
ನವದೆಹಲಿ – ಭಾರತೀಯ ರಿಸರ್ವ್ ಬ್ಯಾಂಕ್ ನ ಅಂಕಿ ಅಂಶಗಳ ಪ್ರಕಾರ ಕಳೆದ ಐದೂವರೆ ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಒಟ್ಟು ೬ ಲಕ್ಷ ೧೫ ಸಾವಿರದ ೬೪೭ ಕೋಟಿ ರೂಪಾಯಿಗಳ ಒಟ್ಟು ಸಾಲದ ಮೊತ್ತವನ್ನು ಮನ್ನಾ ಮಾಡಿವೆ, ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು. ಈ ಬ್ಯಾಂಕುಗಳು ಏಪ್ರಿಲ್ ೧, ೨೦೨೨ ರಿಂದ ಸೆಪ್ಟೆಂಬರ್ ೩೦, ೨೦೨೫ ರ ಅವಧಿಯಲ್ಲಿ ಷೇರುಗಳು ಮತ್ತು ಡಿಬೆಂಚರ್‌ಗಳ ಮೂಲಕ ಮಾರುಕಟ್ಟೆಯಿಂದ ೧ ಲಕ್ಷ ೭೯ ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಸಂಗ್ರಹಿಸಿವೆ ಎಂದು ಸಚಿವ ಚೌಧರಿ ಅವರು ತಿಳಿಸಿದರು. ೨೦೨೨-೨೩ ರ ಆರ್ಥಿಕ ವರ್ಷದಿಂದ ಸರಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಯಾವುದೇ ಬಂಡವಾಳ ಹೂಡಿಕೆ ಮಾಡಿಲ್ಲ, ಎಂದೂ ಅವರು ಹೇಳಿದರು.
ಸೆಪ್ಟೆಂಬರ್ ೨೦೨೫ ರವರೆಗೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ, ೩ ಸಾವಿರದ ೫೮೮ ಕೋಟಿ ೨೨ ಲಕ್ಷ ರೂಪಾಯಿಗಳ ವಂಚನೆಯ ೫ ಲಕ್ಷ ೮೩ ಸಾವಿರದ ೨೯೧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ೨೩೮ ಕೋಟಿ ೮೩ ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ ಎಂದು ಸಚಿವ ಚೌಧರಿ ಅವರು ಮಾಹಿತಿ ನೀಡಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!