|

ಕಾನಪುರ (ಉತ್ತರ ಪ್ರದೇಶ) – ಕಾನಪುರ ಜಿಲ್ಲೆಯ ಬಿಚಿಪುರದಲ್ಲಿರುವ ಶಿವಹರಿ ಧಾಮದ ಭೂತೇಶ್ವರ ಮಹಾದೇವ ದೇವಾಲಯದ ಗರ್ಭಗುಡಿಯಲ್ಲಿ ಇಬ್ಬರು ಮುಸ್ಲಿಂ ಯುವಕರು ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ಇಬ್ಬರೂ ಯುವಕರ ತಂದೆ ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಡಂಬನೆಯಿಂದಾಗಿ ಅರ್ಚಕರಿಗೆ ಕಣ್ಣೀರು ಬಂದಿತು.
ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ !
ಈ ಪ್ರಕರಣದ ದೂರಿನಲ್ಲಿ, ಮಧ್ಯಾಹ್ನದ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಈ ಇಬ್ಬರು ಯುವಕರು, ಕಾಲಿನ ಪಾದರಕ್ಷೆಗಳನ್ನು ತೆಗೆಯದೆ ನೇರವಾಗಿ ದೇವಾಲಯದ ಗರ್ಭಗುಡಿಗೆ ಹೋಗಿ ಅಲ್ಲಿ ಮೂತ್ರ ವಿಸರ್ಜನೆ ಮಾಡಿದರು ಎಂದು ಹೇಳಲಾಗಿದೆ. ಅಲ್ಲಿದ್ದವರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ದೇವಸ್ಥಾನದ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಉಪಸ್ಥಿತ ಭಕ್ತರನ್ನು ಅವರು ತಳ್ಳಾಡಿದರು.
ಆರೋಪಿಗಳ ತಂದೆಯಾದ ಪೊಲೀಸ್ ನಿಶ್ಶಬ್ದವಾಗಿ ನೋಡುತ್ತಿದ್ದರು !
ಇದು ಅವರ ಮತಾಂಧ ಮನೋಭಾವನೆಯನ್ನು ತೋರಿಸುತ್ತದೆ. ಹಿಂದೂಗಳ ಮೇಲೆ ಮುಸ್ಲಿಮರು ದೌರ್ಜನ್ಯ ಮಾಡಿದಾಗ ಇಂತಹ ಪೊಲೀಸರು ಹೇಗೆ ನ್ಯಾಯ ನೀಡುವರು? ಮಾಧ್ಯಮಗಳ ಮುಂದೆ ಮಾಹಿತಿ ನೀಡುತ್ತಿದ್ದಾಗ ಅರ್ಚಕ ಶ್ರೀ. ಶಿವಕುಮಾರ್ ದ್ವಿವೇದಿ ಕಣ್ಣೀರು ಹಾಕಿದರು. ಅವರು ಇಬ್ಬರೂ ದೇವಸ್ಥಾನದ ಛಾವಣಿಯ ಮೇಲೆ ಹೋಗಿ ವಿಧ್ವಂಸಕ ಕೃತ್ಯ ನಡೆಸಿದರು, ಜೊತೆಗೆ ಛಾಯಾಚಿತ್ರಗಳನ್ನು ತೆಗೆದರು ಮತ್ತು ಗರ್ಭಗುಡಿಯನ್ನು ಅಪವಿತ್ರಗೊಳಿಸಿದರು ಎಂದು ಅರ್ಚಕರು ಹೇಳಿದರು. ಯುವಕರನ್ನು ತಡೆದವರನ್ನು ಅವಮಾನಿಸಿದ್ದಲ್ಲದೇ, ದೇವಸ್ಥಾನದಿಂದಲೇ ತಮ್ಮ ತಂದೆಗೆ ಕರೆ ಮಾಡಿ ಕರೆಸಿದರು. ಅಷ್ಟೇ ಅಲ್ಲದೆ ತಂದೆಯ ಎದುರು ಭಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದೆಲ್ಲವನ್ನೂ ಅವರ ತಂದೆ(ಪೊಲೀಸ್)ನಿಶ್ಶಬ್ದವಾಗಿ ನೋಡುತ್ತಿದ್ದರು. ಅರ್ಚಕ ಶ್ರೀ. ಶಿವಕುಮಾರ್ ದ್ವಿವೇದಿ ಅವರು, ಸರ್ಕಾರ ನಮ್ಮ ಬೆಂಬಲಕ್ಕಿದೆ; ಆದರೆ ಸರಿಯಾದ ಕ್ರಮ ಜರುಗಬೇಕೆಂದು ನಮಗನಿಸುತ್ತದೆ. ನಮಗೆ ಅಪಮಾನವಾಗಿದೆ. ದೇವಸ್ಥಾನದ ಸಿಬ್ಬಂದಿಗಳು ಕೂಡ ಯುವಕರ ಈ ವರ್ತನೆಯಿಂದ ಭಯಗೊಂಡಿದ್ದಾರೆ. ದೇವಸ್ಥಾನದಲ್ಲಿ ಶಾಲೆಯನ್ನೂ ಸಹ ನಡೆಸಲಾಗುತ್ತದೆ. ಆದ್ದರಿಂದ ಇಂತಹ ವರ್ತನೆಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಆದರೆ ಈ ಯುವಕರನ್ನು ಕ್ಷಮಿಸುವಂತೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಅವರ ತಂದೆ ಕೂಡ ಸ್ಥಳದಲ್ಲಿದ್ದರು, ನಮ್ಮ ದುಃಖವನ್ನು ನಾವು ಯಾರಿಗೆ ಹೇಳಬೇಕು?
ಹಿಂದುತ್ವವಾದಿ ಸಂಘಟನೆಗಳ ಪ್ರತಿಭಟನೆ !
ದೇವಸ್ಥಾನದ ಟ್ರಸ್ಟ್‌ನ ಶಿವಕುಮಾರ್ ದ್ವಿವೇದಿ ಮತ್ತು ಇತರ ಕಾರ್ಯಕರ್ತರು ಈ ಮಾಹಿತಿಯನ್ನು ಬಜರಂಗ ದಳ ಮತ್ತು ಹಿಂದೂ ಜಾಗರಣ ಮಂಚ್‌ನ ಕಾರ್ಯಕರ್ತರಿಗೆ ತಿಳಿಸಿದರು. ಅದರ ನಂತರ ಕಾರ್ಯಕರ್ತರು ಸ್ಥಳಕ್ಕೆ ತಲುಪಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರ ನಂತರ ಬಜರಂಗ ದಳದ ಜಿಲ್ಲಾ ಸಂಯೋಜಕ ಶುಭಂ ಶೌರ್ಯ ಅಗ್ನಿಹೋತ್ರಿ ಮತ್ತು ಹಿಂದೂ ಜಾಗರಣ ಮಂಚ್‌ನ ಜಿಲ್ಲಾ ಸಂಯೋಜಕ ರಾಕೇಶ್ ಅವಸ್ಥಿ ಅವರು ಸಹಾಯಕ ಪೊಲೀಸ್ ಆಯುಕ್ತ ಕೃಷ್ಣಕಾಂತ್ ಯಾದವ್ ಅವರಿಗೆ ಮನವಿ ಸಲ್ಲಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಪ್ರತಿಭಟನೆ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಘಟನೆಯ ಪ್ರತ್ಯೇಕ ತನಿಖೆ ಪ್ರಾರಂಭ – ಪೊಲೀಸ್
ಈ ಘಟನೆಯ ಬಗ್ಗೆ ಮಾಹಿತಿ ನೀಡಿದ ಸಹಾಯಕ ಪೊಲೀಸ್ ಆಯುಕ್ತ ಕೃಷ್ಣಕಾಂತ್ ಯಾದವ್, ಸ್ವತಃ ಘಟನಾ ಸ್ಥಳಕ್ಕೆ ಹೋಗಿರುವುದಾಗಿ ತಿಳಿಸಿದರು. ನೀಡಿದ ದೂರಿನ ಪ್ರಕಾರ ದೂರು ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಘಟನೆಯ ಪ್ರತ್ಯೇಕ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!