
ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದ ಕೊಲಂಬೊದಲ್ಲಿ ‘ದಿತ್ವಾ’ ಚಂಡಮಾರುತದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ತೊಂದರೆಗೊಳಗಾದ ಜನರಿಗೆ ಸಹಾಯ ಮಾಡಲು ಪಾಕಿಸ್ತಾನವು ಕಳುಹಿಸಿದ ಸಾಮಗ್ರಿಗಳು ಕಾಲಾವಧಿ ಮೀರಿದವು ಎಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಹೈಕಮಿಷನ್ ಸಾಮಾಜಿಕ ಮಾಧ್ಯಮದಲ್ಲಿ, ‘ನಾವು ಯಾವಾಗಲೂ ಶ್ರೀಲಂಕಾದ ಬೆಂಬಲಕ್ಕೆ ನಿಲ್ಲುತ್ತೇವೆ ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸುತ್ತಿದ್ದೇವೆ’ ಎಂದು ಪೋಸ್ಟ್ ಮಾಡಿತ್ತು. ಆದಾಗ್ಯೂ, ಪಾಕಿಸ್ತಾನದ ಹೈಕಮಿಷನ್ ಈಗ ಈ ಪೋಸ್ಟ್ ಅನ್ನು ತೆಗೆದುಹಾಕಿದೆ.
🇵🇰➡️🇱🇰 Shameful!
Pakistan sent expired relief materials to cyclone-hit Sri Lanka 😠🌪️ Cyclone Ditwah has caused the worst flooding in decades, claiming hundreds of lives in the island nation.
Once again, a poverty-stricken Pakistan tries to pose as a generous helper for global… pic.twitter.com/HDjnd0kcHV
— Sanatan Prabhat (@SanatanPrabhat) December 2, 2025
ಹಲವು ಮಾಧ್ಯಮಗಳಲ್ಲಿನ ಅನೇಕ ಬಳಕೆದಾರರು ತಕ್ಷಣವೇ ಪಾಕಿಸ್ತಾನದ ಈ ಹೇಳಿಕೆಯ ಬಗ್ಗೆ ಪ್ರಶ್ನಿಸಿದ್ದಾರೆ. ‘ಪಾಕಿಸ್ತಾನವು ಶ್ರೀಲಂಕಾಕ್ಕೆ ಕಳುಹಿಸಿದ ಸಹಾಯವು ಒಂದು ವರ್ಷದ ಹಿಂದೆಯೇ ಕಾಲಾವಧಿ ಮೀರಿತ್ತು. ಇದರಿಂದ ಪಾಕಿಸ್ತಾನದ ಉದ್ದೇಶದ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ’ ಎಂದು ಅವರು ಆರೋಪಿಸಿದ್ದಾರೆ. ಈ ಬಹಿರಂಗದ ನಂತರ ಪಾಕಿಸ್ತಾನದ ಮೇಲೆ ದೊಡ್ಡ ಪ್ರಮಾಣದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಪ್ರವಾಹದಂತಹ ವಿಪತ್ತಿನ ಸಮಯದಲ್ಲಿ ಕಾಲಾವಧಿ ಮೀರಿದ ಸಾಮಗ್ರಿಗಳನ್ನು ಕಳುಹಿಸುವುದು, ಪಾಕಿಸ್ತಾನದ ವಿಶ್ವಾಸಾರ್ಹವಲ್ಲದ ಮತ್ತು ನಾಚಿಕೆಗೇಡಿನ ಕ್ರಮ ಎಂದು ಕೆಲವರು ಟೀಕಿಸಿದ್ದಾರೆ.
ಮತ್ತೊಂದೆಡೆ, ಭಾರತವು ‘ಆಪರೇಷನ್ ಸಾಗರ ಬಂಧು’ ಅಡಿಯಲ್ಲಿ ಶ್ರೀಲಂಕಾಕ್ಕೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಕಳುಹಿಸುವ ಮೂಲಕ ತನ್ನ ಸ್ನೇಹ ಕರ್ತವ್ಯವನ್ನು ನಿಭಾಯಿಸಿತು.
ಸಂಪಾದಕೀಯ ನಿಲುವುಪಾಕಿಸ್ತಾನವು ತಾನೇ ಭಿಕ್ಷುಕರ ಸ್ಥಿತಿಯಲ್ಲಿದ್ದರೂ, ಜಗತ್ತಿನ ಮುಂದೆ ಕೇವಲ ದೊಡ್ಡಸ್ತಿಕೆ ಪ್ರದರ್ಶಿಸಲು ಇತರ ದೇಶಗಳಿಗೆ ನೆರವು ನೀಡುತ್ತಿರುವಂತೆ ನಾಟಕವಾಡುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation