|

ನವ ದೆಹಲಿ – ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ‘ಇಂಡಿಗೋ’ ವಿಮಾನ ಸೇವೆ ಕಳೆದ ೩ ದಿನಗಳಲ್ಲಿ ಸಂಪೂರ್ಣವಾಗಿ ಕುಸಿದಿದೆ. ಇದುವರೆಗೆ ೬೦೦ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ದೇಶದಾದ್ಯಂತ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಯಿತು. ಸಂಸ್ಥೆಯು ಅಧಿಕೃತವಾಗಿ ಪ್ರಯಾಣಿಕರಿಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡದ ಕಾರಣ, ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಂಸ್ಥೆಯ ವಿರುದ್ಧ ಪ್ರತಿಭಟನೆಯನ್ನೂ ಮಾಡಿದರು. ‘ಕುಸಿದಿರುವ ಈ ಇಡೀ ವ್ಯವಸ್ಥೆ ಪುನಃ ಸುಗಮವಾಗಲು ಫೆಬ್ರವರಿ ೨೦೨೬ ಆಗಲಿದೆ’ ಎಂಬ ಮಾಹಿತಿಯನ್ನು ಈ ಸಂಸ್ಥೆಯು ನೀಡಿದೆ. ಈ ಪರಿಸ್ಥಿತಿಯ ನಂತರ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಇಂಡಿಗೋದ ಹಿರಿಯ ಅಧಿಕಾರಿಗಳೊಂದಿಗೆ ವಿಮರ್ಶಾ ಸಭೆಯನ್ನು ನಡೆಸಿತು. ಇದರ ನಂತರ, ಮಹಾನಿರ್ದೇಶನಾಲಯವು ಈ ಮೊದಲು ಘೋಷಿಸಿದ ನಿಯಮವನ್ನು ರದ್ದುಗೊಳಿಸಿತು. ಈ ನಿಯಮದ ಪ್ರಕಾರ, ವಿಮಾನದ ಪೈಲಟ್‌ಗಳು ಮತ್ತು ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ವಿಶ್ರಾಂತಿ (ರಜೆ) ನೀಡುವಂತೆ ಸೂಚಿಸಲಾಗಿತ್ತು. ಈ ನಿಯಮವನ್ನು ೫ ತಿಂಗಳ ಹಿಂದೆಯೇ ಘೋಷಿಸಲಾಗಿತ್ತು; ಆದರೆ, ಈ ಅವಧಿಯಲ್ಲಿ ಇಂಡಿಗೋ ಈ ಕುರಿತು ಸರಿಯಾದ ಯೋಜನೆಯನ್ನು ಮಾಡದ ಕಾರಣ, ಇಂದು ಅದರ ವ್ಯವಸ್ಥೆ ವಿಫಲವಾಗಿದೆ. ಈ ವಿಷಯದಲ್ಲಿ ಇಂಡಿಗೋವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಸರಕಾರವು ಈ ನಿಯಮವನ್ನೇ ಹಿಂತೆಗೆದುಕೊಂಡಿದೆ. ‘ಇದರಿಂದ ಸರಕಾರ ಏನು ಸಾಧಿಸಿತು?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ‘ನಾಳೆ ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸರಿಯಾದ ವಿಶ್ರಾಂತಿ ಸಿಗದೇ ಏನಾದರೂ ಅಪಘಾತ ಸಂಭವಿಸಿ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸಿದರೆ, ಅದಕ್ಕೆ ಯಾರು ಹೊಣೆಗಾರರು?’ ಎಂಬ ಪ್ರಶ್ನೆ ಈಗ ಎದ್ದಿದೆ.
ಇಂಡಿಗೋ ಎಲ್ಲಾ ಪರಿಸ್ಥಿತಿಯ ಕುರಿತು ಹೊರಡಿಸಿದ ಹೇಳಿಕೆಯಲ್ಲಿ, ಕಳೆದ ಎರಡು ದಿನಗಳಲ್ಲಿ ಇಂಡಿಗೋ ವ್ಯವಸ್ಥೆಯಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಇದರಿಂದ ತೊಂದರೆಗೊಳಗಾದ ನಮ್ಮ ಎಲ್ಲಾ ಗ್ರಾಹಕರು ಮತ್ತು ಮಧ್ಯಸ್ಥಗಾರರಲ್ಲಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇಂಡಿಗೋ ಇದನ್ನು ನಿವಾರಿಸಲು ಶ್ರಮದಿಂದ ಕೆಲಸ ಮಾಡುತ್ತಿದೆ. ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಮತ್ತು ಸೇವೆಗಳನ್ನು ಪುನಃಸ್ಥಾಪಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದೆ.
ಕೇಂದ್ರ ಸಚಿವರಿಂದ ಅಸಮಾಧಾನ ವ್ಯಕ್ತ

