ಆರೋಪಿ ಅಬ್ದುಲ್ ಅಲಿಯಾಸ್ ಸೈಫ್ ಸಾವು! : Mirzapur Love Jihad

ಮತಾಂತರಕ್ಕಾಗಿ ಹಿಂದೂ ಯುವತಿ ಮೇಲೆ ಬ್ಲೇಡ್‌ನಿಂದ ದಾಳಿಯಾದ ಪ್ರಕರಣ

ಆರೋಪಿ ಅಬ್ದುಲ್ (ವೃತ್ತದಲ್ಲಿ)

ಮಿರ್ಜಾಪುರ (ಉತ್ತರಪ್ರದೇಶ) – ಹಿಂದೂ ಯುವತಿ ಮೇಲೆ ಬ್ಲೇಡ್‌ನಿಂದ ದಾಳಿ ಮಾಡಿ ಪರಾರಿಯಾಗಿದ್ದ ಮುಖ್ಯ ಆರೋಪಿ ಅಬ್ದುಲ್ ಅಲಿಯಾಸ್ ಸೈಫ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಡಿಸೆಂಬರ್ 9 ರಂದು ಬೆಳಿಗ್ಗೆ ಮಹರ್ಷಿ ಘಾಟ್ ಬಳಿಯ ಗಂಗಾ ನದಿಯಲ್ಲಿ ಆತನ ಮೃತದೇಹ ತೇಲುತ್ತಿರುವುದು ಕಂಡುಬಂದಿದ್ದು ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಅಬ್ದುಲ್‌ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆತ ವಾಸಿಸುತ್ತಿದ್ದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ‘ಬಂಧನವಾಗಬಹುದು’ ಎಂಬ ಭಯದಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಅಬ್ದುಲ್ ಕಳೆದ 72 ಗಂಟೆಗಳಿಂದ ಪರಾರಿಯಾಗಿದ್ದನು. ಈತ ಓರ್ವ ಹಿಂದೂ ಯುವತಿಯನ್ನು ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದನು. ಯುವತಿಯು ನಿರಾಕರಿಸಿದ ನಂತರ, ಆತ ಆಕೆಯ ಮನೆಗೆ ನುಗ್ಗಿ, ಆಕೆಯ ಕುತ್ತಿಗೆಯ ಮೇಲೆ ಬ್ಲೇಡ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದನು. ಗಾಯಗೊಂಡ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.