ದೆಹಲಿ ಪೊಲೀಸರಿಂದ 3 ಭಯೋತ್ಪಾದಕರ ಬಂಧನ Delhi Terrorist Arrested

ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದರು!

ನವದೆಹಲಿ – ದೆಹಲಿ ಪೊಲೀಸರು 3 ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಈ ಭಯೋತ್ಪಾದಕರು ನೇರವಾಗಿ ಪಾಕಿಸ್ತಾನದ ಹ್ಯಾಂಡ್ಲರ್‌ಗಳ (ಏಜೆಂಟ್) ಸಂಪರ್ಕದಲ್ಲಿದ್ದರು. ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಅವರಿಗೆ ಐಎಸ್‌ಐನಿಂದ (ಇಂಟರ್ ಸರ್ವೀಸ್ ಇಂಟಲಿಜೆನ್ಸ್ – ಪಾಕಿಸ್ತಾನದ ಗುಪ್ತಚರ ಸಂಸ್ಥೆ) ದಾಳಿಯ ಆದೇಶಗಳು ಬರುತ್ತಿದ್ದವು. ಅವರು ದೆಹಲಿ-ಎನ್‌.ಸಿ.ಆರ್‌.ನಲ್ಲಿ (ನ್ಯಾಷನಲ್ ಕ್ಯಾಪಿಟಲ್ ರೀಜನ್ – ‘ರಾಷ್ಟ್ರೀಯ ರಾಜಧಾನಿ ಪ್ರದೇಶ’ದಲ್ಲಿ) ದೊಡ್ಡ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು.

https://twitter.com/SanatanPrabhat/status/1995190220061618411?ref_src=twsrc%5Etfw%7Ctwcamp%5Etweetembed%7Ctwterm%5E1995190220061618411%7Ctwgr%5E7d9960136e167571bbf7629aeb9cd6c7783bb903%7Ctwcon%5Es1_c10&ref_url=https%3A%2F%2Fsanatanprabhat.org%2Fmarathi%2F982177.html

ಈ ಭಯೋತ್ಪಾದಕರು ಪಂಜಾಬ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಸ್ಲಿಂ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗಾಗಿ ನೇಮಕ ಮಾಡಿಕೊಳ್ಳುತ್ತಿದ್ದರು. ಈ ಭಯೋತ್ಪಾದಕ ಜಾಲವನ್ನು ಪಾಕಿಸ್ತಾನದ ಕುಖ್ಯಾತ ರೌಡಿ ಶಹಜಾದ್ ಭಟ್ಟಿ ನಡೆಸುತ್ತಿದ್ದಾನೆ ಎಂಬ ಮಾಹಿತಿ ಬಯಲಾಗಿದೆ. ‘ಭಟ್ಟಿ ಐಎಸ್‌ಐ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಾನೆ’ ಎಂದು ಪೊಲೀಸರು ಹೇಳಿದ್ದಾರೆ. ಭಟ್ಟಿ ಕೆಲ ತಿಂಗಳ ಹಿಂದೆ ಪಂಜಾಬ್‌ನಲ್ಲಿ ಭಾಜಪ ನಾಯಕರೊಬ್ಬರ ಮನೆಯ ಹೊರಗೆ ನಡೆದ ಗ್ರೆನೇಡ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ.

ಸಂಪಾದಕೀಯ ನಿಲುವು

ಭಾರತದ ರಾಜಧಾನಿ ಭಯೋತ್ಪಾದಕರ ಕೃತ್ಯಗಳ ಅಡ್ಡೆಯಾಗುತ್ತಿರುವುದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ!