ಸರಕಾರ ಮತ್ತು ಅಧಿಕಾರಿಗಳ ಸಂಘಟಿತ ಒಳಸಂಚಿನಿಂದ ರಾಜ್ಯದ ದೇವಸ್ಥಾನಗಳ ಭೂಮಿಯಲ್ಲಿ ದೊಡ್ಡ ಹಗರಣ! – ವಿಜಯ ವಡೆಟ್ಟಿವಾರ್, ವಿಧಾನಮಂಡಲ ನಾಯಕ, ಕಾಂಗ್ರೆಸ್

ವಿಧಾನಸಭೆಯಿಂದ…

ಮಹಾರಾಷ್ಟ್ರದ ದೇವಸ್ಥಾನಗಳ ಭೂಮಿಗಳ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕು

ನಾಗಪೂರ, ಡಿಸೆಂಬರ್ ೧೧ (ಸುದ್ದಿ) – ಡಿಸೆಂಬರ್ ೧೧ ರಂದು ಕಾಂಗ್ರೆಸ್ಸಿನ ವಿಧಾನಮಂಡಲ ನಾಯಕರಾದ ವಿಜಯ ವಡೆಟ್ಟಿವಾರ್ ಅವರು ರಾಜ್ಯದಲ್ಲಿ ದೇವಸ್ಥಾನಗಳ ಭೂಮಿಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದ್ದು, ಅದರ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕೆಂದು ವಿಧಾನಸಭೆಯಲ್ಲಿ ಮಂಡಿಸಿದರು. ‘ಹೈದರಾಬಾದ್ ಇನಾಮೆ ಮತ್ತು ನಗದು ಅನುದಾನಗಳ ರದ್ದುಪಡಿಸುವಿಕೆಯ ಸುಧಾರಣಾ ಮಸೂದೆ’ಯ ಕುರಿತು ಮಾತನಾಡುತ್ತಾ ಅವರು ಈ ಬೇಡಿಕೆ ಮಂಡಿಸಿದರು. ರಾಜ್ಯದ ಕಂದಾಯ ಸಚಿವರಾದ ಚಂದ್ರಶೇಖರ ಬಾವನಕುಳೆ ಅವರು ‘ಹೈದರಾಬಾದ್ ನಗದು ಮತ್ತು ಇನಾಮೆ ಸುಧಾರಣಾ ಮಸೂದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ವಡೆಟ್ಟಿವಾರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ವಿಜಯ ವಡೆಟ್ಟಿವಾರ್ ಮಾತನಾಡುತ್ತಾ,

೧. ಸದ್ಯಕ್ಕೆ ದೇವಸ್ಥಾನಗಳ ಶೇ. ೫೦% ರಷ್ಟು ಭೂಮಿಯನ್ನು ಅಕ್ರಮವಾಗಿ ಕಬಳಿಸಲಾಗಿದೆ.

೨. ಸರಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರುಗಳ ಸಂಘಟಿತ ಒಳಸಂಚಿನಿಂದ ಕಾಗದಪತ್ರಗಳಲ್ಲಿ ಬದಲಾವಣೆ ಮಾಡಿ ಭೂಮಿಯ ವಿಲೇವಾರಿ ಮಾಡಲಾಗುತ್ತಿದೆ. ಇದು ಗಂಭೀರ ವಿಷಯವಾಗಿದೆ. ಆದ್ದರಿಂದ ದೇವಸ್ಥಾನಗಳ ಭೂಮಿಯ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕೆಂದು ಅವರು ಆಗ್ರಹಿಸಿದರು.

೩. ಇದೇ ರೀತಿ, ನಿಜಾಮ್ ಕಾಲದ ಇನಾಮ್ ಭೂಮಿಯನ್ನು ಒಬ್ಬ ಸಂಸದರು ತಮ್ಮ ಚಾಲಕನ ಹೆಸರಿನಲ್ಲಿ ತೆಗೆದುಕೊಂಡಿರುವ ಬಗ್ಗೆ ಸುದ್ದಿಯಾಗಿತ್ತು ಎಂದು ಅವರು ಹೇಳಿದರು. ೧೫೯ ಕೋಟಿ ರೂಪಾಯಿಗಳ ಭೂಮಿಯನ್ನು ಕಬಳಿಸಲಾಗಿದೆಯೇ ಅಥವಾ ಖರೀದಿಸಲಾಗಿದೆಯೇ? ಇಂತಹ ಅನೇಕ ಭ್ರಷ್ಟಾಚಾರಗಳು ನಡೆಯುತ್ತಿರುವುದರಿಂದ, ಮಹಾರಾಷ್ಟ್ರದ ಉಳಿದ ಭೂಮಿಗಳ ಕುರಿತು ಸರಕಾರವು ಶ್ವೇತಪತ್ರವನ್ನು ಹೊರಡಿಸಬೇಕು.