
ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಇಸ್ಲಾಮಿಕ್ ಕಟ್ಟರವಾದಿ ಎಂದು ಇಮ್ರಾನ್ ಖಾನ್ ಅವರ ಸಹೋದರಿ ಅಲೈಮಾ ಖಾನುಮ್ ಅವರು ತೀವ್ರವಾಗಿ ಟೀಕಿಸಿದ್ದಾರೆ. ‘ಸ್ಕೈ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಇಸ್ಲಾಂ ಧರ್ಮವನ್ನು ನಂಬದ ಜನರ ವಿರುದ್ಧ ಮುನೀರ್ ಹೋರಾಡಲು ಬಯಸುತ್ತಾರೆ ಎಂದೂ ಅವರು ಹೇಳಿದರು.
ಈ ಸಂದರ್ಶನದಲ್ಲಿ ಖಾನುಮ್ ಅವರಿಗೆ ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಕೇಳಿದಾಗ, ಅವರು ನೇರವಾಗಿ ಅಸೀಮ್ ಮುನೀರ್ ವಿರುದ್ಧ ಆರೋಪ ಮಾಡಿದರು. ಮುನೀರ್ ತಮ್ಮ ಕಟ್ಟರವಾದಿ ಸಿದ್ಧಾಂತದಿಂದಾಗಿ ಭಾರತದ ವಿರುದ್ಧ ಯುದ್ಧ ಮಾಡಲು ಬಯಸುತ್ತಾರೆ. ನನ್ನ ಸಹೋದರ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದಾಗ, ಅವರು ಭಾರತದೊಂದಿಗೆ ಮತ್ತು ಭಾಜಪದೊಂದಿಗೂ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸಿದರು. ಇದರ ಜೊತೆಗೆ ಮುನೀರ್ ಅವರು ಗಡಿಯಲ್ಲಿ ಉದ್ವಿಗ್ನತೆ ಮತ್ತು ಯುದ್ಧದ ವಾತಾವರಣವನ್ನು ಕೂಡ ಸೃಷ್ಟಿಸುತ್ತಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಫ್ ಅವರು ಜೈಲಿಗೆ ಹಾಕಿದ್ದರೂ ಸಹ, ಇಂದಿಗೂ ಪಾಕಿಸ್ತಾನದಲ್ಲಿ ಶೇ. 90% ರಷ್ಟು ಜನರು ಇಮ್ರಾನ್ ಖಾನ್ ಪರವಾಗಿಯೇ ಇದ್ದಾರೆ. ನಾನು ಪಾಶ್ಚಾತ್ಯ ದೇಶಗಳಿಗೆ ಅವರ ಬಿಡುಗಡೆಗಾಗಿ ಸಹಾಯ ಮಾಡಲು ಮನವಿ ಮಾಡಿದ್ದೇನೆ. ಇಮ್ರಾನ್ ಖಾನ್ ಅವರು ಭ್ರಷ್ಟಾಚಾರದ ಪ್ರಕರಣದಲ್ಲಿ 2023 ರಿಂದ ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿದ್ದು, ಅವರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ.
ಇಮ್ರಾನ್ ಖಾನ್ ಅವರ ಮರಣದ ವದಂತಿ ಹಬ್ಬಿತ್ತು
ನವೆಂಬರ್ 25 ರಂದು ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಅವರ ಬೆಂಬಲಿಗರು ಮತ್ತು ಕುಟುಂಬ ಸದಸ್ಯರು ಆಗಮಿಸಿದ್ದರು; ಆದರೆ ಕಾರಾಗೃಹದ ಅಧಿಕಾರಿಗಳು ಅವರಿಗೆ ಅನುಮತಿ ನೀಡಲಿಲ್ಲ. ನಂತರ ಇಮ್ರಾನ್ ಖಾನ್ ಅವರು ಸಾವನ್ನಪ್ಪಿದ್ದಾರೆಂದು ಕಾಡ್ಗಿಚ್ಚಿನಂತೆ ವದಂತಿ ಹರಡಿತು ಮತ್ತು ಪಾಕಿಸ್ತಾನದ ವಿವಿಧೆಡೆ ಭಾರೀ ಪ್ರತಿಭಟನೆಗಳನ್ನು ನಡೆಸಲಾಯಿತು.
ಸಂಪಾದಕೀಯ ನಿಲುವುಸಹೋದರನನ್ನು ಬಂಧಿಸಿದ್ದಕ್ಕಾಗಿ ಅಲೈಮಾ ಖಾನುಮ್ ಅವರಿಗೆ ಅಸೀಮ್ ಮುನೀರ್ ಇಸ್ಲಾಮಿಕ್ ಕಟ್ಟರವಾದಿ ಎಂದೆನಿಸುತ್ತಿದೆ. ಇಷ್ಟು ದಿನ ಅವರು ಈ ಬಗ್ಗೆ ಯಾಕೆ ಏನೂ ಮಾತನಾಡಲಿಲ್ಲ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation