|

ನಾಗಪುರ, ಡಿಸೆಂಬರ್ ೯ (ಸುದ್ದಿ) – ದೇಶದಲ್ಲಿ ಕೆಲವು ಖಾಸಗಿ ಇಸ್ಲಾಮಿ ಸಂಘಟನೆಗಳು ನಡೆಸುತ್ತಿರುವ ಅಕ್ರಮ ಹಲಾಲ್ ಪ್ರಮಾಣಪತ್ರದಿಂದಾಗಿ ದೇಶದಲ್ಲಿ ಗಂಭೀರವಾದ ಸಂಕಟ ಎದುರಾಗಿದೆ. ಇದು ಗಂಭೀರ ವಿಷಯವಾಗಿದೆ. ಈ ವ್ಯವಸ್ಥೆಯು ಕೇವಲ ಒಂದು ವಾಣಿಜ್ಯ ವಿಷಯವಾಗಿ ಉಳಿದಿಲ್ಲ, ಬದಲಿಗೆ ಇದು ಭಾರತದ ಸಾರ್ವಭೌಮತ್ವಕ್ಕೆ ಸವಾಲೊಡ್ಡುವ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಆದ್ದರಿಂದ, ಉತ್ತರಪ್ರದೇಶದ ಮಾದರಿಯಲ್ಲಿ ‘ಹಲಾಲ್ ಪ್ರಮಾಣಪತ್ರ’ ವ್ಯವಸ್ಥೆಯ ಮೇಲೆ ದೇಶಾದ್ಯಂತ ನಿಷೇಧ ಹೇರಬೇಕು ಎಂದು ಭಾಜಪ ಶಾಸಕ ಶ್ರೀ. ಮೋಹನ ಮಾಟೆ ಅವರು ಡಿಸೆಂಬರ್ ೯ ರಂದು ವಿಧಾನಸಭೆಯಲ್ಲಿ ಒತ್ತಾಯಿಸಿದರು. ಅವರು ಔಚಿತ್ಯದ ಸೂತ್ರವನ್ನು ಮಂಡಿಸುವಾಗ ಮಾತನಾಡುತ್ತಿದ್ದರು.
Maharashtra Assembly, BJP MLA Mohan Mate @MohanMateBJP raises two major concerns:
❗ Ban Halal certification nationwide – cites risks to national security
❗ Enact a law to protect Devasthan lands from illegal acquisition.
The nation cannot ignore these warnings! 🇮🇳 pic.twitter.com/fiV56VXeLE— Sanatan Prabhat (@SanatanPrabhat) December 9, 2025
ದೇವಸ್ಥಾನಗಳ ಕೃಷಿ ಭೂಮಿಯನ್ನು ರಕ್ಷಿಸಲು ಅಕ್ರಮ ಭೂಸ್ವಾಧೀನ ವಿರೋಧಿ ಕಾನೂನು ರೂಪಿಸಬೇಕು!
