ಗೀತೆಯಲ್ಲಿನ ಪವಿತ್ರ ಶ್ಲೋಕಗಳು ಪ್ರತಿ ಪೀಳಿಗೆಗೂ ನಿಷ್ಕಾಮ ಕರ್ಮದ ಸ್ಫೂರ್ತಿಯನ್ನು ನೀಡುತ್ತಾ ಇರುತ್ತವೆ! : Geeta Jayanti

ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೀತಾ ಜಯಂತಿಯ ನಿಮಿತ್ತ ಶುಭಾಶಯಗಳು!

ನವದೆಹಲಿ – ‘ದೇಶಾದ್ಯಂತದಲ್ಲಿನ ನನ್ನ ಎಲ್ಲಾ ಕುಟುಂಬಗಳಿಗೆ ಶ್ರೀಮದ್ಭಗವದ್ಗೀತೆಯ ಅವತರಣಿಕೆಗೆ ಸಂಬಂಧಿಸಿದ ಪವಿತ್ರ ದಿನವಾದ ‘ಗೀತಾ ಜಯಂತಿ’ಯ ಹೃತ್ಪೂರ್ವಕ ಶುಭಾಶಯಗಳು. ಕರ್ತವ್ಯಪಾಲನೆಯ ಅಮೂಲ್ಯ ಸಂದೇಶಗಳಿಂದ ಸುಶೋಭಿತವಾದ ಈ ದಿವ್ಯ ಗ್ರಂಥವು ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ, ಸಮಾಜ ಜೀವನದಲ್ಲಿ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಅತ್ಯಂತ ವಿಶೇಷ ಸ್ಥಾನವನ್ನು ಪಡೆದಿದೆ. ಅದರ ಪವಿತ್ರ ಶ್ಲೋಕಗಳು ಪ್ರತಿ ಪೀಳಿಗೆಗೂ ನಿಷ್ಕಾಮ ಕರ್ಮದ ಸ್ಫೂರ್ತಿಯನ್ನು ನೀಡುತ್ತಾ ಇರುತ್ತವೆ.

ಜೈ ಶ್ರೀಕೃಷ್ಣ!’, ಈ ಮಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ೧ ರಂದು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡುವ ಮೂಲಕ ಗೀತಾ ಜಯಂತಿಯ ನಿಮಿತ್ತ ಭಾರತೀಯರಿಗೆ ಶುಭಾಶಯಗಳನ್ನು ತಿಳಿಸಿದರು.