ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025
|

ಭಾರತ ಮಂಡಪಮ್, ದೆಹಲಿ – ಭಾರತೀಯ ಸಂಸ್ಕೃತಿಯನ್ನು ವಿದೇಶಿ ಮುಸಲ್ಮಾನ ಆಕ್ರಮಣಕಾರರು ನಾಶ ಮಾಡಲು ಸಾಧ್ಯವಾಗಲಿಲ್ಲವೋ, ಅದೇ ಕೆಲಸವನ್ನು ಪ್ರಸ್ತುತ ‘ಒಟಿಟಿ ಪ್ಲಾಟ್‌ಫಾರ್ಮ್’ಗಳ (ಆ್ಯಪ್ ಮೂಲಕ ಚಲನಚಿತ್ರಗಳು, ಧಾರಾವಾಹಿಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ವೀಕ್ಷಿಸುವುದು) ಮೂಲಕ ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಶೇಕಡ 80 ರಷ್ಟು ಅತ್ಯಾಚಾರಗಳು ಈ ಅಶ್ಲೀಲ ಪ್ರಸಾರದಿಂದಾಗಿಯೇ ಆಗುತ್ತಿವೆ. ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ, ಇಂತಹ ಪ್ರಸಾರವನ್ನು ನಿಷೇಧಿಸಿ ಭಾರತವು ವಿಶ್ವದ ‘ಮೊದಲ ವಿಕೃತ ವಿಷಯಮುಕ್ತ ದೇಶ’ ಆಗಬೇಕು. ನಮಗೆ ರಾಮರಾಜ್ಯ, ಮಹಾರಾಣಾ ಪ್ರತಾಪ್ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಕನಸಿನ ಸ್ವರಾಜ್ಯವನ್ನು ನಿರ್ಮಿಸಬೇಕಾದರೆ, ಅತ್ಯಾಚಾರ ಎಸಗುವವರಿಗೆ ಮರಣದಂಡನೆ, ಹಾಗೆಯೇ ಅಶ್ಲೀಲ ಸಾಹಿತ್ಯ ಪ್ರಸಾರ ಮಾಡುವವರು, ಸರಕಾರಿ ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಗಾಗಿ ಹಣ ತೆಗೆದುಕೊಳ್ಳುವವರು, ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವವರು ಮತ್ತು ಮಾಲಿನ್ಯವನ್ನು ತಡೆಯದ ಕಾರ್ಖಾನೆಗಳ ಮಾಲೀಕರಿಗೆ ಕನಿಷ್ಠ 10-20 ವರ್ಷಗಳ ಕಠಿಣ ಶಿಕ್ಷೆ ಆಗುವುದು ಆವಶ್ಯಕ ಎಂದು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಶ್ರೀ ಉದಯ್ ಮಾಹುರ್ಕರ್ ಅವರು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವೇದಿಕೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಕುರಿತು ತಮ್ಮ ನಿಲುವನ್ನು ಮಂಡಿಸುವಾಗ ಅವರು ಈ ವಿಚಾರಗಳನ್ನು ತಿಳಿಸಿದರು.
ಅವರು ಮಾತು ಮುಂದುವರೆಸಿ ,”ಕಳೆದ 7 ತಿಂಗಳಲ್ಲಿ ಸಹೋದರನು ಸಹೋದರಿಯ ಮೇಲೆ ಅತ್ಯಾಚಾರ ಮಾಡಿದ 15 ಪ್ರಕರಣಗಳು ಮತ್ತು ತಂದೆಯು ಮಗಳ ಮೇಲೆ ಅತ್ಯಾಚಾರ ಮಾಡಿದ 10 ಪ್ರಕರಣಗಳು ನಡೆದಿವೆ. ಆಂಧ್ರಪ್ರದೇಶದ ಒಂದು ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 220 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಹೆಚ್ಚಿನ ಆರೋಪಿಗಳು ಅಪ್ರಾಪ್ತ ವಯಸ್ಕರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆಯ ಪ್ರಸಾರವನ್ನು ತಡೆಯಲು ಮೊಬೈಲ್ ಕಂಪನಿಗಳನ್ನು ‘ಎಐ’ (ಕೃತಕ ಬುದ್ಧಿಮತ್ತೆಯ) ತಜ್ಞರ ಮೂಲಕ ನಿಷೇಧ ಹೇರಲು ನಿರ್ಬಂಧಿಸುವುದು ಸಾಧ್ಯವಿದೆ.”
ಈ ಮಹೋತ್ಸವದಿಂದ ಮಹಾನ್ ಭಾರತದ ಕಲ್ಪನೆಗೆ ಪ್ರಾರಂಭ! – ಉದಯ್ ಮಾಹುರ್ಕರ್ಶಂಖನಾದ ಮಹೋತ್ಸವವು ಒಂದು ವಿಶಿಷ್ಟವಾದ ಮಹೋತ್ಸವವಾಗಿದೆ. ಇದರ ಮೂಲಕ ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಯನ್ನು ಮಹಾರಾಷ್ಟ್ರದ ಹೊರಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಈ ಮಹೋತ್ಸವವು ದೇಶಕ್ಕೆ ಒಂದು ದೊಡ್ಡ ಸಂದೇಶವನ್ನು ತಂದಿದೆ. ನನ್ನ ಮಹಾನ್ ಭಾರತದ ಪರಿಕಲ್ಪನೆ ಇದೆ, ಅದು ಇಂದಿನಿಂದ ಪ್ರಾರಂಭವಾಗಿದೆ ಎಂದು ನಾನು ಭಾವಿಸುತ್ತೇನೆ. |
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University