ಇಂಡಿಗೋ ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಸಂಸ್ಥೆಗೆ ತನ್ನ ಕಾರ್ಯವನ್ನು ತಕ್ಷಣವೇ ಸುಗಮಗೊಳಿಸಲು ಮತ್ತು ಬಾಡಿಗೆ ಹೆಚ್ಚಿಸದಂತೆ ನಿರ್ದೇಶನ ನೀಡಿದರು. ವಿಮಾನ ರದ್ದತಿ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿ ತಿಳಿಸಬೇಕು, ಹೋಟೆಲ್‌ನಲ್ಲಿ ವಸತಿ ಸೇರಿದಂತೆ ಪ್ರಯಾಣಿಕರಿಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಾಯ್ಡು ಅವರು ಇಂಡಿಗೋ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.
ನಾಗರಿಕ ವಿಮಾನಯಾನ ಸಚಿವ ನಾಯ್ಡು ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ಪರಿಸ್ಥಿತಿ ಮತ್ತು ಪರಿಹಾರ ಕ್ರಮಗಳನ್ನು ವಿಮರ್ಶಿಸಲಾಯಿತು. ಈ ಸಮಯದಲ್ಲಿ, ಇಂಡಿಗೋ ಹೇಳಿದಂತೆ, ಡಿಸೆಂಬರ್ ೮ ರಿಂದ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದು ಮತ್ತು ಫೆಬ್ರವರಿ ೧೦, ೨೦೨೬ ರವರೆಗೆ ಸ್ಥಿರ ವಿಮಾನ ಸೇವೆ ಪುನಃ ಪ್ರಾರಂಭವಾಗಲಿದೆ.
ವಿಮಾನಯಾನ ಕಂಪನಿಗಳ ಸುಲಿಗೆ!
ಇಂಡಿಗೋದ ನೂರಾರು ವಿಮಾನಗಳು ರದ್ದಾದ ಕಾರಣ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಯಿತು. ಅವರು ಪರ್ಯಾಯ ವ್ಯವಸ್ಥೆಗಳನ್ನು ನೋಡಲು ಪ್ರಾರಂಭಿಸಿದರು. ಅದರ ದುರುಪಯೋಗ ಪಡೆದ ಇತರ ವಿಮಾನಯಾನ ಸಂಸ್ಥೆಗಳು ತಮ್ಮ ಟಿಕೆಟ್ ಮೌಲ್ಯವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದವು. ಸಾಮಾನ್ಯವಾಗಿ ದೆಹಲಿ-ಮುಂಬಯಿಗೆ ಟಿಕೆಟ್ ಬೆಲೆ ೪ ಸಾವಿರದಿಂದ ೯ ಸಾವಿರ ರೂಪಾಯಿ ಇರುವಾಗ, ಅದನ್ನು ೪೦ ರಿಂದ ೮೦ ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಯಿತು, ಇದರಿಂದ ಮಧ್ಯಮ ವರ್ಗದ ಪ್ರಯಾಣಿಕರಿಗೆ ಇದರ ಹೊಡೆತವೂ ಬಿತ್ತು, ಮತ್ತು ಯಾರಿಗೆ ಸಾಧ್ಯವೋ ಅವರಿಗೆ ಇಂತಹ ಬೆಲೆಯ ಟಿಕೆಟ್‌ಗಳು ಕಾಯ್ದಿರಿಸಲ್ಪಟ್ಟಿದ್ದರಿಂದ, ಅವುಗಳೂ ಸಹ ಸಿಗಲಿಲ್ಲ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಹೊಸ ನಿಯಮಗಳು ಯಾವುವು?

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ‘ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್’ ಹೆಸರಿನಲ್ಲಿ ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಮೊದಲ ಹಂತ ಜುಲೈ ೧, ೨೦೨೫ ರಿಂದ ಮತ್ತು ಎರಡನೇ ಹಂತ ನವೆಂಬರ್ ೧, ೨೦೨೫ ರಿಂದ ಜಾರಿಗೆ ಬಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ, ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸಾಕಷ್ಟು ವಿಶ್ರಾಂತಿ ನೀಡಲು ಒತ್ತು ನೀಡಲಾಗಿದೆ. ೭ ದಿನಗಳ ಕೆಲಸದ ನಂತರ ೪೮ ಗಂಟೆಗಳ ವಿಶ್ರಾಂತಿ, ನೈಟ್ ಲ್ಯಾಂಡಿಂಗ್‌ಗಾಗಿ ಈಗ ೬ ಬದಲಿಗೆ ೨ ಲ್ಯಾಂಡಿಂಗ್‌ಗಳಿಗೆ ಅನುಮತಿ, ಸತತ ೨ ರಾತ್ರಿಗಳಿಗಿಂತ ಹೆಚ್ಚು ರಾತ್ರಿ ಪಾಳಿಗೆ ಅನುಮತಿ ಇಲ್ಲ. ರಾತ್ರಿ ಪಾಳಿಯು ಈಗ ಮಧ್ಯರಾತ್ರಿ ೧೨ ರಿಂದ ೬ ರವರೆಗೆ ಇರುತ್ತದೆ, ದೂರದ ವಿಮಾನಗಳ ನಂತರ ಪೈಲಟ್‌ಗಳಿಗೆ ವಿಶ್ರಾಂತಿ ಇತ್ಯಾದಿ ನಿಯಮಗಳು ಇದರಲ್ಲಿ ಸೇರಿವೆ. ಇದರಿಂದ ಇಂಡಿಗೋದ ಪ್ರಸ್ತುತ ಲಭ್ಯವಿರುವ ಮಾನವ ಸಂಪನ್ಮೂಲವು ಕಡಿಮೆಯಾಯಿತು. ಹಾಗಾಗಿ ಅರ್ಧಕ್ಕಿಂತ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಯಿತು.
ಸಂಪಾದಕೀಯ ನಿಲುವು
|
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