
ಅಯೋಧ್ಯೆ (ಉತ್ತರ ಪ್ರದೇಶ) – ರಾಷ್ಟ್ರ ಮತ್ತು ಧರ್ಮಕ್ಕೆ ವಿರುದ್ಧವಾದ ಯಾವುದೇ ಕೃತ್ಯವನ್ನು ಸಹಿಸಲಾಗದು. ಬಾಬರನ ಹೆಸರಿನಲ್ಲಿ ನಿರ್ಮಾಣ ಕಾರ್ಯ ಮಾಡುವುದು ರಾಷ್ಟ್ರಹಿತದ ವಿರೋಧವಾಗಿದೆ. ಇಂತಹ ಕೆಲಸ ಮಾಡುವವರಿಗೆ ತಕ್ಕ ಪ್ರತ್ಯುತ್ತರ ನೀಡಲು ಸಂತ ಸಮುದಾಯ ಸಿದ್ಧವಿದೆ. ಹುಮಾಯೂ ಕಬೀರ್ ಅವರನ್ನು ತತ್ಕ್ಷಣವೇ ಬಂಧಿಸಬೇಕು ಎಂದು ಅಯೋಧ್ಯೆಯ ಜಗದ್ಗುರು ಪರಮಹಂಸಾಚಾರ್ಯರು ಆಗ್ರಹಿಸಿದ್ದಾರೆ. ಬಂಗಾಳದ ತೃಣಮೂಲ ಕಾಂಗ್ರೆಸ್ಸಿನಿಂದ ಅಮಾನತುಗೊಂಡ ಶಾಸಕ ಹುಮಾಯೂ ಕಬೀರ್ ಅವರು ಮುರ್ಷಿದಾಬಾದ್ ನಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ಮಾಡಿ ಹಿಂದೂಗಳಿಗೆ ಬೆದರಿಕೆ ಹಾಕಿದ ಬಳಿಕ ಜಗದ್ಗುರು ಈ ರೀತಿ ಮನವಿ ಮಾಡಿದ್ದಾರೆ. ಹನುಮಾನಗಢಿಯ ಮುಖ್ಯ ಅರ್ಚಕ ರಾಜು ದಾಸ್ ಅವರೂ ಕೂಡ ಈ ಘಟನೆಯನ್ನು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿ, ದೇಶದ ಹಿಂದೂಗಳು ಜಾಗೃತರಾಗಿರಬೇಕು ಎಂದು ಕರೆ ನೀಡಿದ್ದಾರೆ.
ದಂತಧಾವನ ಕುಂಡ ಪೀಠದ ಪೀಠಾಧೀಶ್ವರ ಮಹಂತ ವಿವೇಕ ಆಚಾರ್ಯರು ಮಾತನಾಡಿ ಇನ್ನು ಮುಂದೆ ದೇಶದಲ್ಲಿ ಬಾಬರನ ಹೆಸರಿನಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಯಬಾರದು. ದೇಶವು ಪ್ರಗತಿಯ ಪಥದಲ್ಲಿದೆ ಮತ್ತು ಸನಾತನ ಸಂಸ್ಕೃತಿಯ ಗೌರವವು ವಿಶ್ವದಾದ್ಯಂತ ತಲುಪುತ್ತಿದೆ. ಇಂತಹ ಸಮಯದಲ್ಲಿ ಹುಮಾಯೂ ಕಬೀರ್ ಅವರ ಕೃತ್ಯವು ದೇಶದ ವಾತಾವರಣವನ್ನು ಕಲುಷಿತಗೊಳಿಸುವ ಪ್ರಯತ್ನವಾಗಿದೆಯೆಂದು ಹೇಳಿದರು.
ಬಾಬರನ ಹೆಸರಿನಲ್ಲಿ ಮಸೀದಿ ನಿರ್ಮಿಸಬಾರದು! – ಬಾಬರಿಯ ಮಾಜಿ ಅರ್ಜಿದಾರ ಇಕ್ಬಾಲ್ ಅನ್ಸಾರಿ
ಬಾಬರಿ ಪ್ರಕರಣದ ಮಾಜಿ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ ಅವರು ಈ ಘಟನೆಯು ರಾಜಕೀಯ ಪ್ರೇರಿತವಾಗಿದೆ ಎಂದು ಬಣ್ಣಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ಮತ್ತು ಬಾಬರಿ ನಡುವೆ ಈಗ ಯಾವುದೇ ವಿವಾದ ಉಳಿದಿಲ್ಲ. ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲಾ ಮುಸಲ್ಮಾನರೂ ಒಪ್ಪಿಕೊಂಡಿದ್ದಾರೆ. ಬಂಗಾಳದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ಬಾಬರನ ಹೆಸರಿನಲ್ಲಿ ಮಸೀದಿ ನಿರ್ಮಿಸುವ ಚರ್ಚೆಯನ್ನು ಮುನ್ನೆಲೆಗೆ ತರಲಾಗುತ್ತಿದೆ. ಬಾಬರನ ಹೆಸರಿನಲ್ಲಿ ಮಸೀದಿ ನಿರ್ಮಿಸಬಾರದು; ಏಕೆಂದರೆ ಅವನು ಮಾರ್ಗದರ್ಶಕ ಅಥವಾ ಉದಾತ್ತ ವ್ಯಕ್ತಿಯಾಗಿರಲಿಲ್ಲ ಎಂದು ಅವರು ತಿಳಿಸಿದರು.
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft