‘ವಂದೇ ಮಾತರಂ’ ಕೇವಲ ಹಿಂದೂಗಳಿಗಾಗಿ ಬರೆದ ಗೀತೆ!’ ಅಂತೆ – Vande Mataram A. Raja

ದ್ರಮುಕ ಶಾಸಕ ಎ. ರಾಜಾ ಅವರು ಸಂಸತ್ತಿನಲ್ಲಿ ಚರ್ಚೆಯ ಸಂದರ್ಭದಲ್ಲಿ ದಾವೆ

ನವದೆಹಲಿ – ‘ಆನಂದಮಠ’ ಕಾದಂಬರಿಯಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ‘ವಂದೇ ಮಾತರಂ’ ಅನ್ನು ಕೇವಲ ಹಿಂದೂಗಳಿಗಾಗಿಯೇ ಬರೆದ ಗೀತೆ ಎಂದು ದ್ರಮುಕ ಶಾಸಕ ಎ. ರಾಜಾ ಟೀಕಿಸಿದ್ದಾರೆ. ಸಂಸತ್ತಿನಲ್ಲಿ ‘ವಂದೇ ಮಾತರಂ’ ಕುರಿತು ಚರ್ಚೆ ನಡೆದಾಗ ರಾಜಾ ಈ ಟೀಕೆ ಮಾಡಿದರು.

ಎ. ರಾಜಾ ಅವರು ಮಂಡಿಸಿದ ಪ್ರಮುಖ ಅಂಶಗಳು

ವಂದೇ ಮಾತರಂನ ಸಾಲುಗಳು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ಮುಸಲ್ಮಾನರ ವಿರುದ್ಧವೂ ಇವೆ!

೧. ವಂದೇ ಮಾತರಂ’ ಕುರಿತು ೨೦ನೇ ಶತಮಾನದ ಆರಂಭದಿಂದಲೇ ಟೀಕೆಗಳು ಕೇಳಿಬಂದಿವೆ. ‘ವಂದೇ ಮಾತರಂ’ನ ಕೆಲವು ಸಾಲುಗಳು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ಮುಸಲ್ಮಾನರ ವಿರುದ್ಧವೂ ಇವೆ. ಆರ್.ಸಿ. ಮಜುಂದಾರ್ ಅವರು, ‘ಬಂಕಿಮಚಂದ್ರರು ದೇಶಭಕ್ತಿಯನ್ನು ಧರ್ಮದಲ್ಲಿ ಮತ್ತು ಧರ್ಮವನ್ನು ದೇಶಭಕ್ತಿಯಲ್ಲಿ ಪರಿವರ್ತಿಸಿದ್ದಾರೆ’ ಎಂದು ಹೇಳಿದ್ದರು.

೨. ಕಾಂಗ್ರೆಸ್ ಈ ಆಕ್ಷೇಪಣೆಗಳಿಗೆ ಉತ್ತರ ನೀಡುತ್ತಿತ್ತು. ಕಾಂಗ್ರೆಸ್ಸಿನ ಕೆಲವು ಸದಸ್ಯರ ಒತ್ತಾಯದ ಮೇರೆಗೆ ರವೀಂದ್ರನಾಥ ಟ್ಯಾಗೋರ್ ಅವರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಇಡೀ ಕವಿತೆಯನ್ನು ಅದರ ಮೂಲ ಸಂದರ್ಭದೊಂದಿಗೆ ಓದಿದರೆ, ಅದು ಮುಸಲ್ಮಾನರ ಭಾವನೆಗಳನ್ನು ನೋಯಿಸಬಹುದು’ ಎಂದು ಟ್ಯಾಗೋರ್ ಒಂದು ಪತ್ರದಲ್ಲಿ ಹೇಳಿದ್ದಾರೆ.

೩. ೧೯೦೨ ರಲ್ಲಿ ಬಂಗಾಳದಲ್ಲಿ ಸ್ಥಾಪನೆಯಾದ ಅನುಶಾಸನ ಸಮಿತಿಯ ಉದ್ದೇಶವು ಸಶಸ್ತ್ರ ಹೋರಾಟದ ಮೂಲಕ ಸ್ವಾತಂತ್ರ್ಯ ಗಳಿಸುವುದಾಗಿತ್ತು. ‘ವಂದೇ ಮಾತರಂ’ಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಲು ಈ ಸಮಿತಿಯಿಂದಲೇ ಅತ್ಯಂತ ಬಲವಾದ ಅಭಿಯಾನವನ್ನು ನಡೆಸಲಾಯಿತು. ಬ್ರಿಟಿಷರು ವಶಪಡಿಸಿಕೊಂಡ ದಾಖಲೆಗಳಲ್ಲಿ, ಈ ಸಂಸ್ಥೆಯಲ್ಲಿ ಹೋರಾಟದ ಕಾರ್ಯಗಳಲ್ಲಿ ಮುಸಲ್ಮಾನರಿಗೆ ಭಾಗವಹಿಸಲು ಅನುಮತಿ ಇರಲಿಲ್ಲ ಎಂದು ಕಂಡುಬರುತ್ತದೆ. ಸಂಘಟನೆಯಲ್ಲಿ ಪ್ರವೇಶದ ಸಮಯದಲ್ಲಿ ತೆಗೆದುಕೊಳ್ಳಲಾಗುತ್ತಿದ್ದ ಪ್ರತಿಜ್ಞೆ ಹಿಂದೂಗಳಿಗೆ ಪವಿತ್ರವಾಗಿತ್ತು, ಮುಸಲ್ಮಾನರಿಗೆ ಅಲ್ಲ. ಇದು ‘ವಂದೇ ಮಾತರಂ’ಗೆ ಇದ್ದ ಧಾರ್ಮಿಕ ಅರ್ಥವೇನು ಎಂಬುದನ್ನು ಸ್ಪಷ್ಟಪಡಿಸುತ್ತದೆ.

೪. ೧೯೦೫-೧೯೦೮ರ ಅವಧಿಯಲ್ಲಿ ಬಂಗಾಳದಲ್ಲಿ, ಮಸೀದಿಗಳಲ್ಲಿ ನಮಾಜ್ ನಡೆಯುತ್ತಿದ್ದಾಗಲೂ ಹಿಂದೂಗಳು ಮೆರವಣಿಗೆಗಳಲ್ಲಿ ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತಿದ್ದರು. ೧೯೦೭ ರಲ್ಲಿ, ‘ಯಾವುದೇ ಮುಸಲ್ಮಾನರು ‘ವಂದೇ ಮಾತರಂ’ ಹೇಳಬಾರದು ಮತ್ತು ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಬಾರದು’ ಎಂದು ಬರೆದ ಪತ್ರಿಕೆಗಳನ್ನು ವಿತರಿಸಲಾಯಿತು. ೧೯೦೨-೧೯೧೫ರ ಈ ಅವಧಿಯಲ್ಲಿ ಇಂತಹ ಘಟನೆಗಳು ಹೆಚ್ಚಾದವು. ಬ್ರಿಟನ್‌ನ ಸಂಸತ್ತಿನ ‘ಹೌಸ್ ಆಫ್ ಕಾಮನ್ಸ್’ನಲ್ಲಿಯೂ ಈ ಹಾಡಿನಿಂದ ಹೆಚ್ಚಿದ ಧಾರ್ಮಿಕ ಉದ್ವಿಗ್ನತೆಯ ಬಗ್ಗೆ ಚರ್ಚಿಸಲಾಯಿತು. ೧೯೦೫ ರಲ್ಲಿ ಮ. ಗಾಂಧಿ ಅವರು ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರನ್ನು ಶ್ಲಾಘಿಸಿದರು; ಆದರೆ ೧೯೪೦ ರಲ್ಲಿ ಅವರು ತಮ್ಮ ನಿಲುವನ್ನು ಬದಲಾಯಿಸಿದರು. ‘ವಂದೇ ಮಾತರಂ ಧಾರ್ಮಿಕ ಘೋಷಣೆಯಲ್ಲ, ರಾಜಕೀಯ ಘೋಷಣೆಯಾಗಿದೆ. ಅದನ್ನು ಮುಸಲ್ಮಾನರಿಗೆ ಅವಮಾನ ಮಾಡಲು ಅಥವಾ ನೋವುಂಟು ಮಾಡಲು ಬಳಸಬಾರದು’ ಎಂದು ಗಾಂಧಿಯವರು ಸಲಹೆ ನೀಡಿದರು.

೫. ‘ವಂದೇ ಮಾತರಂ’ನ ಕನಸು ಏನೆಂದು ನನಗೆ ಗೊತ್ತಿಲ್ಲ; ಆದರೆ ಪ್ರಧಾನಿ ಮೋದಿ ಅವರ ಕನಸು ಮಾತ್ರ ಹಿಂದು ರಾಷ್ಟ್ರವೇ ಆಗಿದೆ.

ಸಂಪಾದಕೀಯ ನಿಲುವು

ಆರಂಭಿಕ ದಿನಗಳಲ್ಲಿ ಮುಸಲ್ಮಾನರೂ ಸಹ ‘ವಂದೇ ಮಾತರಂ’ ಘೋಷಣೆ ಕೂಗುತ್ತಿದ್ದರು. ನಂತರ ಅವರ ಬ್ರೈನ್‌ವಾಶ್ ಮಾಡಿದ ನಂತರ ಅವರು ‘ವಂದೇ ಮಾತರಂ’ ಅನ್ನು ವಿರೋಧಿಸಲು ಪ್ರಾರಂಭಿಸಿದರು. ನಂತರ, ಕಾಂಗ್ರೆಸ್ ಮುಸಲ್ಮಾನರ ಓಲೈಕೆಗಾಗಿ ವಂದೇ ಮಾತರಂ ಅನ್ನು ಪರೋಕ್ಷವಾಗಿ ವಿರೋಧಿಸಿತು ಮತ್ತು ಅದರಲ್ಲಿ ಶ್ರೀ ದುರ್ಗಾದೇವಿಯ ಉಲ್ಲೇಖವಿದ್ದ ಸಾಲುಗಳನ್ನು ತೆಗೆದುಹಾಕಿತು!