
ನವದೆಹಲಿ – ಕೇಂದ್ರ ಸರಕಾರದ ಗೃಹ ಸಚಿವಾಲಯವು ಅಮೆರಿಕದ ಕ್ರೈಸ್ತ ಧರ್ಮಪ್ರಚಾರಕ ಫ್ರಾಂಕ್ಲಿನ್ ಗ್ರಹಾಂ ಅವರಿಗೆ ವೀಸಾ ನೀಡಲು ನಿರಾಕರಿಸಿದ್ದರಿಂದ, ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದಲ್ಲಿ ನಡೆಯಬೇಕಿದ್ದ ಅವರ ಕ್ರೈಸ್ತ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು; ಆದರೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಸ್ಥೆಯು, ಕಾರ್ಯಕ್ರಮವು ಮೊದಲೇ ನಿಗದಿಯಾದ ರೀತಿಯಲ್ಲಿಯೇ ನಡೆದಿದೆ ಎಂದು ಹೇಳಿಕೊಂಡಿದೆ. ವೀಸಾ ನಿರಾಕರಿಸಲು ಗೃಹ ಸಚಿವಾಲಯವು ಕಾರಣಗಳನ್ನು ಬಹಿರಂಗಪಡಿಸದಿದ್ದರೂ, ಫ್ರಾಂಕ್ಲಿನ್ ಗ್ರಹಾಂ ಮತ್ತು ಅವರ ಸಂಸ್ಥೆಯು ಭಾರತದಲ್ಲಿ ದೀರ್ಘಕಾಲದಿಂದ ನಡೆಸುತ್ತಿದ್ದ ಮತಾಂತರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ವೀಸಾ ನಿರಾಕರಿಸಿದ್ದಕ್ಕೆ ಕ್ರೈಸ್ತ ಸಂಘಟನೆಗಳಿಂದ ಅಸಮಾಧಾನ ವ್ಯಕ್ತ
ಫ್ರಾಂಕ್ಲಿನ್ ಗ್ರಹಾಂ ಅವರಿಗೆ ವೀಸಾ ನಿರಾಕರಿಸಿದ್ದಕ್ಕಾಗಿ ನಾಗಾಲ್ಯಾಂಡ್ ಯುನೈಟೆಡ್ ಕ್ರಿಶ್ಚಿಯನ್ ಫೋರಂ, ನ್ಯಾಷನಲ್ ಪೀಪಲ್ಸ್ ಪಾರ್ಟಿ, ಚಾಖೇಸಾಂಗ್ ಪಬ್ಲಿಕ್ ಆರ್ಗನೈಸೇಶನ್, ನಾಗಾಲ್ಯಾಂಡ್ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಇತರ ಕೆಲವು ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಫ್ರಾಂಕ್ಲಿನ್ ಗ್ರಹಾಂ ಅವರ ಭಾರತದಲ್ಲಿನ ಮತಾಂತರದ ಇತಿಹಾಸ
ಫ್ರಾಂಕ್ಲಿನ್ ಕಳೆದ ಹಲವಾರು ದಶಕಗಳಿಂದ ಭಾರತಕ್ಕೆ ಆಗಾಗ ಬರುತ್ತಿದ್ದಾರೆ. ಅವರ ‘ಸಮಾರಿಟನ್ಸ್ ಪರ್ಸ್’ ಎಂಬ ಸಂಸ್ಥೆಯು ಭಾರತದಲ್ಲಿ ವರ್ಷಗಳಿಂದ ಮತಾಂತರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆಹಾರ ಧಾನ್ಯಗಳು ಮತ್ತು ವಸ್ತುಗಳ ವಿತರಣೆ, ಹಾಗೂ ಇತರೆ ನೆರವಿನ ಮೂಲಕ ಮತಾಂತರಕ್ಕೆ ಪ್ರಯತ್ನಿಸಿದ್ದಾರೆ ಎಂಬ ಆರೋಪ ಅವರ ಮೇಲೆ ಅನೇಕ ಬಾರಿ ಬಂದಿದೆ. ೧೯೮೦ ರ ದಶಕದಲ್ಲಿ ಈ ಸಂಸ್ಥೆಯು ಭಾರತದಲ್ಲಿ ೧ ಸಾವಿರ ಚರ್ಚ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿತ್ತು ಮತ್ತು ವಿವಿಧ ಧರ್ಮಪ್ರಚಾರ ಅಭಿಯಾನಗಳ ಮೂಲಕ ಆ ದಿಕ್ಕಿನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿತು.
ಗಾಂಧಿ-ನೆಹರು ಕುಟುಂಬದೊಂದಿಗೆ ನಿಕಟ ಸಂಬಂಧಗಳು
ಫ್ರಾಂಕ್ಲಿನ್ ಅವರ ತಂದೆ ಮತ್ತು ಪ್ರಸಿದ್ಧ ಕ್ರೈಸ್ತ ಧರ್ಮಪ್ರಚಾರಕ ಬಿಲ್ಲಿ ಗ್ರಹಾಂ ಅವರು ಮೊದಲು ೧೯೫೦ ರ ದಶಕದಲ್ಲಿ ಭಾರತಕ್ಕೆ ಬಂದಿದ್ದರು ಮತ್ತು ಆ ಕಾಲದ ಪ್ರಧಾನಿ ನೆಹರು ಅವರನ್ನು ಭೇಟಿ ಮಾಡಿದ್ದರು. ಅವರ ಗಾಂಧಿ ಕುಟುಂಬದೊಂದಿಗಿನ ಹಳೆಯ ಸಂಬಂಧಗಳೂ ಸಹ ಚರ್ಚೆಗೆ ಒಳಗಾಗುತ್ತಿರುತ್ತವೆ. (ಇದೇ ಸಂಬಂಧಗಳಿಂದಾಗಿ ಈಶಾನ್ಯ ಭಾರತವು ಕೆಲವೇ ವರ್ಷಗಳಲ್ಲಿ ಕ್ರೈಸ್ತ ಬಹುಸಂಖ್ಯಾತ ಪ್ರದೇಶವಾಯಿತು ಮತ್ತು ಇಂದು ಅಲ್ಲಿ ಹಿಂಸಾಚಾರ ನಡೆಯುತ್ತಿದೆ! – ಸಂಪಾದಕರು)
ಸಂಪಾದಕೀಯ ನಿಲುವುಇಂತಹವರಿಗೆ ಭಾರತವು ವೀಸಾ ನಿರಾಕರಿಸುವುದಕ್ಕಿಂತ ಹೆಚ್ಚಾಗಿ, ಅವರು ಭಾರತಕ್ಕೆ ಬಂದನಂತರ ಅವರ ವಿರುದ್ಧ ಮತಾಂತರದ ಪ್ರಕರಣದಲ್ಲಿ ದೂರು ದಾಖಲಿಸಿ, ಬಂಧಿಸಿ, ಜೀವಾವಧಿ ಜೀವಾವಧಿ ಶಿಕ್ಷೆ ನೀಡಬೇಕು, ಎಂದು ಹಿಂದೂಗಳು ಭಾವಿಸುತ್ತಾರೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!