ಸಾಮ್ಯವಾದಿ ವಿಚಾರಗಳ ಅಡೆ-ತಡೆಗಳನ್ನು ಬದಿಗೊತ್ತಿ ಶಿವಾಜಿ ಮಹಾರಾಜರ ಜೀವಗಾಥೆಯನ್ನು ಮನೆ-ಮನೆಗೆ ತಲುಪಿಸಲಾಗುವುದು ! – ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಸಂಸ್ಥಾಪಕರಾದ ಉದಯ ಮಾಹೂರ್ಕರ್

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ನಿಮಿತ್ತ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಸಂಸ್ಥಾಪಕರಾದ ಉದಯ ಮಾಹೂರ್ಕರ್ ಅವರೊಂದಿಗೆ ವಿಶೇಷ ಸಂದರ್ಶನ

ಶ್ರೀ. ವಿಕ್ರಮ ಡೊಂಗ್ರೆ, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ.

ನವದೆಹಲಿ – ಸನಾತನ ರಾಷ್ಟ್ರ ಎಂದರೆ ಸನಾತನಿ ಹಿಂದೂ ಮೌಲ್ಯಗಳ ಆಧಾರಿತ ರಾಷ್ಟ್ರ. ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಇದೇ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇಂಟರ್ನೆಟ್ ಮತ್ತು ಮೊಬೈಲ್ ಮೂಲಕ ಹರಡುತ್ತಿರುವ ಅಶ್ಲೀಲತೆ (‘ಪೋರ್ನೋಗ್ರಫಿ’) ಆಧುನಿಕ ಯುಗದ ರಾಕ್ಷಸವಾಗಿದೆ. ಇದರ ವಿರುದ್ಧ ನಮ್ಮ ಫೌಂಡೇಶನ್ ದೊಡ್ಡ ಸಮರ ಸಾರಿದೆ. ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ೮೦% ಪ್ರತಿಶತ ಅತ್ಯಾಚಾರ ಪ್ರಕರಣಗಳು ‘ಪೋರ್ನೋಗ್ರಫಿ’ಯಿಂದಾಗಿ ಸಂಭವಿಸಿವೆ ಎಂಬುದನ್ನು ಸಾಬೀತುಪಡಿಸಿದೆ. ಈ ಕಲುಷಿತ ವಿಚಾರಗಳ ಮೂಲ ಕಾರಣವನ್ನು ನಾಶಪಡಿಸುವ ಪ್ರತಿಜ್ಞೆಯನ್ನು ನಾವು ಮಾಡಿದ್ದೇವೆ. ಈ ಹೋರಾಟಕ್ಕೆ ಪ್ರೇರಣೆ ನೀಡುವ ಮಹಾಪುರುಷರು ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪ್ ಮತ್ತು ಗುರು ಗೋವಿಂದ ಸಿಂಗ್. ಸಾಮ್ಯವಾದಿ ಸಿದ್ಧಾಂತವು ಈ ಮಹಾಪುರುಷರ ಜೀವನ ಚರಿತ್ರೆಯನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲು ಪ್ರಯತ್ನಿಸಿತು. ಈಗ ಅವರ ಯಶೋಗಾಥೆಯನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಸಂಸ್ಥಾಪಕ ಮತ್ತು ಮಾಜಿ ಕೇಂದ್ರೀಯ ಮಾಹಿತಿ ಆಯುಕ್ತ ಶ್ರೀ. ಉದಯ ಮಾಹೂರ್ಕರ್ ಅವರು ಮಾಹಿತಿ ನೀಡಿದರು. ರಾಜಧಾನಿ ದೆಹಲಿಯಲ್ಲಿ ಆಯೋಜಿಸಲಾಗುತ್ತಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ನಿಮಿತ್ತ ‘ಸನಾತನ ಪ್ರಭಾತ’ದ ಪ್ರತಿನಿಧಿಯವರು ಶ್ರೀ. ಉದಯ ಮಾಹೂರ್ಕರ್ ಅವರೊಂದಿಗೆ ವಿಶೇಷ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ‘ಸನಾತನ ರಾಷ್ಟ್ರ’ ಮತ್ತು ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಸಂಘಟನೆಯ ಬಗ್ಗೆ ಶ್ರೀ. ಮಾಹೂರ್ಕರ್ ಅವರು ವಿಸ್ತೃತ ಮಾಹಿತಿ ನೀಡಿದರು.

