆ ನಡೆಯಿತು. ಧರ್ಮಸಂಸ್ಥಾಪನಾ ದೇವತೆ ಭಗವಾನ್ ಶ್ರೀಕೃಷ್ಣ, ಇಂದ್ರಪ್ರಸ್ಥ ನಗರದ ಸ್ಥಾನ ದೇವತೆ ಮತ್ತು ಗ್ರಾಮ ದೇವತೆ ಶ್ರೀ ಭೈರವನಾಥ, ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ವಂದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೆಹಲಿಯ ವೇದವ್ಯಾಸ ಗುರುಕುಲಂ ವಸಂತಕುಂಜ್‌ನ ಆಚಾರ್ಯ ಶ್ರೀ. ನೀಲೇಶ್ ತ್ರಿಪಾಠಿ, ಅವರ ಶಿಷ್ಯರಾದ ಶ್ರೀ. ರಾಮ ಶರ್ಮಾ ಮತ್ತು ಶ್ರೀ. ವೈಭವ ಪಾಂಡೆ ಅವರು ವೇದಿಕೆಯ ಮೇಲೆ ವೇದಪಠಣ ಮಾಡಿದರು. ಸನಾತನ ಸಂಸ್ಥೆಯ ಶ್ರೀ. ಚೈತನ್ಯ ತಾಗಡೆ ಅವರು ಪುಷ್ಪಮಾಲೆ ಹಾಕಿ ಮತ್ತು ಶಾಲು, ಶ್ರೀಫಲ, ಉಡುಗೊರೆಗಳನ್ನು ನೀಡಿ ಬ್ರಹ್ಮಮೂರ್ತಿಗಳನ್ನು ಸನ್ಮಾನಿಸಿದರು. ನಂತರ ಶ್ರೀ ಗಣೇಶವಂದನೆ ಮತ್ತು ಗಣ್ಯರ ಶುಭ ಕರಕಮಲದಿಂದ ದೀಪ ಪ್ರಜ್ವಲನೆ ಮಾಡಲಾಯಿತು. ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶ ದರ್ಶನಕ್ಕಾಗಿ ವೇದಿಕೆಯ ಮೇಲೆ ತರಲಾಯಿತು. ಇದರ ನಂತರ ‘ವಂದೇ ಮಾತರಂ’ ಗೀತೆಯ ವೀಡಿಯೊ ಮೂಲಕ ಪ್ರಸ್ತುತಿ ಮಾಡಲಾಯಿತು.

ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶದ ಭಾವಪೂರ್ಣ ದರ್ಶನ!

ಕ್ರೂರಕರ್ಮದ ಮೊಹಮ್ಮದ್ ಘಜ್ನಿಯು 1026 ರಲ್ಲಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗುಜರಾತ್‌ನ ಶ್ರೀ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದನು. ಅವನು ದೇವಾಲಯದ ಶ್ರೀ ಸೋಮನಾಥ ಶಿವಲಿಂಗವನ್ನು ಖಂಡಿತಗೊಳಿಸಿದನು. ಆ ಸಮಯದಲ್ಲಿ ಶ್ರೀ ಸೋಮನಾಥ ಶಿವಲಿಂಗವು ಕೆಲವು ಭಾಗಗಳಲ್ಲಿ ವಿಭಜನೆಯಾಯಿತು. ಈ ಮೂಲ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶವನ್ನು ತಮಿಳುನಾಡು ರಾಜ್ಯದ ತಂಜಾವೂರು ಮೂಲದ ಪೂಜಾರಿ ಕುಟುಂಬದ ವೇದಪ್ರಚಾರರತ್ನ ವೇದಕುಲಪತಿ ಶ್ರೀ. ಜಿ.ಕೆ. ಸೀತಾರಾಮ್ ಅವರ ಕುಟುಂಬವು 1 ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಸುರಕ್ಷಿತವಾಗಿ ಇಟ್ಟಿದೆ. ಶ್ರೀ ಸೋಮನಾಥ ಜ್ಯೋತಿರ್ಲಿಂಗದ ಈ ದಿವ್ಯಾಂಶವನ್ನು ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ದರ್ಶನಕ್ಕಾಗಿ ತರಲಾಯಿತು. ಈ ಸಮಯದಲ್ಲಿ ಎಲ್ಲರೂ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶವನ್ನು ದರ್ಶನ ಪಡೆದರು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ವೇದಿಕೆಯ ಮೇಲೆ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಕ್ಕೆ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಉಪಸ್ಥಿತರು ಕೈ ಎತ್ತಿ ‘ಹರ ಹರ ಮಹಾದೇವ!’, ‘ನಮಃ ಪಾರ್ವತೀಪತೇ ಹರ ಹರ ಮಹಾದೇವ’ ಎಂಬ ಘೋಷಣೆಗಳನ್ನು ಕೂಗಿದರು.

‘ಸಂಕಲ್ಪ ರಾಮರಾಜ್ಯದ’ ಗ್ರಂಥ ಲೋಕಾರ್ಪಣೆ!

ಈ ಸಂದರ್ಭದಲ್ಲಿ ಗಣ್ಯರ ಶುಭ ಹಸ್ತದಿಂದ ಗೋವಾದಲ್ಲಿ ಮೇ 2025 ರಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮೇಲೆ ಆಧಾರಿತವಾದ ‘ಸಂಕಲ್ಪ ರಾಮರಾಜ್ಯದ’ ಎಂಬ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯವರೆಗೆ 13 ಭಾಷೆಗಳಲ್ಲಿ 369 ಗ್ರಂಥಗಳನ್ನು ರಚಿಸಲಾಗಿದೆ. ಇಲ್ಲಿಯವರೆಗೆ 1 ಕೋಟಿಗೂ ಹೆಚ್ಚು ಗ್ರಂಥಗಳನ್ನು ವಿತರಿಸಲಾಗಿದೆ.

ವೈಶಿಷ್ಟ ಪೂರ್ಣ ಅಂಶಗಳು !

1. ‘ವಂದೇ ಮಾತರಂ’ ಗೀತೆಗೆ 150 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ತಯಾರಿಸಲಾದ ಒಂದು ವೀಡಿಯೊವನ್ನು ಈ ಸಮಯದಲ್ಲಿ ಪ್ರಸಾರ ಮಾಡಲಾಯಿತು.

2. ಸಂಪೂರ್ಣ ‘ವಂದೇ ಮಾತರಂ’ ಗೀತೆಯ ಸಾಮೂಹಿಕ ಗಾಯನ ಮಾಡುವಾಗ ಅನೇಕರ ಕಣ್ಣುಗಳಲ್ಲಿ ಭಾವಾಶ್ರುಗಳು ಬಂದವು.