ವಂಚನೆ ಮಾಡಿದವರ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಿ, ನೇರವಾಗಿ ಪ್ರಕರಣ ದಾಖಲಿಸುವಂತೆ ಸರಕಾರದ ನಿರ್ದೇಶನ!

ಮುಂಬಯಿ, ಡಿಸೆಂಬರ್ ೧ (ವಾರ್ತೆ) – ಬಾಂಗ್ಲಾದೇಶಿ ನುಸುಳುಕೋರರು ಮಹಾರಾಷ್ಟ್ರದಲ್ಲಿ ನಕಲಿ ಆಧಾರ್ ಕಾರ್ಡ್‌ಗಳ ಆಧಾರದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನನ ಪ್ರಮಾಣಪತ್ರಗಳನ್ನು ಪಡೆದಿರುವ ಸಾಧ್ಯತೆಯಿದೆ. ಅಮರಾವತಿ, ಸಿಲ್ಡೋಡ್, ಅಕೋಲಾ, ಛತ್ರಪತಿ ಸಂಭಾಜಿನಗರ ನಗರ, ಲಾತೂರ್, ಅಂಜನ್‌ಗಾವ್ ಸುರ್ಜಿ, ಅಚಲ್‌ಪುರ, ಪುಸದ್, ಪರಭಣಿ, ಬೀಡ್, ಗೇವ್ರಾಯ್, ಜಾಲ್ನಾ, ಅರ್ಧಾಪುರ್, ಪರಳಿ ಮುಂತಾದ ಪ್ರದೇಶಗಳಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಹೆಚ್ಚಿನ ಸಂಖ್ಯೆಯಲ್ಲಿ ಜನನ-ಮರಣ ಪ್ರಮಾಣಪತ್ರಗಳನ್ನು ಪಡೆಯಲಾಗಿದೆ ಎಂದು ಸರಕಾರದ ಗಮನಕ್ಕೆ ಬಂದಿದೆ.
ಆದ್ದರಿಂದ, ರಾಜ್ಯದಾದ್ಯಂತ ಆಧಾರ್ ಕಾರ್ಡ್‌ಗಳ ಆಧಾರದ ಮೇಲೆ ನೀಡಲಾದ ಎಲ್ಲಾ ಪ್ರಮಾಣಪತ್ರಗಳನ್ನು ಮರು-ಪರಿಶೀಲಿಸುವಂತೆ ಈ ಪ್ರದೇಶಗಳ ಸ್ಥಳೀಯ ಪೊಲೀಸ್ ಠಾಣೆಗಳು ಮತ್ತು ತಹಸೀಲ್ದಾರ್‌ಗಳಿಗೆ ಸರಕಾರ ಆದೇಶಿಸಿದೆ. ವಂಚನೆ ಮಾಡಿದವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸುವಂತೆ ಸರಕಾರ ನಿರ್ದೇಶನ ನೀಡಿದೆ. ಕಂದಾಯ ಇಲಾಖೆಯು ಡಿಸೆಂಬರ್ ೧ ರಂದು ಈ ಕುರಿತು ಸರಕಾರದ ನಿರ್ಧಾರವನ್ನು ಪ್ರಕಟಿಸಿದೆ.
1. ಜನನ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್‌ನಲ್ಲಿನ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿದ್ದರೆ, ಆ ಪ್ರಮಾಣಪತ್ರಗಳನ್ನು ರದ್ದುಪಡಿಸುವಂತೆ ಸರಕಾರ ನಿರ್ದೇಶನ ನೀಡಿದೆ.
2. ರಾಜ್ಯದ ಅನೇಕ ತಹಸೀಲ್ ಕಚೇರಿಗಳಲ್ಲಿ ಕೇವಲ ಆಧಾರ್ ಕಾರ್ಡ್‌ಗಳನ್ನು ಮಾತ್ರ ಮಾನ್ಯ ಮಾಡಿ ಜನನ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಪ್ರಮಾಣಪತ್ರಗಳನ್ನು ನೀಡುವಾಗ ಶಾಲಾ ದಾಖಲೆ ಅಥವಾ ಜನನ ಸ್ಥಳದ ಯಾವುದೇ ಪುರಾವೆಯನ್ನು ತೆಗೆದುಕೊಳ್ಳಲಾಗಿಲ್ಲ. ಈ ರೀತಿ ಪ್ರಮಾಣಪತ್ರಗಳನ್ನು ಪಡೆದ ವ್ಯಕ್ತಿಗಳ ಹೆಸರುಗಳ ಪಟ್ಟಿ ಮತ್ತು ಅದರೊಂದಿಗೆ ನೀಡಲಾದ ದಾಖಲೆಗಳನ್ನು ತಹಸೀಲ್ದಾರ್ ಮತ್ತು ಉಪವಿಭಾಗೀಯ ಕಚೇರಿಗಳು ಕೂಡಲೇ ಪೊಲೀಸರಿಗೆ ಸಲ್ಲಿಸಬೇಕು.
3. ಜನ್ಮ ದಿನಾಂಕಗಳು ವಿಭಿನ್ನವಾಗಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧ ತಕ್ಷಣವೇ ದೂರು ದಾಖಲಿಸುವಂತೆ ಸರಕಾರ ನಿರ್ದೇಶನ ನೀಡಿದೆ.
4. ಆಗಸ್ಟ್ ೧೧, ೨೦೨೩ ರಂದು ‘ಜನನ ಮತ್ತು ಮರಣ ನೋಂದಣಿ ಕಾಯಿದೆ, ೧೯೬೯’ ಗೆ ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯ ನಂತರ ನೀಡಲಾದ ಜನನ-ಮರಣ ಪ್ರಮಾಣಪತ್ರಗಳನ್ನು ಸರಕಾರ ಪರಿಶೀಲಿಸಲಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಅನ್ನು ಯಾವುದೇ ಪ್ರಕರಣದಲ್ಲಿ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ.
ಕಾರ್ಯಾಚರಣೆ ತಕ್ಷಣವೇ ಪೂರ್ಣಗೊಳಿಸಬೇಕು!ನವೆಂಬರ್ ೧೧, ೨೦೨೫ ರಂದು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ನಡೆಸಿದ ಸಭೆಯಲ್ಲಿ, ಆಧಾರ್ ಕಾರ್ಡ್‌ಗಳ ಆಧಾರದ ಮೇಲೆ ನೀಡಲಾದ ಪ್ರಮಾಣಪತ್ರಗಳ ಪರಿಶೀಲನೆಯ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ನೀಡಲಾಗಿತ್ತು; ಆದರೆ ಆರೋಗ್ಯ ಇಲಾಖೆಯಿಂದ ಕಾರ್ಯಾಚರಣೆಗೆ ವಿಳಂಬವಾಗುತ್ತಿರುವುದರಿಂದ, ಈ ಕೆಲಸವನ್ನು ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್‌ಗಳಿಗೆ ವಹಿಸಲಾಗಿದೆ. ಈ ಕೆಲಸವನ್ನು ತಕ್ಷಣವೇ ಪೂರ್ಣಗೊಳಿಸುವಂತೆ ಸರಕಾರ ಆದೇಶ ನೀಡಿದೆ. |
ಸಂಪಾದಕೀಯ ನಿಲುವುಕೇವಲ ಪ್ರಕರಣ ದಾಖಲಿಸದೆ, ಸಮಾಜಕ್ಕೆ ಮೋಸ ಮಾಡಿದ ಕಾರಣ ಇಂತವರಿಗೆ ಆಜೀವ ಕಾರಾಗೃಹ ಶಿಕ್ಷೆ ವಿಧಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!