ಛತ್ರಪತಿ ಶಿವಾಜಿ ಮಹಾರಾಜರ ಬಗೆಗಿನ ಅತ್ಯಂತ ದೊಡ್ಡ ರಾಷ್ಟ್ರೀಯ ಮಹೋತ್ಸವ !

ಶ್ರೀ. ಮಾಹೂರ್ಕರ್ ಅವರು ಮುಂದುವರಿದು ಮಾತನಾಡುತ್ತಾ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳ ಆಧಾರದ ಮೇಲೆ ಸ್ವತಂತ್ರ ಭಾರತದಲ್ಲಿ ಮಹಾರಾಷ್ಟ್ರದ ಹೊರಗೆ ಆಯೋಜಿಸಲಾದ ಇಂದಿನವರೆಗಿನ ಅತ್ಯಂತ ದೊಡ್ಡ ಕಾರ್ಯಕ್ರಮವಾಗಿದೆ. ಯಾವ ಮಹಾಪುರುಷರ ಹಿರಿಮೆ ಭಾರತದಾದ್ಯಂತ ಆಗಬೇಕಿತ್ತೋ, ಅದು ಸ್ವಾತಂತ್ರ್ಯದ ೭೮ ವರ್ಷಗಳ ನಂತರ ಆಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರು ಚಾಣಕ್ಯ ನೀತಿಯನ್ನು ಮಧ್ಯಯುಗದಲ್ಲಿ ಪುನರುಜ್ಜೀವನಗೊಳಿಸಿದರು. ಅಫ್ಜಲ್ ಖಾನ್‌ನ ವಧೆ ಇದಕ್ಕೆ ಉತ್ತಮ ಉದಾಹರಣೆಯಾಗಿತ್ತು. ಅವರು ನೌಕಾಪಡೆಯನ್ನು ಸಾಂಸ್ಥಿಕ ರೀತಿಯಲ್ಲಿ ಸ್ಥಾಪಿಸಿದರು ಮತ್ತು ರಾಷ್ಟ್ರೀಯ ಭದ್ರತೆಗೆ ಅಗತ್ಯವಾದ ಅಡಿಪಾಯವನ್ನು ಹಾಕಿದರು. ೧೬೬೨ ರಲ್ಲಿ ಒಬ್ಬ ಫ್ರೆಂಚ್ ಪ್ರವಾಸಿ ಮಹಾರಾಜರ ನೌಕಾಪಡೆಯ ಮುಖ್ಯಸ್ಥರನ್ನು ಕೇಳಿದಾಗ, ಅವರು ಮಹಾರಾಜರ ದೃಷ್ಟಿ ಸಿಂಧ್‌ನಿಂದ ಬಂಗಾಳದವರೆಗೆ ಇಡೀ ರಾಷ್ಟ್ರವನ್ನು ಒಂದುಗೂಡಿಸುವುದಾಗಿತ್ತು ಎಂದು ಹೇಳಿದ್ದರು.

ಮಹೋತ್ಸವದ ಪ್ರಮುಖ ವೈಶಿಷ್ಟ್ಯಗಳು !

ಈ ಮಹೋತ್ಸವವನ್ನು ಡಿಸೆಂಬರ್ ೧೩ ರಂದು ಉದ್ಘಾಟಿಸಲಾಗುವುದು ಮತ್ತು ಮೊದಲ ದಿನದ ಪರಿಷತ್ತಿನ ವಿಷಯ ‘ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಭಾರತದ ಸಂಸ್ಕೃತಿ’ ಎಂಬುದಾಗಿದೆ. ಅಲ್ಲಾವುದ್ದೀನ್ ಖಿಲ್ಜಿ, ತುಘಲಕ್ ಅಥವಾ ಲೋಧಿಯಿಂದಲೂ ಆಗಿರದಂತಹ ದೊಡ್ಡ ಆಘಾತಗಳು ಪ್ರಸ್ತುತ ಅಶ್ಲೀಲತೆ ಮತ್ತು ನಗ್ನತೆಯನ್ನು ಹರಡುವ ಅಂಶಗಳಿಂದ ನಮ್ಮ ಸಂಸ್ಕೃತಿಯ ಮೇಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಷಯ ಅತ್ಯಂತ ಮಹತ್ವದ್ದಾಗಿದೆ. ಡಿಸೆಂಬರ್ ೧೪ ರಂದು ‘ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಭಾರತದ ರಾಷ್ಟ್ರೀಯ ಭದ್ರತೆ’ ಕುರಿತು ಪರಿಷತ್ತು ನಡೆಯಲಿದೆ. ಸ್ವಾತಂತ್ರ್ಯದ ನಂತರ ೬೦ ರಿಂದ ೭೦ ವರ್ಷಗಳ ಕಾಂಗ್ರೆಸ್ ರಾಜಕಾರಣದಿಂದಾಗಿ ನಮ್ಮ ರಾಷ್ಟ್ರೀಯ ಅರಿವು, ಗುರಿಗಳು ಅಸ್ಪಷ್ಟವಾಗಿದ್ದವು ಮತ್ತು ಆತ್ಮಸ್ಥೈರ್ಯ ಕಡಿಮೆಯಾಗಿತ್ತು, ಅದನ್ನು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳಿಂದ ಮತ್ತೆ ಸಂಪೂರ್ಣವಾಗಿ ಜೀವಂತಗೊಳಿಸುವ ಒಂದು ಪರಿಣಾಮಕಾರಿ ಪ್ರಯತ್ನ ಇದಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿ ಯಶಸ್ವಿ ಆದರ್ಶವನ್ನು ನಿರ್ಮಿಸಿದ್ದಾರೆ.


ಇದನ್ನು ಓದಿರಿ → ಸಂಪಾದಕೀಯ : ‘ಸನಾತನ ರಾಷ್ಟ್ರ’ದ ಶಂಖನಾದ ಏಕೆ ?


ಸಾಂಸ್ಕೃತಿಕ ಭಯೋತ್ಪಾದನೆ !

ಶ್ರೀ. ಮಾಹೂರ್ಕರ್ ಅವರು ದೇಶದಲ್ಲಿ ಹೆಚ್ಚುತ್ತಿರುವ ಅಶ್ಲೀಲತೆಯ ಪ್ರದರ್ಶನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಈ ಮಾನಸಿಕತೆಯನ್ನು ‘ಸಾಂಸ್ಕೃತಿಕ ಭಯೋತ್ಪಾದನೆ’ ಎಂದು ಕರೆದಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಕಲುಷಿತಗೊಳಿಸುವ ಸಾಹಿತ್ಯವನ್ನು ನಿರ್ಮಿಸುವವರು ಸಾಂಸ್ಕೃತಿಕ ಭಯೋತ್ಪಾದಕರು. ಮಹಿಳೆಯರ ಅಸಭ್ಯ ಪ್ರತಿರೂಪಣ ಕಾಯಿದೆ, ೧೯೮೬ ರ ಪ್ರಸ್ತುತ ಕಾನೂನಿನಲ್ಲಿ ಕಠಿಣ ಬದಲಾವಣೆ ಮಾಡಿ ಅದರಲ್ಲಿ ಶಿಕ್ಷೆಯ ನಿಬಂಧನೆಯನ್ನು ೩ ವರ್ಷಗಳಿಂದ ೧೦ ವರ್ಷಗಳವರೆಗೆ ಹೆಚ್ಚಿಸಬೇಕು ಮತ್ತು ಈ ಪ್ರಕರಣದಲ್ಲಿ ದೋಷಿಗಳಿಗೆ ೩ ವರ್ಷಗಳವರೆಗೆ ಜಾಮೀನು ಸಿಗಬಾರದೆಂದು ಅವರು ಆಗ್ರಹಿಸಿದ್ದಾರೆ. ಸಾಂಸ್ಕೃತಿಕ ಭಯೋತ್ಪಾದನೆ ಜಿಹಾದಿ ಭಯೋತ್ಪಾದಕರಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ‘ಓಟಿಟಿ’ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಗ್ಗದ ಪ್ರಚಾರಕ್ಕಾಗಿ ಅಶ್ಲೀಲತೆಯನ್ನು ಹರಡುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು, ಅದರ ಜೊತೆಗೆ ‘ಕೃತಕ ಬುದ್ಧಿಮತ್ತೆಯ ಸಹಾಯದಿಂದ ನಗ್ನತೆಯ ಅಂಶವು ಪ್ರಸಾರವಾಗುವುದಿಲ್ಲ ಎಂಬುದರ ಕಾಳಜಿಯನ್ನು ವಹಿಸದ ಇಂಟರ್ನೆಟ್ ಸೇವಾ ಪೂರೈಕೆದಾರರ ಮೇಲೂ ಕಠಿಣ ನಿರ್ಬಂಧಗಳನ್ನು ಹೇರಿ ಅವರಿಗೆ ಶಿಕ್ಷೆ ನೀಡಬೇಕು’, ಎಂದು ಶ್ರೀ. ಮಾಹೂರ್ಕರ್ ಹೇಳಿದರು.

