|

ತಿರುಪತಿ (ಆಂಧ್ರಪ್ರದೇಶ) – ಇಲ್ಲಿನ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಕಲಬೆರಕೆ ಪ್ರಕರಣದ ನಂತರ, ಈಗ ಪ್ರಸಾದವಾಗಿ ನೀಡಲಾಗುವ ರೇಷ್ಮೆ ಶಲ್ಯಗಳ ಮಾರಾಟದಲ್ಲಿನ ಅವ್ಯವಹಾರ ಬೆಳಕಿಗೆ ಬಂದಿದೆ. ಒಬ್ಬ ಗುತ್ತಿಗೆದಾರನು ಸತತ ೧೦ ವರ್ಷಗಳ ಕಾಲ ಶುದ್ಧ ಮಲ್ಬರಿ ರೇಷ್ಮೆ ಶಲ್ಯಗಳ ಬದಲಿಗೆ ಸಂಪೂರ್ಣ ಪಾಲಿಯೆಸ್ಟರ್ ಶಲ್ಯಗಳನ್ನು ಪೂರೈಸಿದ್ದಾನೆ. ಆದರೆ ಹಣವನ್ನು ರೇಷ್ಮೆ ಶಲ್ಯಗಳ ದರದಲ್ಲಿಯೇ ಪಡೆಯಲಾಗಿದೆ. ಮಾರುಕಟ್ಟೆಯಲ್ಲಿ ರೂ. ೩೫೦ ಬೆಲೆಯ ರೇಷ್ಮೆ ಶಲ್ಯಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ರೂ. ೧,೩೦೦ ಕ್ಕೆ ಮಾರಾಟ ಮಾಡಲಾಗಿದೆ. ಈ ವಂಚನೆಯು ೨೦೧೫ ರಿಂದ ೨೦೨೫ ರವರೆಗೆ ನಡೆಯುತ್ತಿತ್ತು. ಈ ಅವಧಿಯಲ್ಲಿ, ಟಿಟಿಡಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸುಮಾರು ರೂ. ೫೪ ಕೋಟಿ ರೂಪಾಯಿಗಳನ್ನು ನೀಡಿದೆ. ಟಿಟಿಡಿ ಮಂಡಳಿಯ ಅಧ್ಯಕ್ಷ ಬಿ. ಆರ್. ನಾಯ್ಡು ಅವರ ನಿರ್ದೇಶನದ ಮೇರೆಗೆ ಆಂತರಿಕ ತನಿಖೆ ಪ್ರಾರಂಭಿಸಲಾಗಿದ್ದು, ಈ ಸಂಪೂರ್ಣ ಪ್ರಕರಣ ಬಯಲಾಗಿದೆ.
ನಾಯ್ಡು ಅವರ ಪ್ರಕಾರ, ದೇವಸ್ಥಾನಕ್ಕೆ ಬೃಹತ್ ದಾನಿಗಳು ಬರುತ್ತಾರೆ ಮತ್ತು ಅವರಿಗೆ ಪ್ರಸಾದವಾಗಿ ರೇಷ್ಮೆ ಶಲ್ಯಗಳನ್ನು ನೀಡಲಾಗುತ್ತದೆ. ಹಾಗೆಯೇ, ವಿಧಿ-ವಿಧಾನಗಳಲ್ಲಿಯೂ ರೇಷ್ಮೆ ಶಲ್ಯಗಳನ್ನು ಬಳಸಲಾಗುತ್ತದೆ. ಇಲ್ಲೂ ಸಹ ಅಗ್ಗದ ಪಾಲಿಯೆಸ್ಟರ್ ಅನ್ನು ಬಳಸಲಾಗಿದೆ. ತೆಗೆದುಕೊಂಡ ಮಾದರಿಗಳನ್ನು ಎರಡು ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡೂ ವರದಿಗಳಲ್ಲಿ ರೇಷ್ಮೆ ಶಲ್ಯಗಳ ಬಟ್ಟೆ ಪಾಲಿಯೆಸ್ಟರ್ ಎಂದು ದೃಢಪಟ್ಟಿದೆ. ತನಿಖಾ ವರದಿ ಬಂದ ನಂತರ, ಟಿಟಿಡಿ ಟ್ರಸ್ಟಿ ಮಂಡಳಿಯು ಸಂಸ್ಥೆಯ ಎಲ್ಲಾ ಪ್ರಸ್ತುತ ಗುತ್ತಿಗೆಗಳನ್ನು ರದ್ದುಪಡಿಸಿದೆ ಮತ್ತು ಸಂಪೂರ್ಣ ಪ್ರಕರಣವನ್ನು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತನಿಖೆಗಾಗಿ ಹಸ್ತಾಂತರಿಸಲಾಗಿದೆ.
ಸಂಪಾದಕೀಯ ನಿಲುವುಇಂತಹ ಗುತ್ತಿಗೆಗಳನ್ನು ನೀಡುವಾಗ ಯಾವುದೇ ಖಚಿತತೆ ಮತ್ತು ಪರಿಶೀಲನೆ ಮಾಡದ ಅಥವಾ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು! ಈ ಘಟನೆಗಳ ನಂತರ, ಇನ್ನೆಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದರ ಕುರಿತು ತನಿಖೆ ನಡೆಸುವುದು ಆವಶ್ಯಕವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!