ಥಾಯ್ಲೆಂಡ್ ನಲ್ಲಿ ಬಂಧಿಸಲ್ಪಟ್ಟ ಗೋವಾದ ನೈಟ್ ಕ್ಲಬ್ ಮಾಲೀಕರಾದ ಲುಥ್ರಾ ಸಹೋದರರು Goa Night Club Fire

ಗೋವಾದ ನೈಟ್ ಕ್ಲಬ್ ಬೆಂಕಿ ಪ್ರಕರಣ

ನವದೆಹಲಿ – ಗೋವಾದ ಹಡಫಡೆ ಇಲ್ಲಿರುವ ಬಿರ್ಚ್ಬೈ ರೋಮಿಯೋಲೆನ್ ನೈಟ್ ಕ್ಲಬ್ ಗೆ  ಬೆಂಕಿ ಹತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತದಿಂದ ಪರಾರಿಯಾಗಿ ಥಾಯ್ಲೆಂಡನ ಫುಕೆಟ ನಲ್ಲಿಿ ಅಡಗಿಕೊಂಡಿದ್ದ ಕ್ಲಬ್ ನ ಮಾಲೀಕರಾದ ಸೌರಭ ಲುಥ್ರಾ ಮತ್ತು ಗೌರವ ಲುಥ್ರಾ ಸಹೋದರರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಥಾಯ್ಲೆಂಡ್ ಪೊಲೀಸರು ಈ ಇಬ್ಬರು ಸಹೋದರರ ಭಾವಚಿತ್ರಗಳನ್ನು ಸಹ ಪ್ರಸಾರ ಮಾಡಿದ್ದಾರೆ. ಆ ಚಿತ್ರಗಳಲ್ಲಿ ಅವರ ಕೈಗಳಿಗೆ ಬೇಡಿಗಳಿದ್ದು, ಅವರು ತಮ್ಮ ಪಾಸ್ಪೋರ್ಟ್ಗಳನ್ನು ಹಿಡಿದುಕೊಂಡಿದ್ದಾರೆ. ಭಾರತೀಯ ಅಧಿಕಾರಿಗಳ ಒಂದು ತಂಡವು ಥಾಯ್ಲೆಂಡ್ಗೆ ಪ್ರಯಾಣ ಬೆಳೆಸಿದ್ದು, ಅವರನ್ನು (ಭಾರತಕ್ಕೆ) ಮರಳಿ ಕರೆತರುತ್ತಿದ್ದಾರೆ. ಭಾರತಕ್ಕೆ ಕರೆತಂದ ನಂತರ ಗೋವಾ ಪೊಲೀಸರು ಇಬ್ಬರನ್ನೂ ತಮ್ಮ ವಶಕ್ಕೆ ತೆಗೆದುಕೊಳ್ಳಲಿದ್ದಾರೆ.