85 ಸಾವಿರದ 450 ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ ಪ್ರಾರಂಭ!

ಮುಂಬಯಿ, ಡಿಸೆಂಬರ್ ೧ – ಗುಜರಾತ ರಾಜ್ಯದ ಮಾದರಿಯಂತೆಯೇ ಮಹಾರಾಷ್ಟ್ರದಲ್ಲಿಯೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವ ನೀತಿಯನ್ನು ಮಹಾರಾಷ್ಟ್ರ ಸರಕಾರ ಅಳವಡಿಸಿಕೊಂಡಿದೆ. ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ರಾಜ್ಯದ 2 ಲಕ್ಷ 13 ಸಾವಿರದ 625 ರೈತರನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ 85 ಸಾವಿರದ 450 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಪ್ರಾರಂಭಿಸಲಾಗುವುದು. ರಾಜ್ಯದ ಎಲ್ಲ 34 ಜಿಲ್ಲೆಗಳಲ್ಲಿ ನೈಸರ್ಗಿಕ ಕೃಷಿಯನ್ನು ಪ್ರಾರಂಭಿಸಲಾಗುವುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
1. ನೈಸರ್ಗಿಕ ಕೃಷಿಗಾಗಿ 50 ಹೆಕ್ಟೇರ್ ಪ್ರದೇಶದ ಒಂದು ಗುಂಪು ರಚಿಸಲಾಗುವುದು. ಪ್ರತಿ ರೈತರಿಗೆ ಗರಿಷ್ಠ 1 ಎಕರೆ ಮಿತಿಯಲ್ಲಿ ಲಾಭ ನೀಡಲಾಗುವುದು. ಒಂದು ಗುಂಪಿನಲ್ಲಿ ಕನಿಷ್ಠ 125 ರೈತರು ಇರಲಿದ್ದಾರೆ.
2. ಒಮ್ಮೆ ಆಯ್ಕೆಯಾದ ಫಲಾನುಭವಿಗಳ ಗುಂಪಿಗೆ 2 ವರ್ಷಗಳವರೆಗೆ ಲಾಭ ನೀಡಲಾಗುವುದು.
3. ಈ ಯೋಜನೆಯಡಿಯಲ್ಲಿ ಒಂದು ಗುಂಪಿಗೆ 2 ಕೃಷಿ ಸ್ನೇಹಿತರು, 1 ಸಾವಿರದ 709 ಗುಂಪುಗಳಿಗಾಗಿ 3 ಸಾವಿರದ 418 ಕೃಷಿ ಸ್ನೇಹಿತರನ್ನು ಆಯ್ಕೆ ಮಾಡಲಾಗಿದೆ.
4. ನೈಸರ್ಗಿಕ ಕೃಷಿಯ ಪ್ರಚಾರ-ಪ್ರಸಾರಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು ಮತ್ತು ಅದರ ಕುರಿತು ತರಬೇತಿಗಳನ್ನು ಆಯೋಜಿಸಲಾಗುವುದು. ನೈಸರ್ಗಿಕ ಕೃಷಿಗಾಗಿ ಆರ್ಥಿಕ ಸಹಾಯ ಪಡೆಯುವ ರೈತರಿಗೆ ರಾಸಾಯನಿಕ ಗೊಬ್ಬರಗಳು, ಬಿ.ಟಿ. ಬೀಜಗಳು ಮತ್ತು ಕೀಟನಾಶಕಗಳ ಬಳಕೆಗೆ ನಿರ್ಬಂಧವಿರುತ್ತದೆ.
5. ನೈಸರ್ಗಿಕ ಕೃಷಿಗೆ ಅಗತ್ಯವಿರುವ ಕೃಷಿ ಪದ್ಧತಿಯನ್ನು ಅನುಸರಿಸುವ ರೈತರಿಗೆ ಈ ಯೋಜನೆಗೆ ಆದ್ಯತೆ ನೀಡಲಾಗುವುದು. ಸ್ವಯಂಪ್ರೇರಣೆಯಿಂದ ಸಿದ್ಧರಿರುವ ರೈತರಿಗೆ ಇದರಲ್ಲಿ ಆದ್ಯತೆ ಸಿಗುತ್ತದೆ. ಯೋಜನೆಯಲ್ಲಿ ಮಹಿಳಾ ರೈತರಿಗೆ ಶೇ. 30ರಷ್ಟು ಆದ್ಯತೆ ನೀಡಲಾಗುವುದು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!