ಶಾಸಕ ಶ್ರೀ. ಮೋಹನ ಮಾಟೆ ಅವರು ತಮ್ಮ ಮಾತನ್ನು ಮುಂದುವರಿಸಿ, ದೇವಸ್ಥಾನದ ಆವರಣದ ಸರೋವರಗಳ ಸ್ವಚ್ಛತೆಗಾಗಿ ಮತ್ತು ಉತ್ಸವಗಳನ್ನು ಆಚರಿಸಲು ಭಕ್ತರು ನಿಧಿಗಾಗಿ ಕೈ ಚಾಚಬೇಕಾಗಿದೆ. ಅವರ ಮಾಲೀಕತ್ವದ ಭೂಮಿಯನ್ನು ಭೂಮಾಫಿಯಾಗಳು ಕಬಳಿಸುತ್ತಿದ್ದಾರೆ .ಇದು ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರಕ್ಕೆ ಶೋಭೆ ತರುವ ವಿಷಯವಲ್ಲ. ಆದ್ದರಿಂದ, ದೇಶಕ್ಕೆ ಛತ್ರಪತಿ ಶಿವಾಜಿ ಮಹಾರಾಜರಂತಹ ಧರ್ಮಾಧಿಷ್ಠ ರಾಜರ ಅಗತ್ಯವಿದೆ. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ಕಣ್ಮುಂದೆ ಇಟ್ಟುಕೊಂಡು ದೇವಸ್ಥಾನ ಮತ್ತು ಅವುಗಳ ಆಸ್ತಿಗಳನ್ನು ರಕ್ಷಿಸಬೇಕು. ದೇವಸ್ಥಾನಗಳ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಭೂಮಾಫಿಯಾಗಳು ಕಬಳಿಸಿರುವುದರಿಂದ, ಅವುಗಳ ರಕ್ಷಣೆಗಾಗಿ ಗುಜರಾತ ಮತ್ತು ಕರ್ನಾಟಕ ರಾಜ್ಯಗಳ ಮಾದರಿಯಲ್ಲಿ ಕಠಿಣ ‘ಕಾನೂನುಬಾಹಿರ ಭೂಮಿ ವಶಪಡಿಸಿಕೊಳ್ಳುವಿಕೆ ವಿರೋಧಿ ಕಾಯ್ದೆ’ಯನ್ನು ತಕ್ಷಣ ಜಾರಿಗೊಳಿಸಿ ವಿಶೇಷ ತನಿಖಾ ದಳಗಳನ್ನು ಸ್ಥಾಪಿಸಬೇಕು, ಎಂದು ಅವರು ಈ ಸಂದರ್ಭದಲ್ಲಿ ಕೋರಿಕೆ ಸಲ್ಲಿಸಿದರು.
‘ಹಲಾಲ್’ ಪ್ರಮಾಣಪತ್ರ ಎಂದರೇನು?ಇಸ್ಲಾಮ್ ಪ್ರಕಾರ, ‘ಹಲಾಲ್’ ಎಂದರೆ ಯಾವುದು ಧರ್ಮ ಸಮ್ಮತವಾಗಿದೆ ಅದು. ಹಿಂದೆ ‘ಹಲಾಲ್’ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಈಗ ಮತಾಂಧರು ತಮ್ಮದೇ ಆದ ಪ್ರತ್ಯೇಕ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಬೇಕೆಂದು ಬಯಸಿರುವುದರಿಂದ, ಗೃಹೋಪಯೋಗಿ ವಸ್ತುಗಳು, ಔಷಧಗಳು, ಸೌಂದರ್ಯವರ್ಧಕಗಳು ಇತ್ಯಾದಿ ವಿವಿಧ ವಸ್ತುಗಳಿಗೂ ‘ಹಲಾಲ್’ ಪ್ರಮಾಣಪತ್ರ, ಅಂದರೆ ‘ಇದು ಇಸ್ಲಾಮಿ ನಿಯಮಗಳ ಪ್ರಕಾರ ಪ್ರಮಾಣೀಕೃತವಾಗಿದೆ’ ಎಂಬ ಅರ್ಥದ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ. ಇದಕ್ಕಾಗಿ ಕೆಲವು ಇಸ್ಲಾಮಿ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಅವರು ಅನುಮೋದಿಸಿದ ಪ್ರಮಾಣಪತ್ರವನ್ನೇ ‘ಹಲಾಲ್’ ಪ್ರಮಾಣಪತ್ರ ಎಂದು ಕರೆಯಲಾಗುತ್ತದೆ. ದೇಶಕ್ಕೆ ಸಮಾಂತರವಾದ ಇಸ್ಲಾಮಿ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಿ, ಚಾಲ್ತಿಯಲ್ಲಿರುವ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಮತಾಂಧರು ‘ಹಲಾಲ್’ ಪ್ರಮಾಣಪತ್ರದ ಮೂಲಕ ಹೆಣೆದ ಷಡ್ಯಂತ್ರ ಇದಾಗಿದೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