ನಗ್ನ ಚಿತ್ರಣದ ಬಗ್ಗೆ ಶೂನ್ಯ ಸಹಿಷ್ಣುತೆ ಅವಶ್ಯಕ

ಪೋರ್ನೋಗ್ರಫಿ ನೋಡಿದ ನಂತರ ಸಹೋದರನು ಸಹೋದರಿಯ ಮೇಲೆ ಅತ್ಯಾಚಾರ ಮಾಡಿದ ೧೫ ಪ್ರಕರಣಗಳು, ತಂದೆಯು ಮಗಳ ಮೇಲೆ ಅತ್ಯಾಚಾರ ಮಾಡಿದ ೧೦ ಪ್ರಕರಣಗಳು, ಮತ್ತು ತಾಯಿಯ ಮೇಲೆ ಅತ್ಯಾಚಾರ ಮಾಡಿದ ಒಂದು ಪ್ರಕರಣ ಕಳೆದ ೬-೭ ತಿಂಗಳುಗಳಲ್ಲಿ ದಾಖಲಾಗಿದೆ. ಈ ಸಮಸ್ಯೆಗೆ ಬಾಲಿವುಡ್ ಜವಾಬ್ದಾರಿಯಾಗಿದೆ. ಯುರೋಪಿನ ೧೬ ದೇಶಗಳು, ಇಂಗ್ಲೆಂಡ್ ಮತ್ತು ಅಮೆರಿಕದ ೨೪ ರಾಜ್ಯಗಳು ಕಠಿಣ ಕಾನೂನುಗಳನ್ನು ತಂದು ಅಶ್ಲೀಲತೆಯನ್ನು ನಿಯಂತ್ರಿಸಿವೆ. ಭಾರತವನ್ನು ಮಹಾನ್ ರಾಷ್ಟ್ರವನ್ನಾಗಿ ಮಾಡಲು ‘ನಗ್ನ ಚಿತ್ರಣದ ಬಗ್ಗೆ ಶೂನ್ಯ ಸಹಿಷ್ಣುತೆ’ ನೀತಿಯನ್ನು ಅಳವಡಿಸಿಕೊಂಡು ಈ ಸಾಂಸ್ಕೃತಿಕ ಭಯೋತ್ಪಾದನೆಯ ಮೇಲೆ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಅವರು ದೃಢ ಅಭಿಪ್ರಾಯ ವ್ಯಕ್ತಪಡಿಸಿದರು.