೧೨೦ ಭಯೋತ್ಪಾದಕರು ಭಾರತಕ್ಕೆ ನುಗ್ಗಲು ಸಿದ್ಧ; ಭದ್ರತಾ ಪಡೆಗಳಿಂದ ಕಣ್ಗಾವಲು ಹೆಚ್ಚಳ

ನವದೆಹಲಿ – ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನದ ವಶದಲ್ಲಿರುವ ಪ್ರದೇಶಗಳಲ್ಲಿ ೬೮ ಹೊಸ ಭಯೋತ್ಪಾದಕ ನೆಲೆಗಳು ಸಕ್ರಿಯವಾಗಿದ್ದು, ಅಲ್ಲಿಂದ ೧೧೦ ರಿಂದ ೧೨೦ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಸಿದ್ಧರಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಒಂದು ವಾರ್ತಾಪತ್ರಿಕೆಗೆ ಮಾಹಿತಿ ನೀಡಿವೆ.
೧. ಲಭ್ಯವಾದ ಮಾಹಿತಿಯ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸುವ ಪ್ರಯತ್ನಗಳು ಹೆಚ್ಚಾಗಬಹುದು. ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಮತ್ತು ಭದ್ರತಾ ಪಡೆಗಳಿಂದ ಎಲ್ಲ ಕ್ಷೇತ್ರಗಳಲ್ಲಿ ಕಣ್ಗಾವಲನ್ನು ಹೆಚ್ಚಿಸಲಾಗಿದೆ.
೨. ಒಬ್ಬ ಅಧಿಕಾರಿಯು ಮಾಹಿತಿ ನೀಡುತ್ತಾ, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ನಿರಂತರವಾಗಿ ಎಲ್‌ಒಸಿಯತ್ತ ಕಳುಹಿಸಲಾಗುತ್ತಿದೆ; ಆದರೆ ಭಾರತೀಯ ಭದ್ರತಾ ಏಜೆನ್ಸಿಗಳು ಸಂಪೂರ್ಣವಾಗಿ ಸನ್ನದ್ಧವಾಗಿವೆ. ಒಳನುಗ್ಗುವ ಪ್ರತಿಯೊಂದು ಪ್ರಯತ್ನವನ್ನು ಗಡಿಯಲ್ಲೇ ತಡೆಯಬೇಕೆಂದು ಎಲ್ಲ ಪಡೆಗಳಿಗೆ ಸೂಚನೆ ನೀಡಲಾಗಿದೆ.
೩. ಇದರ ಹಿನ್ನೆಲೆಯಲ್ಲಿ ಗಡಿಯ ಸಮೀಪವಿರುವ ಹಳ್ಳಿಗಳು ಮತ್ತು ಚೆಕ್‌ಪೋಸ್ಟ್‌ಗಳಲ್ಲಿಯೂ ಗಸ್ತನ್ನು ಹೆಚ್ಚಿಸಲಾಗಿದೆ. ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರಿಗೆ ಹೆಚ್ಚು ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಚಲನವಲನಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ. ಗಡಿಯುದ್ದಕ್ಕೂ ‘ನೈಟ್ ವಿಷನ್ ಕ್ಯಾಮೆರಾಗಳು’, ‘ಡ್ರೋನ್‌ಗಳ’ ಮೂಲಕ ಕಣ್ಗಾವಲು, ಥರ್ಮಲ್ ಸೆನ್ಸಾರ್‌ಗಳು, ಗ್ರೌಂಡ್ ಸೆನ್ಸಾರ್‌ಗಳು, ಹೆಚ್ಚಿದ ಗಸ್ತು ಮತ್ತು ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ.
೪. ನವೆಂಬರ್ ೩೦ ರಂದು ಜಮ್ಮುವಿನಲ್ಲಿ ನಡೆದ ಗಡಿ ಭದ್ರತಾ ಪಡೆಯ ಪತ್ರಿಕಾಗೋಷ್ಠಿಯಲ್ಲಿ, ‘ಜಮ್ಮು ಫ್ರಾಂಟಿಯರ್’ನ ಮಹಾನಿರೀಕ್ಷಕ ಶಶಾಂಕ್ ಆನಂದ್ ಅವರು, ‘೨೦೨೫ ರ ವರ್ಷದಲ್ಲಿ ಇಲ್ಲಿಯವರೆಗೆ ಬಿಎಸ್‌ಎಫ್ ಪಾಕಿಸ್ತಾನದ ೧೧೮ ಚೆಕ್‌ಪೋಸ್ಟ್‌ಗಳನ್ನು ನಾಶಪಡಿಸಿದೆ. ಅಕ್ರಮ ಪ್ರವೇಶವನ್ನು ಶೂನ್ಯಗೊಳಿಸುವಂತೆ ಸರ್ಕಾರ ನಮಗೆ ಗುರಿ ನೀಡಿದೆ. ನಾವು ಅದನ್ನು ಈಡೇರಿಸುತ್ತೇವೆ’ ಎಂದು ಅವರು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara